ಸಿರವಾರ : ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಚಾರಕಿಯಾಗಿ ಕಾರ್ಯನಿರ್ವಹಿಸಿದ ಮಹಾದೇವಮ್ಮ ಅವರು ವಯೋ ನಿವೃತ್ತಿ ಹೊಂದಿದ ಸಂದರ್ಭವಾಗಿ ಪ.ಪಂಚಾಯತಿ ಮಾಜಿ ಸದಸ್ಯ ದೇವೆಂದ್ರಪ್ಪ ಸುಂಕೇಶ್ವರಹಾಳ ಸನ್ಮಾನಿದರು.
ನಂತರ ಮಾತನಾಡಿದ ಪ.ಪಂ ಮಾಜಿ ಸದಸ್ಯ ದೇವೆಂದ್ರಪ್ಪ ಸುಂಕೇಶ್ವರಹಾಳ ಅವರು ಆಸ್ಪತ್ರೆಗೆ ಬರುವ ರೋಗಿಗಳಿಗೆ, ಇನ್ನಿತರ ರಿಗೆ ಮಹಾದೇವಮ್ಮ ಅವರು ಸೇವೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಸರ್ಕಾರಿ ನೌಕರರಿಗೆ ನಿವೃತ್ತಿ ಸಹಜ ನೌಕರಿ ಮಾಡುವಾಗ ನಾವು ಮಾಡಿದ ಸೇವೆಯೆ ಕೊನೆಗೆ ಉಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಹಡಪದ ಸಮಾಜದ ನಗರ ಘಟಕ ಅಧ್ಯಕ್ಷ ಚಂದ್ರು ಹಡಪದ, ಕಾರ್ಯದರ್ಶಿ ಬಸವರಾಜ ಹರವಿ, ಹೆಚ್.ಕೆ. ಬಸವರಾಜ ಸೇರಿದಂತೆ ಇನ್ನಿತರರಿದ್ದರು.