ಅಂಗೈಅಗಲದ ಕಾಡು ಸಾಮಿಲ್ ಗಳ ಪಾಲಾಗುತ್ತಿದೆ
ಪಾವಗಡ: ದೇಶಾದ್ಯಂತ ಮರಗಳನ್ನು ಬೆಳೆಸಿ ಮರಗಳನ್ನು ಉಳಿಸಿ ಎಂಬುದಾಗಿ ಅರಣ್ಯ ಇಲಾಖೆ ಅತಿ ದೊಡ್ಡ ಹಬ್ಬ ಶಾಸಕರು ಗಳಿಗೆ ಉತ್ತನ ಮಟ್ಟದ ಅಧಿಕಾರಿಗಳೂಂದಿಗೆ ಕೋಟಿ ಕಟ್ಟಲೆ ಹಣ ವೆಚ್ಚ ಮಾಡಿ ಸಸಿಗಳ ಬೀಜ ಹಾಗೂ ಸಸಿಗಳನ್ನು ನೆಡುವ ಒಂದು ಕಾರ್ಯಕ್ರಮ ಮಾಡುವುದು ವಾಡಿಕೆ.
ಪಾವಗಡ ತಾಲ್ಲೂಕು ಬರಡು ಪ್ರಾಂತ್ಯಕ್ಕೆ ಹೆಸರು ವಾಸಿಯಾದ ತಾಲ್ಲೂಕು ಇಲ್ಲಿ ಯಾವುದೇ ಶಾಶ್ವತವಾದ ನೀರಿನ ಸೌಕರ್ಯ ಇಲ್ಲದಂತಹ ಪ್ರದೇಶ ಹಾಗೂ ರಾಜ್ಯದಲ್ಲಿಯೇ ಅತಿ ಕಡಿಮೆ ಮಳೆ ಬಿಳುವಂತಹ ಪ್ರದೇಶ ಇದಾಗಿದೆ ಹೆಗ್ಗಳಿಕೆಗೆ ಹೆಸರುವಾಸಿ ಯಾಗಿದೆ. ಇತ್ತೀಚಿನ ದಿನಗಳಲ್ಲಿ 45 ರಿಂದ 50 ರಷ್ಟು ಬಿಸಿಲಿನ ತಾಪಮಾನವು ಈ ಭಾಗದ ಜನತೆ ಅನುಭವಿಸುತ್ತಿದ್ದಾರೆ.
ಅರಣ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಮತ್ತು ಅರಣ್ಯ ಇಲಾಖೆಯವರ ಪ್ರಕಾರ ಈ ಭಾಗದಲ್ಲಿ ಕಾಡು ಬೆಳಸಬೇಕು ಇಲ್ಲದಿದ್ದರೆ ಮಳೆಯ ಕೊರತೆ ಹೆಚ್ಚಾಗುತ್ತದೆ ಎಂಬುದಾಗಿ ಅನೇಕ ಕಡೆ ಕಾರ್ಯಕ್ರಮಗಳಲ್ಲಿ ಪದೇ ಪದೇ ಈ ವಿಚಾರವಾಗಿ ಭಾಷಣಗಳು ಮಾಡುವುದು ವಾಡಿಕೆ.
ಅದರೆ ಕಾಡು ಬೆಳೆಸುವ ಕೆಲಸ ಅದನ್ನು ಉಳಿಸುವ ಕೆಲಸ ಅರಣ್ಯ ಇಲಾಖೆಯ ಯವರಿಗೆ ಮಾತ್ರವೇ ಸಾರ್ವಜನಿಕರಿಗೆ ಇಲ್ಲವೇ ಎಂಬ ಪ್ರಶ್ನೆ. ಯಾರೂ ಒಬ್ಬರು ಇಬ್ಬರು ತಮ್ಮ ಸಾರ್ಥಕ ಸ್ವಾರ್ಥಕ್ಕಾಗಿ ಮರಗಳಿಂದ ಹಣ ಮಾಡುವಂತಹ ವ್ಯೆಕ್ತಿಗಳಿಗೆ ಕೈ ಜೋಡಿಸಿದರೆ ಅದು ದೊಡ್ಡ ಪಾಪದ ಕೆಲಸ .
ಹಾಡ ಹಗಲಿನಲ್ಲಿ ಟ್ರಾಕ್ಟರ್ ತುಂಬಿಕೊಂಡು ಸಾಮಿಲ್ ಗಳಿಗೆ ಸಾಗಿಸುತ್ತಿರುವ ದ್ರುಶ್ಯಗಳು ಅದೀಕಾರಿಗಳ ಕಣ್ಣಿಗೆ ಕಾಣಿಸುತ್ತಿಲ್ಲವೆ.
ಇನ್ನೊಂದು ಕಡೆ ಮರಗಳ ಮಾರಣ ಹೋಮ ನಡೆಯುತ್ತಲೇ ಕ್ರಮ ಕೈಗೊಳ್ಳಲು ಮುಂದಾಗದ ಅಧಿಕಾರಿಗಳು.