Saturday, 23rd November 2024

ದಿನಕ್ಕೆ ಮೂರು ಕಿಲೋ ಅನ್ನ, 5 ಕೆಜಿ ರೊಟ್ಟಿ ತಿಂತಾನೆ ಈತ..!

ಕತಿಹಾರ್‌: ಬಿಹಾರದ ಕತಿಹಾರ್‌ನ 200 ಕೆಜಿ ತೂಕ ಇರುವ ವ್ಯಕ್ತಿಯೊಬ್ಬರು ತಮ್ಮ ಬೊಜ್ಜಿನ ಮೈಕಟ್ಟು ಮತ್ತು ಆಹಾರದ ಸೇವನೆಯಿಂದ ಈ ಪ್ರದೇಶದಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ.

ಜಿಲ್ಲೆಯ ಮಾನಸಾಹಿ ಬ್ಲಾಕ್‌ನ ಜಯನಗರ ನಿವಾಸಿ ಕತಿಹಾರ್‌ನ ರಫೀಕ್ ಅದ್ನಾನ್ ಅವರ ತೂಕ ಸುಮಾರು 2 ಕ್ವಿಂಟಾಲ್‌ಗಿಂತ ಹೆಚ್ಚು. ರಫೀಕ್​ ಬುಲೆಟ್​ ಬೈಕ್​ ಮೇಲೆ ಬರುತ್ತಿದ್ದರೆ ಲೂನಾ ವಾಹನದ ಮೇಲೆ ಬರುತ್ತಿದ್ದಂತೆ ಕಾಣುತ್ತಾರೆ. ಜನ ಅವರನ್ನು ‘ಬುಲೆಟ್ ವಾಲಾ ಜೀಜಾ’ ಎಂದೂ ಕರೆಯುತ್ತಾರೆ. ತಮ್ಮ ಆಹಾರ ಕ್ರಮ ಮತ್ತು ಸ್ಥೂಲಕಾಯದಿಂದಾಗಿ ಅವರು ಕತಿಹಾರ್‌ ನಾದ್ಯಂತ ಪ್ರಸಿದ್ಧರಾಗಿದ್ದಾರೆ.

ರಫೀಕ್ ಅದ್ನಾನ್ ಪ್ರದೇಶದ ಎಲ್ಲರಿಗೂ ವಿಶೇಷ ಕಾರಣಕ್ಕಾಗಿ ತಿಳಿದಿದ್ದಾರೆ. ದಪ್ಪನೇ ಮೈಕಟ್ಟು. 200 ಕಿಲೋ ತೂಕದ ರಫೀಕ್ ಅದ್ನಾನ್ ದಿನದ ಊಟದಲ್ಲಿ ಮೂರು ಕಿಲೋ ಅನ್ನ, ಬೇಳೆಕಾಳುಗಳು ಮತ್ತು ತರಕಾರಿಗಳ ಬಗ್ಗೆ ಕೇಳಬೇಡಿ. ರೊಟ್ಟಿ ತಿನ್ನುವುದು ಅಪರೂಪ. 4 ರಿಂದ 5 ಕೆಜಿ ರೊಟ್ಟಿ ಮಾಡಬೇಕಾಗುತ್ತದೆ. ಮೂರ್ನಾಲ್ಕು ಕೆಜಿ ಹಾಲಿನ ಜೊತೆಗೆ 2 ಕೆಜಿ ಚಿಕನ್ – ಮಟನ್, ಒಂದೂವರೆ ಕೆಜಿ ಮೀನು ಕೂಡ ಸವಿಯುತ್ತಾರೆ.ರಫೀಕ್ ಧಾನ್ಯ ವ್ಯಾಪಾರಿ. ಎರಡು ಮದುವೆ ಮಾಡಿಕೊಂಡಿದ್ದರೂ ಮಕ್ಕಳಾ ಗಿಲ್ಲ. ರಫೀಕ್ ಅದ್ನಾನ್ ಅವರ ಊಟದ ನಂತರ ಅವರ ಇಬ್ಬರು ಹೆಂಡತಿ ಯರಿಗೂ ಉಳಿಯುವುದಿಲ್ಲ. ರಫೀಕ್​ ಆಹಾರ ಪದ್ಧತಿಯಿಂದ ನೆರೆಹೊರೆಯ ವರು ಮತ್ತು ಸಂಬಂಧಿಕರು ಸಹ ಅವರನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸುವುದಿಲ್ಲ. ಏಕೆಂದರೆ ಅನೇಕ ಜನರು ತಿನ್ನುವಷ್ಟು ಆಹಾರವನ್ನು ಒಬ್ಬರೇ ಸವಿಯುತ್ತಾರಂತೆ.

ಬಾಲ್ಯದಿಂದಲೂ ದಪ್ಪವಾಗಿಯೇ ಬೆಳೆದಿದ್ದೇನೆ. ನಡೆದಾಡಲು ತೊಂದರೆ ಯಾಗಿದೆ. ಈಗಾಗಲೇ ನನಗೆ 30 ವರ್ಷ ದಾಟಿದೆ. ಎರಡು ಮದುವೆಯಾದರೂ ತೂಕದ ಕಾರಣ ಮಕ್ಕಳಾಗಿಲ್ಲ. ದಿನಕ್ಕೆ ಮೂರು ಕೆಜಿ ಅಕ್ಕಿ, 4-5 ಕೆಜಿ ಹಿಟ್ಟು ರೊಟ್ಟಿ ಮತ್ತು 3 ಕೆಜಿ ಹಾಲು ಸೇವಿಸುತ್ತೇನೆ. ಊಟಕ್ಕೆ 2 ಕೆಜಿ ಮಾಂಸ ಮತ್ತು ಒಂದೂವರೆ ಮೀನು ಕೆಜಿ ಬೇಕು. ಒಂದೇ ಸಮಯದಲ್ಲಿ ಎರಡು ಲೋಟ ನೀರು ಕುಡಿಯುತ್ತೇನೆ. ಚಿಕಿತ್ಸೆ ತೆಗೆದುಕೊಳ್ಳಿ, ಎಲ್ಲ ಸರಿಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ರಫೀಕ್​ ಬುಲಿಮಿಯಾ ನರ್ವೋಸಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ಅತಿಯಾಗಿ ಆಹಾರ ಸೇವಿಸುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಕಾಯಿಲೆಯಿಂದ ಬಳಲುತ್ತಿರುವವರಿಗೆ ಬಹಳಷ್ಟು ತಿನ್ನುವ ಬಯಕೆ ಇರುತ್ತೆ. ಇದರಿಂದಾಗಿ ಅವರ ತೂಕ ಹೆಚ್ಚಾಗುತ್ತದೆ. ಇಲ್ಲವಾದಲ್ಲಿ ರಫೀಕ್​ಗೆ ಹಾರ್ಮೋನ್ ಕಾಯಿಲೆಯಿಂದಲೂ ಬಳಲುತ್ತಿರಬಹುದು ಎಂದು ಸ್ಥಳೀಯ ವೈದ್ಯೆ ಮೃಣಾಲ್ ರಂಜನ್ ಹೇಳುತ್ತಾರೆ.