ಬೆಂಗಳೂರು;
ಬಾಣಸವಾಡಿ ಹಾಗೂ ಕೆ ಆರ್ ಪುರಂ ಉಪವಿಭಾಗಳಲ್ಲಿ ನಡೆಸಿದ ಧಿಡೀರ್ ಕಾರ್ಯಾಚರಣೆಯಲ್ಲಿ 155 ಲೀಟರ್ ಸೇಂದಿ ವಶಪಡಿಸಿಕೊಂಡ ನಾಶ ಪಡಿಸಲಾಯಿತು,
ಕೃತ್ಯಕ್ಕೆ ಬಳಸುತ್ತಿದ್ದ ಒಂದು ಆಟೋ ರಿಕ್ಷಾ, ಎರಡು ದ್ವಿಚಕ್ರವಾಹನ ವಶಪಡಿಸಿಕೊಂಡು ದೂರು ದಾಖಲಿಸಿಕಿಕೊಂಡು ತನಿಖೆ ನಡೆಸಲಾಗುತ್ತಿದ್ದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತ ಎ ಎಲ್ ನಾಗೇಶ್ ತಿಳಿಸಿದರು. ತಿಳಿಸಿದರು.
ಇಂದು ಅಬಕಾರಿ ಉಪ ಆಯುಕ್ತರು ಬೆಂಗಳೂರು ನಗರ ಜಿಲ್ಲೆ (ಪೂರ್ವ) ಎ ಎಲ್ ನಾಗೇಶ್ ರವರ ನಿರ್ದೇಶನದಂತೆ ದಾಳಿನಡೆದಿದೆ.
ತಂಡ ಹೀಗಿದೆ,
ಶಿವಕುಮಾರ ಎಸ್. ಬಾಣಸವಾಡಿ, ಸುರೇಶ ಆರ್. ಇಂದುಕುಮಾರ ಅರುಣ, ಅಶೋಕ ಸಾವಳಗಿ ಮತ್ತು ಇತರೆ ಸಿಬ್ಬಂದಿಯೊಂದಿಗೆ ಬಾಣಸವಾಡಿ , ಕೆ.ಆರ್.ಪುರಂ ವಲಯದ ವ್ಯಾಪ್ತಿಯ ಕಾಡುಸೊಣ್ಣಪ್ಪನಹಳ್ಳಿ, ಹೊಸೂರು ಬಂಡೆ, ಬಿ.ಎಂ.ಆಂಗ್ಲ ಶಾಲೆ ರಸ್ತೆ, ರಾಯಲ್ ಓಕ್, ಚಾಗಲೇಟಿ, ಮಾರೇನಹಳ್ಳಿ, ಚೋಕಹಳ್ಳಿ, ಕಾಡು ಅಗ್ರಹಾರ, ಬೊಮ್ಮನಹಳ್ಳಿ, ಬೂದಿಗೆರೆ ಕ್ರಾಸ್, ಹಿರೆಂಡಹಳ್ಳಿ, ಇತ್ಯಾದಿ ಸ್ಥಳಗಳಲ್ಲಿ ಸಾಮೂಹಿಕ ಅಬಕಾರಿ ದಾಳಿಯನ್ನು ನಡೆಸಲಾಯಿತು.