ಹರಪನಹಳ್ಳಿ: ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳು ಮಾಡುತ್ತಿವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಮಕ್ಕಳಂತೆ ಪೋಷಿಸಿದಾಗ ಪರಿಸರವನ್ನು ಉಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾದ ಎ. ಭಾರತಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ತಾಲೂಕು ಪ್ರಾದೇಶಿಕ ವಲಯ ಅರಣ್ಯ, ೭೫ನೇ ಸ್ವಾತಂತ್ರö್ಯದ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮಹೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಕಾರ್ಯಕ್ರಮದಲ್ಲಿ ಸಸಿ ನೇಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು.
ವಾಯುಮಾಲಿನ್ಯ : ವಾಯು ಜೀವಧಾತು ಗಾಳಿಯಿಲ್ಲಿದಿದ್ದರೆ ಜೀವಸಂಕುಲ ಒಂದು ಕ್ಷಣವೂ ಈ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲಿಂತಹ ವಾಯು ವಿಷವಾಗುತ್ತಿದೆ. ಶಬ್ದಮಾಲಿನ್ಯ ಅತಿಯಾದ ಶಬ್ದ ಮನುಷ್ಯನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದೆ, ವಾಹನ ದಟ್ಟಣೆ, ಕೈಗಾರಿಕೆ, ಯಂತ್ರಗಳು , ಧ್ವನಿವರ್ಧಕಗಳು ಶಬ್ದಮಾಲಿನ್ಯಕ್ಕೆ ಮೂಲ ಕಾರಣಗಳು ಇಂದು ಮಧುಮೇಹ, ರಕ್ತದೊತ್ತಡದಂತ ಖಾಯಿಲೆಗಳು ಹೆಚ್ಚಾಗುತ್ತಿವೆ ಇದಕ್ಕೆ ನಮ್ಮ ಜೀವನ ಶೈಲಿ ಆಹಾರ ಕ್ರಮಗಳ ಜೊತೆಗೆ ಅತಿಯಾದ ಶಬ್ದವೂ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾದ ಫಕ್ಕಿರವ್ವ ಕೆಳಗೇರಿ, ವಲಯ ಅರಣ್ಯಾಧಿಕಾರಿ ಮಲ್ಲಪ್ಪ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ. ವಾಸುದೇವಾ ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ಖಾಜಾಂಚಿ ಹುಲಿಯಪ್ಪ, ಸಹಾಯಕ ಅಭಿಯೋಜಕರಾದ ಎನ್. ಮೀನಾಕ್ಷಿ , ನಿರ್ಮಲ ಡಿ. ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಹಿರಿಯ ವಕೀಲರಾದ ಕೆ. ಚಂದ್ರಗೌಡ, ಎಸ್.ಎಂ.ರುದ್ರಮನಿ, ಗಂಗಾಧರ್ ಗುರುಮಠ್, ಬಿ. ಗೋಣಿಬಸಪ್ಪ , ಬಂಡ್ರಿ ಆನಂದ, ಎಂ ಮೃತಂಜಯ್ಯ, ಬಾಗಳಿ ಮಂಜುನಾಥ್, ಎಂ. ಮಂಜುನಾಥ್, ಕೆ. ಕೋಟ್ರೇಶ್, ಕೆ.ಪ್ರಕಾಶ್, ಎ. ಮಲ್ಲಪ್ಪ, ಬಿ.ಸಿದ್ದೇಶ್, ಮುತ್ತಿಗಿ ರೇವಣ್ಣ, ಉಪ ವಲಯ ಅರಣ್ಯಾಧಿಕಾರಿ ರಾಮೇಶ್ ಡಿ. ಠಾಥೋಡ ಅರಣ್ಯ ರಕ್ಷಕ ದುರುಗಪ್ಪ ಎಂ. ಕೋಟ್ರೇಶ್, ಬಸವರಾಜ್. ಮತ್ತು ಇತರರು ಉಪಸ್ಥಿತರಿದ್ದರು.