ವಿಶ್ವವಾಣಿ ಸುದ್ದಿಮನೆ ಬೆಂಗಳೂರು:
ಕಾರ್ನಲ್ಲಿ ಇಬ್ಬರು ಹಾಗೂ ಬೈಕ್ನಲ್ಲಿ ಒಬ್ಬರು ಸಂಚರಿಸಬಹುದಾಗಿದೆ. ನಿಯಮ ಉಲ್ಲಂಘಿಸಿದವರ ವಾಹನಗಳನ್ನು ಜಪ್ತಿ ಮಾಡಿವಂತೆ ನಗರದ ಎಲ್ಲಾ ಠಾಣೆಗಳಿಗೂ ಮೌಖಿಕ ಆದೇಶವನ್ನು ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ನೀಡಿದ್ದಾರೆ.
ಸಂಚಾರಿ ನಿಯಮ ಮೀರಿದರೆ ವಾಹನ ಜಪ್ತಿಯಾಗಲಿದೆ.
ನಗರಾದ್ಯಂತ ಪೊಲೀಸ್ ಕಣ್ಗಾವಲಿದ್ದು, ಸವಾರರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಪಾಸ್ಗಳ ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಪಾಸ್ ಪಡೆದು ಹಲವರು ರಸ್ತೆಗಿಳಿಯುತ್ತಿದ್ದಾರೆ. ಅನವಶ್ಯಕ ಸುತ್ತಾಟಕ್ಕೆ ಸಂಪೂರ್ಣ ಬ್ರೇಕ್ ಬೀಳಬೇಕಿದೆ ಎಂದು ಹೇಳಿದರು.ಹೆಚ್ಚಿನ ಸವಾರರು ಕಂಡು ಬಂದಲ್ಲಿ ರಸ್ತೆ ಮಧ್ಯೆ ಕೆಳಗಿಳಿಸಿ. ಇದಕ್ಕೆ ಹಿಂದೇಟು ಹಾಕಿದ ಸವಾರರ ವಾಹನವನ್ನು ಯಾವುದೇ ಮುಲಾಜಿಲ್ಲದೆ ವಶಕ್ಕೆ ಪಡೆಯುವಂತೆ ಸೂಚಿಸಿದ್ದಾರೆ.