ಆದರೆ ಆರೋಪವನ್ನು ರೇವಣ್ಣ ನಿರಾಕರಿಸಿದ್ದಾರೆ. ನಾನು ಡಿಕೆ ಶಿವಕುಮಾರ್ ಗೆ ತೋರಿಸಿ ಮತ ಹಾಕಿಲ್ಲ. ಪುಟ್ಟರಾಜು ಅವರಿಗೆ ತೋರಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಪ್ರಕರಣದ ಕಾರಣದಿಂದ ರಾಜ್ಯಸಭೆ ಫಲಿತಾಂಶ ವಿಳಂಬವಾಗುವ ಸಾಧ್ಯತೆಯಿದೆ. ಸಂಜೆ 5 ರಿಂದ ಮತಗಳ ಎಣಿಕೆ ಶುರು ವಾಗಬೇಕಿತ್ತು. ಆದರೆ ರೇವಣ್ಣ ವಿರುದ್ಧ ಬಿಜೆಪಿ ದೂರು ಕೊಟ್ಟಿದ್ದು, ಈ ದೂರು ಪರಿಶೀಲಿಸಿ ಇತ್ಯರ್ಥ ಪಡಿಸಿದ ಮೇಲೆ ಮತ ಎಣಿಕೆ ಆರಂಭವಾಗಬೇಕಿದೆ. ಹೀಗಾಗಿ ಫಲಿತಾಂಶ ರಾತ್ರಿ 10 ರ ಸುಮಾರಿಗೆ ಪ್ರಕಟವಾಗುವ ಸಾಧ್ಯತೆಯಿದೆ.