Sunday, 15th December 2024

ಶಿಕ್ಷಣ ಮತ್ತು ವಿದ್ಯಾಭ್ಯಾಸ: ಒಂದು ಅವಲೋಕನ

ದಾಸ್ ಕ್ಯಾಪಿಟಲ್

dascapital1205@gmail.com

ಒಂದು ನಿರ್ದಿಷ್ಟ, ಬದುಕಿನ ತೀರ ಸಮೀಪದ ಗುರಿಗಾಗಿ ಪಡೆಯುವ ತರಬೇತಿಗೆ ಶಿಕ್ಷಣ ಎಂದು ಕರೆದರೆ, ವಿದ್ಯೆಯ ಗುರಿ, ಆತ್ಮ ವಿಕಾಸ, ವ್ಯಕ್ತಿತ್ವದ ಆವಿಷ್ಕಾರ, ಪೂರ್ಣತೆಯ ಹಂಬಲದ ಪೂರೈಕೆ, ಮನುಷ್ಯ ಮಾನವನಾಗಿ ಬಾಳಿ ಬದುಕಬೇಕೆಂಬ ಆಕಾಂಕ್ಷೆ, ಇದರಿಂದ ಬರುವ ಅಲೌಕಿಕ ತೃಪ್ತಿ, ಆನಂದ, ನೆಮ್ಮದಿ, ಜೀವನ ಸೊಗಸು, ಚೆಲುವು, ಅರಿವಿಗಾಗಿ ಹಂಬಲಿಸಿ ಪಡೆಯುವ ಜ್ಞಾನ, ವಿವೇಕ, ಜೀವನಕ್ಕೆ ಅನಿವಾರ್ಯವಾಗಿ ಬೇಕಾದ ಸಾಂತ್ವನ, ಬೆಳಕು, ಅರ್ಥ ಪುರುಷಾ ರ್ಥದ ಕಲ್ಪನೆ, ಮಾನವ ಸಂಬಂಧದ ತಿಳಿವಳಿಕೆ, ಜ್ಞಾನಕ್ಕಾಗಿ ಜ್ಞಾನವೆಂಬ ಗುರಿಯ ಎಲ್ಲ ಮುಖದ ಜೀವನ ರಹಸ್ಯಗಳ ಅರಿವು- ಒಟ್ಟಿನಲ್ಲಿ ಬದುಕನ್ನು ಬಾಳನ್ನಾಗಿಸ ಬಲ್ಲ ಸಹನೀಯವನ್ನಾಗಿಸಬಲ್ಲ, ಪ್ರೇಮಾರ್ಹವನ್ನಾಗಿಸಬಲ್ಲ, ಮೌಲ್ಯ ಪ್ರೇಮಗಳನ್ನು ಕಲಿಸಬಲ್ಲ ಕಲೆಯನ್ನು  ರಕ್ತಗತ ವಾಗಿಸಬಲ್ಲ ಬೋಧೆಗೆ ವಿದ್ಯಾಭ್ಯಾಸ ಎಂದು ಕರೆಯ ಲಾಗುತ್ತದೆ.

ಶಿಕ್ಷಣ ಮತ್ತು ವಿದ್ಯಾಭ್ಯಾಸದ ಅರ್ಥ ಸರಿಯಾಗಿ ಗೊತ್ತಿಲ್ಲದಿರುವುದಕ್ಕೆ ಮುಖ್ಯ ಕಾರಣ ಎರಡರ ನಡುವಿನ ಅಂತರವೇ ತಿಳಿಯ ದಿರುವುದರಿಂದ! ಶಿಕ್ಷಣಕ್ಕೆ ವ್ಯಾವಹಾರಿಕ, ಪ್ರಕೃತ ಆಯ್ದ ಕ್ಷೇತ್ರವೊಂದರ ನಿರ್ದಿಷ್ಟ ಪ್ರಗತಿಯ ಗುರಿ ಇದ್ದಂತೆ, ವಿದ್ಯೆಗೆ ಹಾಗೊಂದು ಗುರಿ ಯಿಲ್ಲವೆಂಬುದು ಮುಖ್ಯ ವ್ಯತ್ಯಾಸ. ಉದಾಹರಣೆಗೆ, ಶಿಕ್ಷಣದಲ್ಲಿ ಸೈನಿಕ ಶಿಕ್ಷಣ, ಔದ್ಯೋಗಿಕ ಶಿಕ್ಷಣ, ವಾಣಿಜ್ಯ ಶಿಕ್ಷಣ, ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆ, ವೈಮಾನಿಕ ಚಾಲನೆ, ತಂತ್ರಜ್ಞಾನ, ವೈದ್ಯಕೀಯಗಳಲ್ಲಿ ಆಯಾ ನಿರ್ದಿಷ್ಟ ಕ್ಷೇತ್ರಗಳಲ್ಲಿ ಪರಿಣಿತಿ ರೀತಿಗೆ ಶಿಕ್ಷಣ ಎನ್ನುವುದು ಈ ಶಬ್ದದ ನಿರುಕ್ತಿಯಲ್ಲಡಗಿದ ಅರ್ಥ.

ಇದನ್ನೇ Training ಎಂದೂ ಕರೆಯಬಹುದು. ಒಂದರ ರೀತಿಯ ಶಿಕ್ಷಣ ಇನ್ನೊಂದು ಕ್ಷೇತ್ರಕ್ಕೆ ಅನ್ವಯವಾಗುವುದಿಲ್ಲ. ಕಾಲ
ಬದಲಾದಂತೆ, ಸಂದರ್ಭ ಬೇರೆಯಾದಂತೆ ಇಲ್ಲ ಶಿಕ್ಷಣದ ಪದ್ಧತಿಯೂ, ಪರಿಣಿತಿಯ ಸಾಧನೆ, ಸಲಕರಣೆ, ಉಪಕರಣಗಳ ಬಳಕೆಯ ರೀತಿಗಳಲ್ಲಿಯೂ ಬದಲಾವಣೆ ಅನಿವಾರ್ಯ. ಅಂದರೆ ಕಾಲಕಾಲಕ್ಕೆ ಅಪ್ರಸ್ತುತವಾಗುತ್ತವೆ; ಹೊಸ ರೂಪ ಪಡೆಯು ತ್ತವೆ. ಇಂಥ ಶಿಕ್ಷಣ ಭಾರತದಲ್ಲಿ ವೇಗ ನಡೆಯಿಂದ ಕ್ರಮಿಸುತ್ತ ಜೀವನದ ಎಲ್ಲ ಮುಖಗಳನ್ನು ಒಳಗೊಳ್ಳುತ್ತ ಬರುತ್ತಿರುವುದು ತುಂಬಾ ಸಂತೋಷದ ಸಂಗತಿ.

ಇಂಥ ಶಿಕ್ಷಣದಿಂದಾಗಿ ಹಸಿರುಕ್ರಾಂತಿಯಾಗಿ ಹಸಿವು ನೀಗಿದೆ. ಕ್ಷೀರಕ್ರಾಂತಿಯಾಗಿದೆ. ಮಾಹಿತಿ ತಂತ್ರeನದಲ್ಲಂತೂ ಇತರರು ಅಸೂಯೆ ಪಡುವಷ್ಟು ಸಾಧನೆಯನ್ನು, ಪ್ರಗತಿ ಯನ್ನು ನಾವು ಸಾಽಸಿದ್ದೇವೆ. ಸೇನಾಬಲದಲ್ಲಿ, ಸೇನಾತಂತ್ರಜ್ಞಾನದಲ್ಲಿ ಭಾರತ ಅಗ್ರ ಸ್ಥಾನವನ್ನು ಪಡೆದಿದೆ. ವಿಜ್ಞಾನ, ವ್ಯವಸಾಯ, ವೈದ್ಯಕೀಯದಲ್ಲಿ ಪ್ರಗತಿ ಅಪಾರವಾಗಿದೆ. ಆದ್ದರಿಂದ ಔಪಚಾರಿಕ ಶಿಕ್ಷಣ ದಲ್ಲಿ ಸಮಸ್ಯೆಗಳು ಕಾಣುವುದಿಲ್ಲ.

ಆದರೆ, ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಶಿಕ್ಷಣದ ಆರಂಭದ ಕೆಲವು ವರ್ಷಗಳಲ್ಲಿ ಈ ಔಪಚಾರಿಕ ಶಿಕ್ಷಣ
ವಿದ್ಯಾಭ್ಯಾಸದ ಮೌಲ್ಯಗಳನ್ನು ಹೊಂದಿತ್ತು. 1990ರವರೆಗೂ ಹಾಗೂ ಸರಿಹೊತ್ತಿನವರೆಗೂ ಅಂಥ ಮೌಲ್ಯಗಳನ್ನು ಪ್ರತಿನಿಧಿ ಸುವ ಶಿಕ್ಷಣದ ಪರಿಕಲ್ಪನೆಗಳು ಸಾಮಾಜಿಕವಾಗಿ ಅಲ್ಲಲ್ಲಿವೆ. ಆದರೆ ಯಾವಾಗ ಕಾರ್ಪೋರೇಟ್ ಪ್ರಪಂಚ ಶಿಕ್ಷಣಕ್ಕೆ ಕಾಲಿಟ್ಟಿತೋ ಅಂದಿನಿಂದ ಶಿಕ್ಷಣವು ಶುದ್ಧ ವ್ಯಾವಹಾರಿಕವಾಗಿ ಬಿಟ್ಟಿತು. ಆದ್ದರಿಂದ ಸ್ವಾತಂತ್ರ್ಯೋತ್ತರ ಶಿಕ್ಷಣದ ಧ್ಯೇಯದ ಕುರಿತು ಯೋಚಿಸಿದರೆ ತಕ್ಷಣ ದೊಡ್ಡದಾದ ಕಚೇರಿಯಲ್ಲಿ ಹೆಚ್ಚು ಸಂಬಳದ ಉನ್ನತ ಹುzಯ ಕಲ್ಪನೆ ಹುಟ್ಟಿಕೊಂಡುತ್ತದೆ.

ಇದು ನಿಜವೇ ಆದರೂ ಶಿಕ್ಷಣದ ಹಲವು ಉದ್ದೇಶಗಳಲ್ಲಿ ಇದು ಒಂದು ಭಾಗವೇ ಹೊರತು ಇದೇ ಪ್ರಧಾನವಲ್ಲ. ಶಿಕ್ಷಣದ ಉದ್ದೇಶ ವೇನೆಂದರೆ, ಮಾನವನ ಅಂತರಂಗ ಮತ್ತು ಬಹಿರಂಗಗಳನ್ನು ಸಮೃದ್ಧಗೊಳಿಸುವುದು. ಜೀವನ ನಿರ್ವಹಣೆಗೆ ಬೇಕಾದ ಪ್ರಶಸ್ತಿ ಪತ್ರವನ್ನು ನೀಡುವ ಶಿಕ್ಷಣ ಪದ್ಧತಿಯಲ್ಲಿ ಮಾನವನ ಆಂತರಂಗಿಕ ಆಕೃತಿಗಳನ್ನು ಅಪೇಕ್ಷಿತ ಎನ್ನಬಹುದಾದ ಅಥವಾ ಒಟ್ಟೂ ಬದುಕನ್ನು ಸಮಗ್ರವಾಗಿ ಔನ್ನತ್ಯಕ್ಕೊಳಿಸುವ ಉದ್ದೇಶ ಸಾಫಲ್ಯವನ್ನು ಕಾಣುವುದಿಲ್ಲ. ಕಲಿಯುವುದು ಕೇವಲ ಹೊಟ್ಟೆ ಪಾಡಿ ಗಾಗಿ ಎಂದು ಭಾವಿಸಿದರೆ ಸ್ವಾತಂತ್ರ್ಯೋತ್ತರ ಶಿಕ್ಷಣ ಪದ್ಧತಿಯು ಸಾಕಷ್ಟು ಪ್ರಮಾಣದಲ್ಲಿ ಯಶಸ್ಸನ್ನೂ, ಔಪಚಾರಿಕ ಹಿನ್ನೆಲೆ ಯಲ್ಲಿ ಯಶಸ್ಸನ್ನೂ ಪಡೆದಿದೆ.

ಆದ್ದರಿಂದ ಈ ಶಿಕ್ಷಣ ಕ್ರಮದಲ್ಲಿ ಮುಖ್ಯವಾಗಿ ವ್ಯಕ್ತಿಯ ಯಶಸ್ಸನ್ನು ಸಮುದಾಯ ನಿರ್ಧರಿಸುತ್ತದೆ. ಆದರೆ, ಸಾರ್ಥಕ್ಯವನ್ನು ವ್ಯಕ್ತಿಯೇ ನಿರ್ಧರಿಸುತ್ತಾನೆ. ತಾನು ಕಲಿತ ಶಿಕ್ಷಣದಿಂದ ತಾನು ಗಳಿಸಿದ ಮತ್ತು ಅಳವಡಿಸಿಕೊಂಡ ಮೌಲ್ಯಗಳಾವುವು ಎಂಬು ದನ್ನು ವ್ಯಕ್ತಿಯೇ ನಿರ್ಧರಿಸಿಕೊಳ್ಳಬೇಕಾಗುತ್ತದೆ. ಅವನ ವೈಯಕ್ತಿಕ ಅಭಿರುಚಿ, ಸಾಮಾಜಿಕ ವರ್ತನೆಯ ಮೇಲೆ ಅದು ಅವಲಂಬಿತ ವಾಗುತ್ತದೆ. ಏನೇ ಇದ್ದರೂ ಶಿಕ್ಷಣಕ್ಕೆ ಮತ್ತೊಂದು ಮುಖವೂ ಇದೆಯೆಂಬುದು ಸ್ಪಷ್ಟ. ಶಿಕ್ಷಿತರ ಅಪರಾಧಿ ಪ್ರವೃತ್ತಿ ಹೆಚ್ಚಿದೆ ವೈದಿಕ ಪಾಠಶಾಲೆಗಳು, ವಿವಿಧ ಮತ ಸಮುದಾಯಗಳು ನೀಡುವ ಶಿಕ್ಷಣದ ನೆಲೆಗಳು, ಮದರಸಾಗಳು ವ್ಯವಸ್ಥಿತವಾದ ರೀತಿಯಲ್ಲಿ ಅಕ್ಷರದ ಮೂಲಕ ನೀಡುವ ಕ್ರಮ ಒಂದು ಬಗೆಯದ್ದಾದರೆ, ಅಕ್ಷರದ ತಿಳಿವಳಿಕೆಯಿಲ್ಲದೆ ನೀಡುವ ಜನಪದೀಯ ಶಿಕ್ಷಣ ಇನ್ನೊಂದು ಬಗೆಯದ್ದು. ಇಂಥ ಪರಿಸ್ಥಿತಿಯಲ್ಲಿ ಭಾರತಕ್ಕೆ ಆಗಮಿಸಿದ್ದು ಯುರೋಪ್ ಮಾದರಿಯ ಶಿಕ್ಷಣ ಪದ್ಧತಿ.

ಇದುವೇ ಮೆಕಾಲೆ ಇಂಗ್ಲಿಷ್ ಶಿಕ್ಷಣ ಪದ್ಧತಿ. ಇದು ಪರಿಣಾಕಾರಿಯಾಗಿ ಭಾರತದಲ್ಲಿ ನೆಲೆಯೂರಿತು. ನೆಲೆಯೂರಿಸಿಕೊಂಡೆವು. ಕಾರಣವೇನೆಂದರೆ, ಇದರ ಅನುಷ್ಠಾನಕ್ಕೆ ಸಾಮಾಜಿಕವಾಗಿ ಸೂಕ್ತವಾದ ವೇದಿಕೆ ಅದಾಗಲೇ ಭಾರತೀಯ ಶಿಕ್ಷಣ ವ್ಯವಸ್ಥೆ ಯಲ್ಲಿತ್ತು.

ಒಂದು: ಜಾತಿಯ ಹಿನ್ನಲೆಯಲ್ಲಿ ಹುಟ್ಟಿದ ನ್ಯಾಯಿಕ ಪರಿಕಲ್ಪನೆಗಳು. ಇನ್ನೊಂದು: ಇಂಗ್ಲಿಷ್ ಶಿಕ್ಷಣ ಪದ್ಧತಿ ಪೂರ್ಣ ಪ್ರಮಾಣ ದಲ್ಲಿ ಸೆಕ್ಯುಲರ್ ಆಗಿರುವುದರಿಂದ. ಆದ್ದರಿಂದ ಸುಧಾರಣಾವಾದಿಗಳು, ಪ್ರಗತಿಪರರು, ಶಿಕ್ಷಣದಿಂದ ಶೋಷಣೆಗೊಳ ಪಟ್ಟವರು ಇದನ್ನು ಸ್ವಾಗತಿಸಿದರು. ಇಂಗ್ಲಿಷ್ ಶಿಕ್ಷಣ ಪದ್ಧತಿಯೇ ನಿಜವಾದ ಪ್ರಗತಿಪರವಾದದ್ದು ಎಂದು ನಂಬಿದವರು ಆಗಲೂ
ಇದ್ದರು. ಈಗಂತೂ ಬಿಡಿ, ಅದರದ್ದೇ ಖಾನ್‌ದಾನ್ ಬೆಳೆದು ಬಿಟ್ಟಿದೆ.

ಕನ್ನಡದಂಥ ದೇಶೀಯ ಭಾಷೆಗಳು ಅಸ್ತಿತ್ವವನ್ನು ಕಳೆದುಕೊಂಡು ಬಿಟ್ಟಿದೆ! ಇದು ದೇಶೀಯ ಭಾಷೆಗಳ ದುರಂತ! ಮೊದಲು ಶಿಕ್ಷಣ, ಆನಂತರ ಸಾಕ್ಷರತೆ ಎಂಬ ಪರಿಕಲ್ಪನೆಯ ಮೇಲೆ ಶಿಕ್ಷಣ ನೀತಿಯನ್ನು ರೂಪಿಸಬೇಕು. ಎಲ್ಲಕ್ಕಿಂತ ಮೊದಲು ಆಗಬೇ ಕಾದುದೇನೆಂದರೆ, ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಭ್ರಮೆಯಿಂದ ನಾವು ಕಳಚಿಕೊಳ್ಳುವುದು. ಅಂದರೆ ಮುಖ್ಯವಾಗಿ ಜಾಗತೀಕರಣದಿಂದ ಹೊರಬರಲು ಸಾಧ್ಯವೇ ಇಲ್ಲ ಎಂಬ ಮಾನಸಿಕತೆಯಿಂದ ಹೊರ ಬರಬೇಕಿದೆ. ಈ ಹುಚ್ಚು ಬಿಡದಿದ್ದರೆ ಬಡವರಿಗೆ ಬದುಕಿನ ಭದ್ರತೆಯ ಆತಂಕ ಇದ್ದೇ ಇರುತ್ತದೆ.

ಉದ್ಯೋಗ ಸಿಗಬೇಕಾದರೆ ಇಂಗ್ಲಿಷನ್ನು ಕಲಿಯಬೇಕು ಎಂಬ ವಾದವೇ ಹಾಸ್ಯಾಸ್ಪದ. ಯಾಕೆಂದರೆ, ಉತ್ಪಾದನೆ ಹೆಚ್ಚುವುದು
ಬೇಡಿಕೆ ಹುಟ್ಟಿಕೊಂಡಾಗ ಮಾತ್ರ. ಬೇಡಿಕೆ ಹೆಚ್ಚಾದಂತೆ ಉತ್ಪಾದನೆ ಹೆಚ್ಚಬೇಕು. ಆಗ ಸಹಜವಾಗೇ ಉದ್ಯೋಗ ಸೃಷ್ಟಿ ಯಾಗುತ್ತದೆ. ಈ ಜಾಗತೀಕರಣದ ಪ್ರಭಾವವನ್ನು, ಪರಿಣಾಮವನ್ನು ಅನುಭವಿಸುವುದು ಪ್ರಧಾನವಾಗಿ ಬಡರಾಷ್ಟ್ರಗಳೇ
ಹೊರತು ಶ್ರೀಮಂತ ರಾಷ್ಟ್ರಗಳಲ್ಲ. ಯಾಕೆಂದರೆ, ತನ್ನಲ್ಲಿ ಉತ್ಪಾದನೆಯಾದ ಸರಕುಗಳನ್ನು ಅಮೆರಿಕದಂಥ ರಾಷ್ಟ್ರಗಳು ಹೊತ್ತು ಹಾಕುವುದು ಒಂದೋ, ಬಡರಾಷ್ಟ್ರಗಳ ಮೇಲೆ, ಇಲ್ಲ ಅತ್ಯಧಿಕ ಜನಸಂಖ್ಯೆಯುಳ್ಳ ಭಾರತ, ಚೀನಾದಂಥ ರಾಷ್ಟ್ರಗಳ ಮೇಲೆ.

ತನ್ನ ದೇಶದಲ್ಲಿ ಉಂಟಾದ ಆರ್ಥಿಕ ಕುಸಿತವನ್ನು ಅಮೆರಿಕ ನೀಗಿಸಿಕೊಂಡದ್ದು ಜಾಗತೀಕರಣದ ಮೂಲಕವೇ! ಆಗ ಮಿತಿ
ಮೀರಿದ ಜನಸಂಖ್ಯೆಯುಳ್ಳ ಚೀನಾ, ಭಾರತದಂಥ ರಾಷ್ಟ್ರಗಳು ಅಮೆರಿಕ ಕಂಡುಕೊಂಡ ಜಾಗತೀಕರಣದ ಮೋಹಕ್ಕೆ ಒಳಗಾಗಿ
ಕೊಳ್ಳುಬಾಕ ಸಂಸ್ಕೃತಿಗೆ ಮೊರೆ ಹೋಯಿತು. ಆಫ್ ಕೋರ್ಸ್ ಮೊರೆ ಹೋಗಲೇಬೇಕಾಯಿತು. ಮೊದಲು ಅಮೆರಿಕ ಕಂಡು ಕೊಂಡ ಈ ಜಾಗತೀಕರಣವನ್ನು ಈಗ ಚೀನಾ ಎಗ್ಗಿಲ್ಲದೆ ಮುಂದುವರೆಸಿದೆ. ಇದರಿಂದ ಭಾರತದ ಸಾಂಸ್ಕೃತಿಕ ನೆಲೆಗಳು ನಾಶ ವಾಗುತ್ತ ಬಂದವು. ಪುಣ್ಯವೆಂದರೆ, ಈಗ ನಮಗೆ ಮನವರಿಕೆಯಾಗಿದೆ.

ಈ ಜಾಗತೀಕರಣದ ಕಪಿಮುಷ್ಟಿಗೆ ಸಿಲುಕಿದ ರಾಷ್ಟ್ರವೊಂದರ ಜೀವನಶೈಲಿಯೇ ಬದಲಾಗಿ ಹೋಗುತ್ತದೆ. ಮುಖ್ಯವಾಗಿ, ಭಾರತ ದಲ್ಲಿ 1991ರ ಅನಂತರದ ವರ್ಷಗಳಲ್ಲಿ ಎಲ್ಲ ರಂಗಗಳಲ್ಲಿಯೂ ಆಗುತ್ತಿರುವ ಸಾಂಸ್ಕೃತಿಕ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ನಾನು ನಮಸ್ಕರಿಸುವಾಗ ಎರಡು ಕೈಗಳನ್ನು ಜೋಡಿಸಿ ತಲೆತಗ್ಗಿಸಿ ಮುಗಿಯುತ್ತೇನೆ. ಆದರೆ ಹಾಯ್ ಎನ್ನುವಾಗ ಸುಮ್ಮನೆ ಕೈಯತ್ತಿ ಅಡಿಸುತ್ತೇನೆ.

ಅಂದರೆ ನನ್ನ ಬದುಕಿನ ಸಾಂಸ್ಕೃತಿಕ ಪಲ್ಲಟದಲ್ಲಿ ಇಂಗ್ಲಿಷ್ ಕೂಡ ಪ್ರಭಾವವನ್ನು ಬೀರುತ್ತದೆ. ಇದು ಜಾಗತೀಕರಣದಿಂದಾ
ಬೌದ್ಧಿಕ ಪಲ್ಲಟ. ಕ್ರಮೇಣ ನಾನು ಬದಲಾದ ಬದುಕಿನ ಶೈಲಿಗೆ ಬೇಕಾದಂತೆ ಬಟ್ಟೆಗಳನ್ನು, ಕಾರ್ಪೊರೇಟ್ ಪ್ರಪಂಚದ ಉತ್ಪನ್ನ
ಗಳನ್ನು ಜಾಹೀರಾತುಗಳ ಮೂಲಕ ಖರೀದಿಸುತ್ತ ಬದುಕಲು ಆರಂಭಿಸುತ್ತೇನೆ. ಬದುಕನ್ನು ಕಟ್ಟಿಕೊಳ್ಳುವುದು ಅಂತ ಹಿರಿಯರು ಬಾಳಿ ಬದುಕಿದ ಮಾರ್ಗವನ್ನು ತ್ಯಜಿಸುತ್ತೇನೆ. ನನ್ನ ಬದುಕು ಅವರ ಉತ್ಪಾದನೆಯನ್ನು ಹೆಚ್ಚಿಸುವುದು ಎಂತಾದಾಗ ಒಂದಿಷ್ಟು ಉದ್ಯೋಗವೂ ಸೃಷ್ಟಿಯಾಗುತ್ತದೆ.

ಅದರೆ ಉದ್ಯೋಗವು ಭಾಷೆಯನ್ನು ಅವಲಂಬಿಸಿರುವುದಿಲ್ಲ. ಅದು ಬೇಡಿಕೆಯನ್ನು ಅವಲಂಬಿಸಿರುತ್ತದೆ. ಈ ರೀತಿಯಲ್ಲಿ ನಾವು ಬೇಡಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಅದಕ್ಕೆ ಸಮಾನವಾಗಿ ಉತ್ಪಾದನೆಯನ್ನು ಮಾಡಬೇಕಾಗುತ್ತದೆ. ಆಗದು ದೊಂಬ ರಾಟವೇ ಆಗಿಬಿಡುತ್ತದೆ. ಯಾಕೆಂದರೆ, ಉತ್ಪಾದನೆ ಯಾವಾಗಲೂ ಬೇಡಿಕೆಗಿಂತ ಜಾಸ್ತಿ ಇರುತ್ತದೆ. ಉದ್ಯೋಗ ಸೃಷ್ಟಿಯೂ
ಜಾಸ್ತಿ ಮಾಡಿಕೊಳ್ಳುತ್ತ ಹೋದಹಾಗೆ ಬೇಡಿಕೆ ಕಡಿಮೆಯಾಗುತ್ತ ಹೋದ ಹಾಗೆ ಉತ್ಪಾದನೆ ಉಳಿದು ಬಿಡುತ್ತದೆ. ಆಗ  ಜಾಗತೀ ಕರಣವನ್ನು ಅಮೆರಿಕದ ದೊಡ್ಡ ದೊಡ್ಡ ಕೈಗಾರಿಕೆಗಳೇ ನಿರ್ಧರಿಸುವಂಥ ಸನ್ನಿವೇಶವೂ ಹುಟ್ಟಿಕೊಳ್ಳುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದೇನೆಂದರೆ, ಅಮೆರಿಕ ತನ್ನ ಆರ್ಥಿಕ ಮುಗ್ಗಟ್ಟನ್ನು ಎದುರಿಸುವ ಹಂತಕ್ಕೆ ತಲುಪಿದ್ದು 1929ರಲ್ಲಿ.

ಅನಂತರದ ಹತ್ತು ವರ್ಷಗಳಲ್ಲಿ ಅಮೆರಿಕ ಅದನ್ನು ಸಮತೋಲನಕ್ಕೆ ತಂದುಕೊಳ್ಳಲು ಹರಸಾಹಸ ಪಟ್ಟಿದ್ದು ಈಗ ಚರಿತ್ರೆ!
ಆದರೆ ಭಾರತಕ್ಕೆ ಇದಿನ್ನೂ ಸಾಧ್ಯವಾಗಿಲ್ಲ. ಕಾರಣ ಇಷ್ಟೇ; ಇಂಗ್ಲಿಷನ್ನು ಕಲಿತರೆ ಮಾತ್ರ ಉದ್ಯೋಗ ಸಿಗುತ್ತದೆಂಬ ಭ್ರಮೆಯಲ್ಲಿ ಸರಿಹೊತ್ತಿನವರೆಗೂ ಮುಳುಗಿರುವುದರಿಂದ!