ಚಿಕ್ಕನಾಯಕನಹಳ್ಳಿ : ರೋಹಿತ್ ಚಕ್ರತೀರ್ಥನಿಗೆ ಹುದ್ದೆ ದಯ ಪಾಲಿಸಲೇಬೇಕು ಎಂದು ಬಿಜೆಪಿಯವರಿಗೆ ಅನಿಸಿದರೆ ಅವ ನನ್ನು ತೋಟದಲ್ಲಿ ನೀರು ಹಾಯಿಸಲು, ಕಾಯಿ ಕೀಳಲು ಇಟ್ಟುಕೊಳ್ಳಲಿ. ಮಕ್ಕಳ ಭವಿಷ್ಯವನ್ನು ರೂಪಿಸುವ ಪಠ್ಯ ಪುಸ್ತಕಗಳ ಪರಿಷ್ಕರಣಾ ಸಮಿತಿಗೆ ನಿಯೋಜಿಸಿರುವುದು ಕನ್ನಡದ ಸಾಂಸ್ಕೃತಿಕ ರಂಗ ಕಳವಳಗೊಂಡಿದೆ ಎಂದು ಮಾಜಿ ಜಿ.ಪಂ ಸದಸ್ಯ ರಾಮಚಂದ್ರಯ್ಯ ಆತಂಕ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಒಕ್ಕಲಿಗ ಮುಖಂಡರು, ಸಾಹಿತಿಗಳು, ಪ್ರಗತಿಪರರು ಹಾಗು ವಿವಿಧ ಸಮು ದಾಯಗಳ ಮುಖಂಡರು ಆಯೋಜಿಸ ಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತ ನಾಡಿದರು.
ಪಕ್ಷದಲ್ಲಿ ದುಡಿದ ಕಾರ್ಯಕರ್ತರನ್ನು ಇತರೆ ನಿಗಮ ಮಂಡಳಿಗಳಲ್ಲಿ ನೇಮಿಸುವಂತೆ ಪಠ್ಯ ಪುಸ್ತಕಗಳ ಪರಿಷ್ಕರಣ ಸಮಿತಿಯಲ್ಲಿ ನೇಮಿಸಲು ಇದು ಪುನರ್ವಸತಿ ಕೇಂದ್ರವಲ್ಲ, ಈ ಹುದ್ದೆಯು ತನ್ನದೆ ಆದ ಘನತೆ ಹೊಂದಿದ್ದು, ಸರಕಾರಗಳು ಪರಾಮರ್ಶಿಸಿ ಆಯ್ಕೆ ಮಾಡಬೇಕೆಂದು ಸರಕಾರಕ್ಕೆ ಚಾಟಿ ಬೀಸಿದರು.
ಪ್ರಗತಿಪರ ರೈತ ಷಡಕ್ಷರಿ ಮಾತನಾಡಿ ರಾಷ್ಟçಕವಿ ಕುವೆಂಪು ಅವರ ನಾಡಗೀತೆಯನ್ನು ತಿರುಚಿ ಅವರಿಗೆ ಅವಮಾನ ಮಾಡಿ, ಕನ್ನಡದ ಧ್ವಜವನ್ನು ಲಂಗೋಟಿಗೆ ಹೋಲಿಸಿರುವ ರೋಹಿತ್ ಚಕ್ರತೀರ್ಥನನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿಕೊಳ್ಳುವ ಮೂಲಕ ಕನ್ನಡಿಗರಿಗೆ ಬಿಜೆಪಿ ಸರಕಾರ ಅವಮಾನ ಮಾಡಿದೆ.
ಬ್ರಾಹ್ಮಣೇತರರು, ದಲಿತರು, ಮುಸಲ್ಮಾನರನ್ನು ತೆಗಳಿ ಹುದ್ದೆ ಸಂಪಾದಿಸಿರುವ ಇವನಿಂದ ನಮ್ಮ ಮಕ್ಕಳು ಇತಿಹಾಸದ ಪಾಠ ವನ್ನು ಕಲಿತುಕೊಳ್ಳುವ ಅವಶ್ಯಕತೆಯಿಲ್ಲ. ಜಗಜ್ಯೋತಿ ಬಸವೇಶ್ವರರ ಹುಟ್ಟನ್ನು ಪ್ರಶ್ನಿಸಿರುವ ಇವನನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನೋಡಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಮಕ್ಕಳ ಕೈಗೆ ರೋಹಿತ್ ಚಕ್ರತೀರ್ಥನ ಪುಸ್ತಕ ಬೇಡ
ರೋಹಿತ್ ಚಕ್ರತೀರ್ಥ ಪರಿಷ್ಕರಿಸುವ ಪುಸ್ತಕವನ್ನು ಸರಕಾರ ಮಕ್ಕಳಿಗೆ ನೀಡದೆ ಹಳೆಯ ಮಾದರಿಯ ಪುಸ್ತಕಗಳನ್ನೇ ನೀಡಬೇಕು. ಇವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾಗಿನಿಂದಲೂ ವಿವಾದ ಆರಂಭವಾಗಿದ್ದು ಸರಕಾರ ಖರ್ಚಿನ ಬಗ್ಗೆ ಚಿಂತಿಸದೆ ಪುಸ್ತಕವನ್ನು ವಾಪಸ್ ಪಡೆದು ಮಕ್ಕಳಿಗೆ ಈ ಹಿಂದಿನ ಪಠ್ಯ ಪುಸ್ತಕಗಳನ್ನು ರವಾನೆ ಮಾಡಿ ಎಂದು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಒತ್ತಾಯಿಸಿದರು.
ಒಕ್ಕಲಿಗ ಮುಖಂಡರಾದ ಡಾ.ಪರಮೇಶ್ವರಪ್ಪ, ಹರೀಶ್, ಕೃಷ್ಣೇಗೌಡ, ಪ್ರಗತಿಪರರಾದ ಸಿ.ಡಿ.ಚಂದ್ರಶೇಖರ್, ಸೀಮೆಎಣ್ಣೆ ವಿನಯ್, ಗಂಗಾಧರ್ ಮಾತನಾಡಿದರು. ರೋಹಿತ್ ಚಕ್ರತೀರ್ಥ ಅವರನ್ನು ಕೂಡಲೇ ಬಂಧಿಸಿ, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕೆಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬ್ರಹ್ಮಾನಂದ್, ಶೇಖರ್, ನಿಶಾನಿ ಕಿರಣ್, ಶಿವಕುಮಾರ್, ಗೋವಿಂದರಾಜು, ನಾಗರಾಜ್, ಪ್ರಸನ್ನ, ಮುಜ್ಜು, ಶಿವಣ್ಣ ಲೋಕೇಶ್ ಇದ್ದರು.