ಬೆಂಗಳೂರು: ಜ್ಞಾನಭಾರತಿ ಕ್ಯಾಂಪಸ್ ಬಳಿ ಇರುವ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ವಿವಿ ಕ್ಯಾಂಪಸ್ ಅನ್ನು ಸೋಮ ವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಇದೇ ವೇಳೆ, ಅಂಬೇಡ್ಕರ್ರ ಪುತ್ಥಳಿಯನ್ನೂ ಪ್ರಧಾನಿ ಅನಾವರಣ ಮಾಡಿದರು. 201 ಕೋಟಿ ರೂ. ವೆಚ್ಚದಲ್ಲಿ ಬೇಸ್ ವಿವಿಯ ನೂತನ ಕ್ಯಾಂಪಸ್ ಅನ್ನು ನಿರ್ಮಿಸಲಾಗಿದೆ. ಮೇಲ್ದರ್ಜೆಗೇರಿಸಿದ 150 ಐಟಿಐ ಹಬ್ಗಳನ್ನೂ ಲೋಕಾರ್ಪಣೆ ಮಾಡಿದರು.
ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಿರುವ ಐಟಿಐ ಹಬ್ಗಳನ್ನು ಪ್ರಧಾನಿ ಅವರು ಖುದ್ದು ವೀಕ್ಷಿಸಿದರು. ಪ್ರತಿ ವರ್ಷ 1.2 ಲಕ್ಷ ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡುವ ಗುರಿ ಹೊಂದಲಾಗಿದೆ.
ಪ್ರಧಾನಿ ಅವರಿಗೆ ಅಂಬೇಡ್ಕರ್ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಾಜ್ಯಪಾಲ ಥಾವರ್ಚಂದ್ ಗೆಹಲೋತ್, ಸಿಎಂ ಬಸವ ರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಅಶ್ವಥ್ನಾರಾಯಣ್, ವಿ. ಸೋಮಣ್ಣ, ಶ್ರೀರಾಮುಲು ಉಪಸ್ಥಿತರಿದ್ದರು.