ಮುಂಬೈ: ಎಸ್ವಿಕೆಎಂ ನ ಎನ್ಎಂಐಎಂಎಸ್ ಮುಕೇಶ್ ಪಟೇಲ್ ಸ್ಕೂಲ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಆಂಡ್ ಇಂಜಿನಿಯರಿಂಗ್’ನ ಇಬ್ಬರು ವಿದ್ಯಾರ್ಥಿಗಳು ಅಮಜಾನ್ ಕಂಪನಿಯ ಡಬ್ಲಿನ್ ಕಚೇರಿಯಲ್ಲಿ 1.22 ಕೋಟಿ ರೂಪಾಯಿ ಪ್ಯಾಕೇಜ್ನ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಯೋಹಾನ್ ವಕಿಲ್ ಮತ್ತು ತನುಜ್ ಚನಿಯಾರಿ ಆಯ್ಕೆಯಾದ ವಿದ್ಯಾರ್ಥಿಗಳು. ಇಬ್ಬರೂ ಕಂಪ್ಯೂಟರ್ ಇಂಜಿನಿಯರಿಂಗ್ ಬಿಟೆಕ್ ಮಾಡುತ್ತಿದ್ದು, ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್ಗಳಾಗಿ ಐರ್ಲೆಂಡ್ನ ಡಬ್ಲಿನ್ನಲ್ಲಿರುವ ಅಮೆಜಾನ್ ಕಚೇರಿಯಲ್ಲಿ ಉದ್ಯೋಗಕ್ಕೆ ಸೇರಲಿದ್ದಾರೆ.
ಫಾರ್ಚ್ಯೂನ್ 500 ಕಂಪನಿಗಳಲ್ಲಿ ಎರಡನೇ ಸ್ಥಾನ ಮತ್ತು ಜಾಗತಿಕವಾಗಿ ಅಗ್ರ ಐದು ಅತ್ಯುತ್ತಮ ಉದ್ಯೋಗದಾತರ ಪಟ್ಟಿಯಲ್ಲಿರುವ ಅಮೆಜಾನ್ ಕಂಪನಿಯ ಬೃಹತ್ ಕಂಪ್ಯೂ ಟಿಂಗ್ ಪರಿಸರದಲ್ಲಿ ನವೀನ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವುದು, ನಿರ್ಮಿಸು ವುದು ಹಾಗೂ ಅವುಗಳನ್ನು ಮುನ್ನಡೆಸಲು ನೆರವು ಒದಗಿಸುವ ಮಹತ್ತರ ಉದ್ಯೋಗಕ್ಕಾಗಿ ಈ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ.
ಯೊಹಾನ್ ಮತ್ತು ತನುಜ್ ಅವರು ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ಸಾಫ್ಟ್ ಸ್ಕಿಲ್ಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದ್ದಾರೆ.