ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಇತಿಹಾಸವು ಸ್ವಾತಂತ್ರ್ಯ ಹೋರಾಟದ ದಿನ ಗಳದ್ದು,.. ‘ ಎಂದು ಕಾಂಗ್ರೆಸ್ ಮುಖಂಡ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ. ಜೂ.8ರಂದು ಸೋನಿಯಾ ಗಾಂಧಿ ಅವರು ಇ.ಡಿ. ಕಚೇರಿಗೆ ಹೋಗು ವುದಾಗಿ ತಿಳಿಸಿದ್ದಾರೆ.
‘ಜಾರಿ ನಿರ್ದೇಶನಾಲಯವು ಪ್ರಕರಣವನ್ನು 2015ರಲ್ಲೇ ಮುಕ್ತಾಯಗೊಳಿಸಿದೆ. ಆದರೆ, ಸರ್ಕಾರವು ಹೊಸ ಅಧಿಕಾರಿಗಳನ್ನು ನಿಯೋಜಿಸಿ ಪ್ರಕರಣದ ತನಿಖೆಯನ್ನು ಮತ್ತೆ ಆರಂಭಿಸಿದೆ. ಹಣದುಬ್ಬರ ಮತ್ತು ಇತರೆ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ಮಾಡಲಾಗಿದೆ’ ಎಂದು ಸಿಂಘ್ವಿ ಆರೋಪಿಸಿರುವುದಾಗಿ ವರದಿ ಮಾಡಿದೆ.
ಹಗರಣವು ಈಕ್ವಿಟಿ ವಹಿವಾಟಿನಲ್ಲಿ ₹2,000 ಕೋಟಿ ಆಸ್ತಿಯ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದ್ದಾಗಿದೆ.