Sunday, 24th November 2024

ಡಿಪ್ಲಮೋ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸು ಆರಂಭ

ತುಮಕೂರು: ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಿಂದ ಮೂರು ವರ್ಷದ ಡಿಪ್ಲಮೋ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸು ಆರಂಭಿಸಿದ್ದು, ಇದು ಶೇ100ರಷ್ಟು ಉದ್ಯೋಗ ಪಡೆಯುವ ಕೋರ್ಸ್ ಆಗಿದೆ ಎಂದು ಡಿಪ್ಲಮೋ ಕಾಲೇಜಿನ ಪ್ರಾಂಶುಪಾಲ ಗುರುಪ್ರಸನ್ನ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸರಕಾರಿ ಡಿಪ್ಲಮೋ ಕಾಲೇಜುಗಳಲ್ಲಿ ನಮ್ಮಲ್ಲಿ ಮಾತ್ರ ಶೇ 100ರ ಜಾಬ್ ಕರ್ನಪಮ್ ಇರುವ ಕೋರ್ಸು ಇದಾಗಿದೆ.ಎಸ್.ಎಸ್.ಎಲ್.ಸಿಯಲ್ಲಿ ಪಾಸಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ. ಈ ಬಾರಿ ಮೊದಲು ಬಂದವರಿಗೆ ಅದ್ಯತೆ ಎಂಬ ನಿಯಮದ ಅಡಿಯಲ್ಲಿ ಪ್ರವೇಶಾತಿ ನೀಡಲಾಗುತ್ತಿದೆ. ಈ ಕೋರ್ಸಿಗೆ ಸೇರುವ ಒಬಿಸಿ ವಿದ್ಯಾರ್ಥಿಗೆ ವಾರ್ಷಿಕ 30 ಸಾವಿರ ಮತ್ತು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 35 ಸಾವಿರ ರೂ ವಿದ್ಯಾರ್ಥಿವೇತನವನ್ನು ವಿದ್ಯಾಸಿರಿ ಯೋಜನೆಯನ್ನು ನೀಡಲಾ ಗುವುದು ಎಂದರು.

ಕಳೆದ 2009ರಿಂದ ನಮ್ಮ ಕಾಲೇಜಿನಲ್ಲಿ ಈ ಕೋರ್ಸು ಆರಂಭಿಸಲಾಗಿದ್ದು, ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿ ಗಳು ವಿವಿಧ ಕಂಪನಿಗಳಲ್ಲಿ ನೌಕರರಾಗಿ ಸೇರಿ ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಇನ್ನೂ ಕೆಲವರು,ಇಂಜಿನಿಯರಿ0ಗ್‌ನಲ್ಲಿ ಮೇಕಾನಿಕಲ್ ವಿಭಾಗಕ್ಕೆ ಸೇರಿ ಉನ್ನತ ಶಿಕ್ಷಣ ಪಡೆದು, ಉದ್ಯಮಿಗಳಾಗಿ, ಸರಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು,ಶೇ.65ರ ಪ್ರಾಯೋಗಿಕ ಮತ್ತು ಶೇ.35ರ ಭೋದಕ ರೀತಿಯಲ್ಲಿ ಕಲಿಸಲಾಗುತ್ತಿದ್ದು, ಕೊನೆಯ ಒಂದು ವರ್ಷ ಹತ್ತಿರದ ಕೈಗಾರಿಕೆಗಳಲ್ಲಿ ಕಲಿಕೆ ಮತ್ತು ಗಳಿಕೆ ರೀತಿಯಲ್ಲಿ ಕೆಲಸ ಮಾಡುತ್ತಲೇ ಸದರಿ ಕಂಪನಿಗೆ ಅಗತ್ಯವಿರುವ ಕೌಶಲ್ಯವನ್ನು ಕಲಿಸುವ ಕೆಲಸ ಇದಾಗಿದೆ. ಈ ವೇಳೆಯಲ್ಲಿ ತಿಂಗಳಿಗೆ 10-12 ಸಾವಿರ ಶಿಷ್ಯವೇತನ ಪಡೆಯಬಹುದಾಗಿದೆ ಎಂದು ಗುರುಪ್ರಸನ್ನ ವಿವರಿಸಿದರು.

ಸರಕಾರದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಆಸಕ್ತರಿಗೆ ನಮ್ಮ ಕಾಲೇಜಿನಿಂದ 2 ರಿಂದ 4 ತಿಂಗಳ ಉಚಿತ ತಾಂತ್ರಿಕ ತರಬೇತಿ ಗಳನ್ನು ನೀಡಲಾಗುತ್ತಿದೆ. ಈ ವೇಳೆ ಬಸ್ ಪಾಸ್‌ಗೂ ಅವ್ಯವಸ್ಥೆ ಕಲ್ಪಿಸಲಿದೆ.ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಅದ್ಯತೆ ನೀಡಲಾಗುವುದು.

ಇದರ ಜೊತೆಗೆ ಖಾಸಗಿಯಾಗಿ ಪಿಟಿಸಿ ಅಡಿಯಲ್ಲಿ ಕ್ಯಾಡ್ & ಪಿಎಲ್‌ಎಂ, ಆಟೋಮೇಷನ್,ಕ್ಯಾಮ್ ಎನ್.ಸಿ., ಕ್ಯಾಡ್, ಸಿ.ಎಇ & ಪಿಎಲ್‌ಎಂ, ಆರ್.ಪಿ.ಟಿ, ಕ್ಯಾಡ್, ಎ.ಆರ್., ಐಓಟಿ ಸೇರಿದಂತೆ ಎಂಟು ಲ್ಯಾಬ್‌ಗಳನ್ನು ಆರಂಭಿಸಿದ್ದು, 50 ಗಂಟೆಗಳ ಕೋರ್ಸ್ಗೆ 2000 ರೂ ಹಾಗೂ 100 ಗಂಟೆಗಳ ಕಲಿಕೆಗೆ 4000 ರೂಗಳು, ಅದಕ್ಕಿಂತ ಹೆಚ್ಚಿನ ಕಲಿಕೆಗೆ ರಿಯಾಯಿತಿ ಮೂಲಕ ಲ್ಯಾಬ್ ಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಾಂಶುಪಾಲ ಗುರುಪ್ರಸನ್ನ ತಿಳಿಸಿದರು