Saturday, 26th October 2024

ವಿದ್ಯುತ್ ಕಳ್ಳತನ ಶಿಕ್ಷಾರ್ಹ, ದಂಡನೀಯ ಅಪರಾಧ

ಚಿಕ್ಕನಾಯಕನಹಳ್ಳಿ : ವಿದ್ಯುತ್ ಕಳ್ಳತನ ಶಿಕ್ಷಾರ್ಹ ಮತ್ತು ದಂಡನೀಯ ಅಪರಾಧ ವಾಗಿದ್ದು ವಿದ್ಯುತ್ ಕಳ್ಳತನ ಅಥವಾ ದುರುಪಯೋಗ ಕಂಡುಬ0ದಲ್ಲಿ ತುಮಕೂರಿನ ಬೆಸ್ಕಾಂ ಜಾಗೃತ ದಳ ದೂ. ಸಂಖ್ಯೆ ೦೮೧೬-೨೨೮೧೮೫೦, ೯೪೪೮೦೯೪೮೧೨, ೯೪೪೮೦೯೪೮೨೯ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಬೆಸ್ಕಾಂ ಜಾಗೃತ ದಳದ ಪಿಎಸ್‌ಐ ಶಕುಂತಲಾ ಹೇಳಿದರು.

ಪಟ್ಟಣದ ಬೆಸ್ಕಾಂ ಕಚೇರಿಯ ಆವರಣದಲ್ಲಿ ತುಮಕೂರು ಬೆಸ್ಕಾಂ ಜಾಗೃತ ದಳ ಪೋಲೀಸ್ ಠಾಣೆಯ ವತಿಯಿಂದ ಆಯೋಜಿಸ ಲಾಗಿದ್ದ ಜಾಗೃತಿ ಅರಿವು ಸಪ್ತಾಹದಲ್ಲಿ ಮಾತನಾಡಿದರು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಗ್ರಾಹಕರು ವಿದ್ಯುತ್ ಬಳಕೆಯಲ್ಲಿ ಎಚ್ಚರ ವಹಿಸಿ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದAತೆ ಕಾಳಜಿವಹಿಸಬೇಕೆಂದು ಮನವಿ ಮಾಡಿಕೊಂಡರು.

ಬೆಸ್ಕಾ ಎಇಇ ರಾಜಶೇಖರ್ ಮಾತನಾಡಿ ಹೊಸದಾಗಿ ಮನೆಯನ್ನು ಅಥವಾ ಕಟ್ಟಡ ಗಳನ್ನು ನಿರ್ಮಾಣ ಮಾಡುವರು ಬೆಸ್ಕಾಂ ನಿ0ದ ಎಲ್.ಟಿ ೭ ಜಕಾತಿಯ ಮೀಟರ್ ಕಡ್ಡಾಯವಾಗಿ ಪಡೆಯಬೇಕು. ಅಂಗಡಿ ಹಾಗು ವಾಣಿಜ್ಯ ಉದ್ದೇಶದ ಮಳಿಗೆಗಳಿಗೆ ವಾಸದ ಮನೆಯ ಮೀಟರ್‌ನಿಂದ ವಿದ್ಯುತ್ ಸಂಪರ್ಕವನ್ನು ಗ್ರಾಹಕರು ಪಡೆಯದೆ ಎಲ್ ಟಿ ೩ ಜಕಾತಿಯ ಮೀಟರ್ ಅಳವಡಿಸಿಕೊಳ್ಳ ಬೇಕು. ನಿರಂತರ ಜ್ಯೋತಿ ಮಾರ್ಗ ದಿಂದ ಅನಧಿಕೃತವಾಗಿ ವಿದ್ಯುತ್ ಬಳಸಬಾರದು. ಮನೆಯ ಹಾಗು ಯಾವುದೇ ರೀತಿಯ ಕಟ್ಟಡಗಳ ಮೀಟರ್‌ಗಳು ಬೆಸ್ಕಾಂ ಸಿಬ್ಬಂದಿಗೆ ಕಾಣುವಂತೆ ಅಳವಡಿಸಿರಬೇಕೆಂದು ತಿಳಿಸಿದರು.

ಈ ವೇಳೆ ಸಹಾಯಕ ಲೆಕ್ಕಧಿಕಾರಿ ಧನರಾಜ್, ಸೆಕ್ಷನ್ ಆಫೀಸರ್ ಇರ್ಫಾನ್, ಆನಂದ್, ಯೋಗೇಂದ್ರ ಸಿಬ್ಬಂದಿ ಗೂಳೂರು ನಾಗರಾಜ್ ಸೇರಿದಂತೆ ಇತರರಿದ್ದರು.