ಪಶ್ಚಿಮ ಡಾರ್ಫರ್ ಪ್ರಾಂತ್ಯದ ಕುಲ್ಬಸ್ ಪಟ್ಟಣದಲ್ಲಿ ಅರಬ್ ಮತ್ತು ಆಫ್ರಿಕನ್ ಬುಡಕಟ್ಟು ಜನಾಂಗದವರ ನಡುವಿನ ಭೂ ವಿವಾದದ ಹೋರಾಟದಲ್ಲಿ ಹಿಂಸಾಚಾರ ಉಲ್ಬಣಗೊಂಡಿದೆ ನಿರಾಶ್ರಿತರ ಸಂಸ್ಥೆಯ ಸಂಯೋಜಕ ಹಾರ್ವರ್ಡ್ ಹೇಳಿದ್ದಾರೆ.
ಸ್ಥಳೀಯ ಅರಬ್ ಸೇನಾಪಡೆಗಳು ಆ ಪ್ರದೇಶದಲ್ಲಿನ ಅನೇಕ ಹಳ್ಳಿಗಳ ಮೇಲೆ ದಾಳಿ ಮಾಡಿ, ಸಾವಿರಾರು ಜನರನ್ನು ಪಲಾಯನ ಮಾಡುವಂತೆ ಮಾಡಿದವು ಎಂದು ಅವರು ಹೇಳಿದರು.
ಪಟ್ಟಣದ ಬುಡಕಟ್ಟು ನಾಯಕ ಅಬ್ಕರ್ ಅಲ್-ಟೌಮ್ ಈ ಕುರಿತು ಪ್ರತಿಕ್ರಿಯಿಸಿದ್ದು, ಸೇನಾಪಡೆಗಳು 20 ಕ್ಕೂ ಹೆಚ್ಚು ಹಳ್ಳಿಗಳಿಗೆ ಬೆಂಕಿ ಹಚ್ಚಿದ್ದರಿಂದ 62 ಸುಟ್ಟುಕರಕಲಾದ ಶವಗಳು ಪತ್ತೆಯಾಗಿವೆ ಎಂದು ಹೇಳಿದರು. ಹೆಚ್ಚಿನ ಭದ್ರತಾ ಪಡೆಗಳನ್ನು ಈ ಪ್ರದೇಶ ಕ್ಕೆ ನಿಯೋಜಿಸಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿ ಅಬ್ಬಾಸ್ ಮುಸ್ತಫಾ ತಿಳಿಸಿದ್ದಾರೆ.