ತುಮಕೂರು: ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು, ಸರ್ವ ಜನಾಂಗಕ್ಕೂ ಸಮಾನ ಅವಕಾಶ ಕಲ್ಪಿಸುತ್ತಿದ್ದಾರೆ ಎಂದು ತುಮಕೂರು ಮಹಾನಗರಪಾಲಿಕೆ ನಾಮಿನಿ ಸದಸ್ಯ ನರಸಿಂಹಸ್ವಾಮಿ ತಿಳಿಸಿದರು.
ನಗರದ ಬೆಳಗುಂಬ ರಸ್ತೆಯಲ್ಲಿರುವ ಕರುನಾಡಮಿತ್ರ ಫೌಂಡೇಷನ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಹರಿಕಾರ ದಿ.ದೇವರಾಜ ಅರಸು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರ ಶಾಸಕರಾದ ಜ್ಯೋತಿಗಣೇಶ್ ಅವರು ಎಲ್ಲಾ ವರ್ಗಗಳನ್ನು ಒಮ್ಮತವಾಗಿ ತೆಗೆದುಕೊಂಡು ಹೋಗು ತ್ತಿದ್ದು, ಜಾತಿ ರಾಜಕಾರಣ, ಸ್ವಾರ್ಥ ರಾಜಕಾರಣ ಮಾಡದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಇತ್ತೀಚೆಗೆ ಹಿಂದುಳಿದ ವರ್ಗಗಳ ಕೆಲವು ಮುಖಂಡರು ವಿನಾಃ ಕಾರಣ ಹಿಂದುಳಿದ ವರ್ಗಗಳ ಸಮುದಾಯದವರನ್ನು ನಗರ ಶಾಸಕರು ಕಡೆಗಣಿಸಿದ್ದಾರೆ ಎಂಬ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಬಸವಾಪಟ್ಟಣದಲ್ಲಿ ದೇವರಾಜ ಅರಸು ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ನಗರ ಶಾಸಕರು ಹಿಂದುಳಿದ ವರ್ಗಗಳಿಗೆ ಆಹ್ವಾನಿಸಿಲ್ಲ ಎಂಬ ಆರೋಪ ಮಾಡಿದ್ದಾರೆ. ಬಸವಾಪಟ್ಟಣ ತುಮಕೂರು ಗ್ರಾಮಾಂತ ರಕ್ಕೆ ಸೇರಿದೆ. ನಗರ ಶಾಸಕರ ವ್ಯಾಪ್ತಿಗೆ ಇದು ಬರುವುದಿಲ್ಲ, ಇದನ್ನು ಅರಿಯದೇ ವಿನಾಃ ಕಾರಣ ಆರೋಪ ಮಾಡುವುದು ಸರಿಯಲ್ಲ, ತಿಳಿದುಕೊಂಡು ಮಾತನಾಡಲಿ ಎಂದು ಹೇಳಿದರು.
ಆಶ್ರಯ ಸಮಿತಿಗೆ, ಮಹಾನಗರಪಾಲಿಕೆಗೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತು ತುಮಕೂರು ವಿವಿ ಸಿಂಡಿಕೇಟ್‌ಗೆ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಜಾತಿ, ಧರ್ಮ ಎಂಬ ಬೇಧ ಭಾವ ಮಾಡದೆ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಿದ್ದಾರೆ ಎಂದರು.
ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಜೆ.ಜಗದೀಶ್ ಮಾತನಾಡಿ, ಹಿಂದುಳಿದ ವರ್ಗಗಳ ಹರಿಹಾರ ದಿ. ಡಿ.ದೇವರಾಜ ಅರಸು ನಂತರ ತುಮಕೂರು ನಗರದಲ್ಲಿ ಒಬಿಸಿ ಜನಾಂಗ ಮತ್ತು ಪರಿಶಿಷ್ಟ ಜಾತಿ, ಪಂಗಡ ಜನಾಂಗಗಳನ್ನು ಕೈಹಿಡಿದಂತಹ ವ್ಯಕ್ತಿ ಲಕ್ಷಿö್ಮÃನರಸಿಂಹಯ್ಯನವರು. ತದನಂತರ ತುಮಕೂರು ನಗರದಲ್ಲಿ ಆ ರೀತಿಯ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದಂತಹವರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಎಂದು ಹೇಳಬಹುದು ಎಂದರು.
ದೇವರಾಜ ಅರಸು ಅವರು ಕೊಟ್ಟಂತಹ ಅನೇಕ ಕಾರ್ಯಕ್ರಮಗಳನ್ನು ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ರಾಜಕೀಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಸರ್ಕಾರದ ಸಂಸ್ಥೆಗಳಿಗೆ ನಾಮಿನಿ ಸದಸ್ಯರನ್ನಾಗಿಯೂ ಮಾಡಿದ್ದಾರೆ. ಇಂತಹ ಶಾಸಕರು ನಮಗೆ ಸಿಕ್ಕಿರುವುದು ಪುಣ್ಯ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಮುಖಂಡ ರಕ್ಷಿತ್ ಮಾತನಾಡಿ, ನಗರ ಶಾಸಕರು ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಅವರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪ್ರಾತಿನಿಧ್ಯ ಕೊಟ್ಟಿದ್ದಾರೆ. ಕ್ರೀಡಾಂಗಣ, ಬಸ್ ನಿಲ್ದಾಣ, ಎಂಪ್ರೆಸ್ ಸರ್ಕಾರಿ ಶಾಲೆ ಅಭಿವೃದ್ಧಿ, ಡಿಜಿಟಲ್ ಗ್ರಂಥಾಲಯ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿ ಅಭಿವೃದ್ಧಿಯ ಹರಿಕಾರರಾಗಿ ಹೊರಹೊಮ್ಮಿದ್ದಾರೆ ಎಂದು ಬಣ್ಣಿಸಿದರು.
ನಗರ ಶಾಸಕರಾದ ಜ್ಯೋತಿಗಣೇಶ್ ಅವರ ಹೆಸರು ಬಳಸಿಕೊಂಡು ನಾಯಕರಾಗಿ ಬೆಳೆದು ಇಂದು ಅವರ ವಿರುದ್ಧವಾಗಿಯೇ ಹೇಳಿಕೆಗಳನ್ನು ನೀಡುತ್ತಾ ಅವಕಾಶವಾದಿ ನಾಯಕರಾಗಲು ಹೊರಟಿದ್ದಾರೆ ಎಂದು ಟೀಕಿಸಿದರು.
ನೀಲಕಂಠೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರು ಹಾಗೂ ಕುರುಹಿನ ಶೆಟ್ಟಿ ಸಮಾಜದ ರಾಜ್ಯ ಉಪಾಧ್ಯಕ್ಷ ಶಿವಾನಂದ್ ಮಾತನಾಡಿ, ನಗರ ಶಾಸಕರು ನಮ್ಮ ಕುರುಹಿನಶೆಟ್ಟಿ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ಅನುದಾನ ನೀಡಿದ್ದಾರೆ. ಅದೇ ರೀತಿ ಪ್ರತಿ ಯೊಂದು ಜಾತಿಗಳಿಗೂ ಆಧ್ಯತೆ ನೀಡುವ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿರುವ ಸರಳ ಸಜ್ಜನಿಕೆಯ ರಾಜಕಾರಣಿ ಯಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.
ಮಹಾನಗರಪಾಲಿಕೆ ನಾಮಿನಿ ಸದಸ್ಯ ತ್ಯಾಗರಾಜಸ್ವಾಮಿ ಮಾತನಾಡಿ, ನಗರದ ಅಭಿವೃದ್ಧಿಗೆ ಮುನ್ನಡಿ ಬರೆಯುತ್ತಿರುವ ಶಾಸಕರಾದ ಜ್ಯೋತಿಗಣೇಶ್ ಅವರ ಮೇಲೆ ದುರುದ್ಧೇಶ ಇಟ್ಟುಕೊಂಡು ಸುಳ್ಳು ಆರೋಪ ಮಾಡಿದ್ದಾರೆ. ನಾನು ಉಪ್ಪಾರ ಸಮಾಜದವನಾಗಿದ್ದು, ಇಂದು ನನ್ನನ್ನು ಪಾಲಿಕೆಗೆ ನಾಮಿನಿ ಸದಸ್ಯರನ್ನಾಗಿ ಮಾಡಿ, ಅನೇಕ ಕೆಲಸ ಕಾರ್ಯಗಳನ್ನು ಕೊಟ್ಟಿ ದ್ದಾರೆ. ಅವರನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಆರ್.ರಾಮಕೃಷ್ಣಯ್ಯ ಮಾತನಾಡಿ, ತುಮಕೂರು ಇಂದು ಅಭಿವೃದ್ಧಿಪಥದಲ್ಲಿ ನಡೆಯು ತ್ತಿದೆ ಎಂದರೆ ಅದಕ್ಕೆ ನಗರ ಶಾಸಕರಾದ ಜ್ಯೋತಿಗಣೇಶ್ ಅವರ ಶ್ರಮ ಅಪಾರವಾದುದು. ಸರಳ ಸಜ್ಜನಿಕೆ ಎಂದೇ ಹೆಸರು ಪಡೆದಿರುವ ಅವರು, ಸಮಾಜದ ಎಲ್ಲಾ ಜಾತಿ ಜನಾಂಗಗಳಿಗೂ ಒತ್ತು ಕೊಟ್ಟು ಅವರಿಗೆ ಸೌಲಭ್ಯ ಕಲ್ಪಿಸಿದ್ದಾರೆ. ಅದೇ ರೀತಿ ದೇವಾಂಗ ಜನಾಂಗಕ್ಕೂ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಟೂಡಾ ಸದಸ್ಯರಾದ ಹನುಮಂತಪ್ಪ, ಪ್ರತಾಪ್‌ಕುಮಾರ್, ಪಾಲಿಕೆ ನಾಮಿನಿ ಸದಸ್ಯ ತ್ಯಾಗರಾಜಸ್ವಾಮಿ, ಹಿಂದುಳಿದ ವರ್ಗಗಳ ಮುಖಂಡರಾದ ಶಿವಾನಂದ್, ಆರ್.ರಾಮಕೃಷ್ಣಯ್ಯ, ಗೋವಿಂದರಾಜು, ಮಂಜುನಾಥ್, ರಕ್ಷಿತ್, ಪ್ರದೀಪ್, ವಿನಾಯಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.