Saturday, 14th December 2024

ಲಾಕ್ ಡೌನ್‌ ನಡುವೆಯೂ ಭಟ್ಟರ ಶೂಟಿಂಗ್

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಲಾಕ್ ಡೌನ್ ನಡುವೆಯೂ ನಿರ್ದೇಶಕ ಯೋಗರಾಜ್​ ಭಟ್ ಗುರುವಾರ ಬೀದಿಗಿಳಿದು ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಆದರೆ ಇದು ಯಾವುದೋ ಸಿನಿಮಾಗಾಗಿ ಅಲ್ಲ. ಡ್ಯಾಕ್ಯುಮೆಂಟರಿ ಮಾಡುವ ಸಲುವಾಗಿ ಅಷ್ಟೇ.
ಹೌದು ಯೋಗರಾಜ್ ಭಟ್ರು ಪೊಲೀಸ್​ ಇಲಾಖೆಯ ಸಿಬ್ಬಂದಿಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಕರೋನಾ ಲಾಕ್ ಡೌನ್ ನಡುವೆ ಪೊಲೀಸ್ ಸಿಬ್ಬಂದಿ ಕೆಲಸದ ಜಾಗೃತಿಗಾಗಿ ಚಿತ್ರೀಕರಣ ಮಾಡಲಾಯಿತು. ಕಮಿಷನರ್​ ಭಾಸ್ಕರರಾವ್​ ಸೇರಿದಂತೆ ಇಲಾಖೆಯ ಕೆಲ ಅಧಿಕಾರಿಗಳ ಕೆಲಸದ ಬಗ್ಗೆ ಡಾಕ್ಯುಮೆಂಟರಿ ಚಿತ್ರೀಕರಣ ನಡೆಯುತ್ತಿದ್ದು, ಸ್ವತಃ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ.
ನಗರದ ಟೌನ್​ಹಾಲ್​ ಮುಂಭಾಗದಲ್ಲಿ ಶೂಟಿಂಗ್​ ನಡೆಯುತ್ತಿದ್ದು, ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸಹ ಜಾಗೃತಿ ವಿಡಿಯೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಭಾಸ್ಕರ ರಾವ್, ಭಟ್ರು ಶೂಟಿಂಗ್​ಗೆ ನಾನೇ ಅನುಮತಿ ಕೊಟ್ಟಿದೀನಿ. ಅವರು ಪೊಲೀಸರ ಸೇವೆ ಕುರಿತು ಜಾಗೃತಿ ಡಾಕ್ಯುಮೆಂಟರಿ ಮಾಡುತ್ತಿರುವುದರಿಂದ ಅನುಮತಿ ಕೊಟ್ಟಿದ್ದೇವೆ ಎಂದರು.