Sunday, 15th December 2024

ಜೂ.10ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಸಭೆ

ಮೂಡಲಗಿ: ಹಾವೇರಿ ಜಿಲ್ಲೆಯ ಸಿಗ್ಗಾವಿ ಪಟ್ಟಣದಲ್ಲಿರುವ ಅವರ ನಿವಾಸದ ಮುಂದೆ ಜೂ.27ರಂದು ಲಿಂಗಾಯತ ಪಂಚಮ ಸಾಲಿ 2A ಮೀಸಲಾತಿಗೋಸ್ಕರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಬೆಳಗಾವಿ ನಗರದ ಸಂಕಮ ಹೋಟೆಲ್ ಸಭಾಂಗಣದಲ್ಲಿ ಜೂ.10 ಸಭೆಯನ್ನು ಕರೆಯಲಾಗಿದೆ ಎಂದು ಪಂಚಮಸಾಲಿ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಮೂಡಲಗಿಯ ನಿಂಗಪ್ಪ ಪಿರೋಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಸಭೆಯಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರುಗಳಾದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಮಾಜಿ ಸಚಿವ ಹಾಗೂ ಸಮಾಜದ ಹಿರಿಯರಾದ ಎ. ಬಿ.ಪಾಟೀಲ, ಹೋರಾಟ ಸಮಿತಿಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ, ಶಾಸಕರಾದ ಅರವಿಂದ ಬೆಲ್ಲದ,ಮಾಜಿ ಸಚಿವ ವಿನಯ್ ಕುಲಕರ್ಣಿ, ಅಖಿಲ ಭಾರತ ಲಿಂಗಾಯತ ಪಂಚಮ ಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾ ನಂದ ಕಾಶಪ್ಪನವರ, ದಾಸೋಹ ರತ್ನ ಮಾಜಿ ಶಾಸಕರ ಎಚ್. ಎಸ್ ಶಿವಶಂಕರ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ,ಜಿಲ್ಲಾ ಗೌರವಾ ಧ್ಯಕ್ಷ ರಾಜಶೇಖರ ಪಾಟೀಲ, ಜಿಲ್ಲಾ ಅಧ್ಯಕ್ಷ ಪಂಚನಾಗೌಡ ದ್ಯಾಮನಗೌಡ್ರು ಜಿಲ್ಲಾ ಸೇರಿದಂತೆ ಅನೇಕ ಮುಖಂಡರು ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಅಧ್ಯಕ್ಷರು ಹಾಗೂ ವಿವಿಧ ಘಟಕದ ಪದಾಧಿಕಾರಿಗಳು ಭಾಗವಹಿಸುವರು ಕಾರಣ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹಾಗೂ ಅಧಿಕ ಮಾಹಿತಿಗಾಗಿ ಮೊ-ಪಾಟೀಲ -9845409530, ಪಂಚನಗೌಡ ದ್ಯಾಮನಗೌಡ್ -9902469204, ನಿಂಗಪ್ಪ ಪೀರೋಜಿ -9620130959, ದರೆಪ್ಪ ತಕ್ಕಣ್ಣವರ -9902579939 ಅವರನ್ನು ಸಂಪರ್ಕಿಸಲು ನಿಂಗಪ್ಪ ಪಿರೋಜಿ ಕೋರಿದ್ದಾರೆ.