ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಕರೋನಾ ತಡೆಗಟ್ಟಲು ಹಗಲಿರುಳು ಯೋಧರಂತೆ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಸ್ಥಳೀಯರು ಆರತಿ ಎತ್ತಿ, ಹೂವು ಚೆಲ್ಲಿ ಗೌರವ ಸೂಚಿಸಿದ್ದಾರೆ.
ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸಿಪಿ ಸುಧೀರ್ ಹೆಗ್ಡೆ, ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದಲ್ಲಿ ಪಂಥ ಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳೀಯ ಮುಸ್ಲಿಂ ನಿವಾಸಿಗಳು ಪೊಲೀಸರ ಮೇಲೆ ಹೂವು ಹಾಕಿ, ಆರತಿ ಬೆಳಗಿದರು. ಜತೆಗೆ ವ್ಯಕ್ತಿಯೊಬ್ಬರು ತೆಂಗಿನಕಾಯಿ ಒಡೆದು ಪೊಲೀಸರಿಗೆ ದೃಷ್ಟಿ ತೆಗೆದರು.
ರಸ್ತೆಯುದ್ದಕ್ಕೂ ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತಿದ್ದ ಸಾರ್ವಜನಿಕರು, ಪೊಲೀಸರ ಪಥ ಸಂಚಲನದ ವೇಳೆ ಚಪ್ಪಾಳೆ ತಟ್ಟಿ ಸೆಲ್ಯೂಟ್ ಮಾಡುವ ಮೂಲಕ ಅಭಿನಂದಿಸಿದರು.