Sunday, 15th December 2024

ಪಾದರಾಯನಪುರ ಘಟನೆ: 150 ಜನರ ವಿಚಾರಣೆ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು:

ಪಾದರಾಯನಪುರದಲ್ಲಿ ನಡೆದ ಗಲಾಟೆಯ ಸಂಬಂಧ ಈಗಾಗಲೇ 150ಕ್ಕೂ ಕ್ಕೂ ಹೆಚ್ಚು ಮಂದಿ ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಇನ್ನು 20 ಮಂದಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ರಾಮನಗರದ ಜೈಲಿನಲ್ಲಿ ಅಗತ್ಯ ಭದ್ರತಾ ಸೌಲಭ್ಯಗಳನ್ನು ಹೊಂದಿದ್ದು, ಸುಮಾರು 150-200 ಜನರ ವಸತಿಗೆ ಆಗುವಷ್ಟು ಜಾಗವಿದೆ. ಸದ್ಯ ಪಾದರಾಯನಪುರ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಇಡೀ ಜೈಲು ಸರಿಯಾಗಲಿದೆ. ಕೇವಲ ಅವರನ್ನು ಮಾತ್ರವೇ ಜೈಲಿನಲ್ಲಿ ಇಟ್ಟುಕೊಳ್ಳುವ ಕಾರಣ ಅವರಲ್ಲಿ ಸೋಂಕು ಸಾಧ್ಯತೆಗಳು ಇದ್ದಲ್ಲಿ ಇತರರಿಗೆ ಹರಡುವುದು ತಪ್ಪುತ್ತದೆ. ಆರೋಗ್ಯದ ಮೇಲೆ, ಅವರ ಇಡೀ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು ಅನುಕೂಲ ಆಗುತ್ತದೆ.
ಇನ್ನೂ ಪಾದರಾಯನಪುರ ವಾರ್ಡ್‌ನ ಮೂಲೆ ಮೂಲೆಗಳಲ್ಲೂ ಪೊಲೀಸರೇ ಕಾಣಿಸುತ್ತಿದ್ದು ನಿತ್ಯ ಹಾಲು, ದಿನಸಿಗಾಗಿ ಹೊರ ಬರುತ್ತಿದ್ದವರೂ, ಪೊಲೀಸ್‌ ಸರ್ಪಗಾವಲು ಗಮನಿಸಿ ಮನೆಯ ಒಳಗಿನಿಂದಲೇ ಇಣುಕಿ ನೋಡುತ್ತಿದ್ದು ಹೊರಬರಲು ಭಯ ಪಡುತ್ತಿದ್ದಾರೆ. ಇಡೀ ಪ್ರದೇಶದಲ್ಲಿ ಪೊಲೀಸ್ ಪಡೆ ಮೂರು ಸುತ್ತು ಪಥ ಸಂಚಲನ ನಡೆಸಿದರು. ಯಾರಾದರೂ ಮನೆಯಿಂದ ಹೊರಗಡೆ ಬಂದರೆ ಅವರನ್ನು ಬಂಧಿಸಿ ಜೈಲಿಗಟ್ಟುವುದಾಗಿ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದ್ದಾರೆ.