Sunday, 24th November 2024

ಆಲ್ಟಿಗ್ರೀನ್, ಏಕೈಕ ಎಲೆಕ್ಟ್ರಿಕ್ ಲಾಸ್ಟ್ ಮೈಲ್ ಟ್ರಾನ್ಸ್ ಪೋರ್ಟೇಷನ್ ಕಂಪನಿ

3- ಚಕ್ರಗಳ ಎಲೆಕ್ರಿಕ್ ಕಾರ್ಗೊ ವಾಹನ ಅಂತರನಗರ ಸಾರಿಗೆ ಗಡಿಯನ್ನು ಮೀರಿದೆ 

ತನ್ನ ಚೊಚ್ಚಲ ಉತ್ಪನ್ನ ಎನ್ ಇಇವಿಯನ್ನು ಪ್ರದರ್ಶಿಸಿದ್ದು,
ಒಂದು ಚಾರ್ಚ್ ಗೆ 150+ ಕಿ.ಮೀ ನೀಡಲಿದೆ

 

ಬೆಂಗಳೂರು:ಹತ್ತು ವರ್ಷ ಹಳೆಯದಾದ ಕಂಪನಿ ಆಲ್ಟಿಗ್ರೀನ್, ಇವಿ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಅತ್ಯಂತ ಹೆಚ್ಚಾಗಿ ಆವಿಷ್ಕಾರ ಮಾಡುತ್ತಿದ್ದು, ಹೊಸತನ್ನು ಹೊರತರುತ್ತಿದೆ.

ಕೋವಿಡ್-19 ಸಾಂಕ್ರಾಮಿಕದ ನಂತರ ಲಾಸ್ಟ್- ಮೈಲ್ ಪ್ಯಾಸೆಂಜರ್ಸ್ ಮತ್ತು ಸರಕು ಸಾಗಣೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಭಾರತೀಯ  3ಡಬ್ಲ್ಯು  ಮಾರುಕಟ್ಟೆ ಹಣಕಾಸು ವರ್ಷ 23ರಲ್ಲಿ 14,000 ಕೋಟಿ ರೂಪಾಯಿಗೆ ಪ್ರಗತಿಯಾಗಲಿದೆ ಮತ್ತು ಇ-ಎಲ್53 ಡಬ್ಲ್ಯು ನಲ್ಲಿ ಇದೇ ಆರ್ಥಿಕ  ವರ್ಷದಲ್ಲಿ  ಶೇ 20ರಷ್ಟು ಬೆಳವಣಿಗೆಯೊಂದಿಗೆ 4,500 ಕೋಟಿಯಷ್ಟು ಪ್ರಗತಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಮೇಡ್-ಇನ್-ಇಂಡಿಯಾ ಮತ್ತು ಮೇಡ್-ಫಾರ್-ಇಂಡಿಯಾದೊಂದಿಗೆ ಆಲ್ಟಿಗ್ರೀನ್ ಎನ್ ಇವಿ ತನ್ನ ಶ್ರೇಣಿ, ಗ್ರೌಂಡ್ ಕ್ಲಿಯರೆನ್ಸ್,  ಅಗ್ರ ವೇಗದ ಕಾರ್ಯದಕ್ಷತೆ  ಮತ್ತು ಸರಕುಭಾರದ ಸಾಮರ್ಥ್ಯದ ದಕ್ಷತೆಯೊಂದಿಗಿದ್ದು, ಮುಂದಿನ ಒನ್ಲಿ ಎಲೆಕ್ಟ್ರಿಕ್ ಲಾಸ್ಟ್ ಮೈಲ್ ಟ್ರಾನ್ಸ್ ಪೋರ್ಟೇಷನ್ ಕಂಪನಿಯು ಜಾಗತಿಕವಾಗಿ ಅಗ್ರಸ್ಥಾನ ಪಡೆಯುವ ಗುರಿ ಹೊಂದಿದೆ.

ಆಲ್ಟಿಗ್ರೀನ್ ಸಂಸ್ಥಾಪಕ ಮತ್ತು ಸಿಇಒ ಡಾ. ಅಮಿತಾಬ್ ಸರಣ್ ಮಾತನಾಡಿ, “ಎಲೆಕ್ಟ್ರಿಕ್ ವಾಹನ ಮಾಲೀಕರು ಮತ್ತು ಭವಿಷ್ಯದ ಖರೀದಿದಾರರಲ್ಲಿ ಶ್ರೇಣಿ ಆಕಾಂಕ್ಷೆ ಅತಿದೊಡ್ಡ ಕಾಳಜಿ. ನಮ್ಮ ಪ್ರಥಮ ಉತ್ಪನ್ ಅಭಿವೃದ್ಧಿ ಮಾಡುವ ಸಂದರ್ಭದಲ್ಲಿ ಈ ಪ್ರಮುಖ ಸವಾಲನ್ನು ನಾವು ಅರಿತುಕೊಂಡೆವು. ಇದಕ್ಕಾಗಿ ಇವಿ ಚಾರ್ಚಿಂಗ್ ಮೂಲಸೌಕರ್ಯವನ್ನು ದೀರ್ಘ-ಕಾಲದ ಪರಿಹಾರ ವನ್ನು ನಿರ್ಮಿಸುತ್ತಿದ್ದೇವೆ. ಈ ಪರಿಹಾರ ನಾಳೆಯಲ್ಲ, ಇಂದು ಬೇಕಿದೆ. ಆದ್ದರಿಂದ ನಾವು ಅತಿದೊಡ್ಡ ಬ್ಯಾಟರಿ ಪ್ಯಾಕ್ (11 ಕೆವಿಎಚ್ ವಿ/ಎಸ್ ಮಾರ್ಕೆಟ್ ನಲ್ಲಿನ ಸ್ಪರ್ಧೆ 8 ಕೆವಿಎಚ್) ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ 26 ಜಾಗತಿಕ ಪೇಟೆಂಟ್ ನಿಂದ ನಮ್ಮ ಎಂಜಿನಿಯರಿಂಗ್ ಬಳಸಿಕೊಂಡಿದ್ದೇವೆ. ಇದು ಅತ್ಯಧಿಕ ಶಕ್ತಿ ಮರುಉತ್ಪಾದಿಸಲಿದ್ದು, ಗರಿಷ್ಠ ಮೈಲೇಜ್ ನೀಡಲಿದೆ. ಇಂದಿನ ಅಂತರನಗರ ಚಾಲನೆ ನಮ್ಮ ಬದ್ಧತೆಯನ್ನು ಬಲಪಡಿಸಿದೆ” ಎಂದರು.

ಲಿಥಿಯಂ-ಐಯಾನ್ ಚಾರ್ಚ್ಡ್ ಆಲ್-ಲೆಕ್ಟ್ರಿಕ್ ಪವರ್ ಟ್ರೈನ್ ಆಲ್ಟಿಗ್ರೀನ್ ಎನ್ಇಇವಿ ಭಾರತದಲ್ಲಿ 150+ ಕಿ.ಮೀ  ಅಂತರ ನಗರ ಚಾಲನೆಯನ್ನು ಪೂರ್ಣಗೊಳಿಸಿರುವ ಒನ್ಲಿ ಎಲೆಕ್ಟ್ರಿಕ್ ಮೂರು ಚಕ್ರದ ಕಾರ್ಗೊ ವಾಹನ. ಕರ್ನಾಟಕದ ಮೈಸೂರು ಅರಮನೆಯಿಂದ ಬೆಂಗಳೂರು ಅರಮನೆವರೆಗೆ ಒಂದೇ ಚಾರ್ಚ್ ನಲ್ಲಿ ಸಂಚರಿಸಿದೆ. ಇದು ಎನ್ಇಇವಿಯ ಸಾಮರ್ಥ್ಯ ಮತ್ತು ಆಲ್ಟಿಗ್ರೀನ್ ತಂತ್ರಜ್ಞಾನವನ್ನು ಸಾಬೀತುಪಡಿಸುತ್ತದೆ.

ಮಾರಾಟ, ಸರ್ವಿಸ್ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಶ್ರೀ ದೆಬಶಿಸ್ ಮಿತ್ರ ಮಾತನಾಡಿ, “ಆಲ್ಟಿಗ್ರೀನ್ ದೇಶದಾದ್ಯಂತ ಸಂಪರ್ಕ ಜಾಲ ಸೃಷ್ಟಿಸಲು ನಿರ್ಮಾಣವಾಗಿದೆ. ಕಾರ್ಗೊ ಮತ್ತು ಪ್ರಯಾಣಿಕ ವರ್ಗದಲ್ಲಿ ಎನ್ಇಇವಿಯಂತ ತಂತ್ರಜ್ಞಾನದೊಂದಿಗೆ ಮುಂದಿನ ತಿಂಗಳುಗಳಲ್ಲಿ  ಆವಿಷ್ಕಾರಯುವ ಉತ್ಪನ್ನಗಳನ್ನು ತರಲಿದ್ದೇವೆ” ಎಂದರು.