Monday, 25th November 2024

ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪುರಸ್ಕಾರ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 
ಪ್ರಶಸ್ತಿಯು ಬೆಂಗಳೂರು ವಿಮಾನ ನಿಲ್ದಾಣದ ಸೇವೆಗಳಿಗೆ ಗ್ರಾಹಕರ ಸಂತೃಪ್ತಿ ಆಧರಿಸಿದ್ದು ಪ್ರಯಾಣಿಕರ ದೃಢೀಕರಣ ಪ್ರತಿಫಲಿಸಿದೆ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ೨೦೨೨ ಸ್ಕೆöÊಟ್ರಾಕ್ಸ್ ವರ್ಲ್ಡ್ ಏರ್‌ ಪೋರ್ಟ್ ಅವಾರ್ಡ್ಸ್ನಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪುರಸ್ಕರಕ್ಕೆ ಭಾಜನ ವಾಗಿದೆ. ಪ್ರತಿ ವರ್ಷ ಜಾಗತಿಕವಾಗಿ ನಡೆಸಲಾಗುವ ಸಮೀಕ್ಷೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಅತ್ಯುತ್ತಮ ಗ್ರಾಹಕ ಸೇವೆಗೆ ಗ್ರಾಹಕರು ಮತದಾನ ಮಾಡಿ ಈ ಮಾನ್ಯತೆಯನ್ನು ನೀಡಿದ್ದಾರೆ.

ಚೆಕ್-ಇನ್-ನಿಂದ ಆಗಮನದವರೆಗೆ, ವರ್ಗಾವಣೆಗಳು, ಶಾಪಿಂಗ್, ಭದ್ರತೆ, ವಲಸೆ ಗೇಟ್‌ ಗಳಲ್ಲಿ ನಿರ್ಗಮನ ಹೀಗೆ ಸಮೀಕ್ಷೆಯು ವಿಮಾನ ನಿಲ್ದಾಣದಾದ್ಯಂತ ಗ್ರಾಹಕರ ಅನುಭವ ಮತ್ತು ಪ್ರಮುಖ ಕಾರ್ಯಕ್ಷಮತೆಯ ಅಂಶಗಳನ್ನು ಮೌಲ್ಯಮಾಪನ ಮಾಡು ವಲ್ಲಿ ಯಶಸ್ವಿಯಾಗಿದೆ.

ಈ ಪ್ರಶಸ್ತಿ ಸಮಾರಂಭವು ಫ್ರಾನ್ಸ್ನ ಪ್ಯಾರಿಸ್ ಪ್ಯಾಸೆಂಜರ್ ಟರ್ಮಿನಲ್ ಎಕ್ಸ್ಪೊದಲ್ಲಿ ಜೂನ್ ೧೬, ೨೦೨೨ರಂದು ನಡೆಯಿತು. ಈ ಕಾರ್ಯಕ್ರಮವು ವೈಮಾನಿಕ ವಲಯದಲ್ಲಿ ಅತ್ಯಂತ ಪ್ರತಿಷ್ಠಿತ ಗುಣಮಟ್ಟದ ಪ್ರಶಸ್ತಿಗಳಲ್ಲಿ ಒಂದಾಗಿದ್ದು ವಿಶ್ವದ ವಿವಿಧ ಭಾಗದ ಸಿಇಒಗಳು, ಅಧ್ಯಕ್ಷರು ಮತ್ತು ಹಿರಿಯ ಆಡಳಿತಗಾರರು ಉಪಸ್ಥಿತರಿದ್ದರು.

ಬೆಂಗಳೂರು ಅಂತಾರಾಷ್ಟಿçÃಯ ವಿಮಾನ ನಿಲ್ದಾಣ ನಿಗಮ(ಬಿಐಎಎಲ್)ನ ಎಂ.ಡಿ. ಮತ್ತು ಸಿಇಒ ಹರಿ ಕೆ.ಮರಾರ್ “ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಪುರಸ್ಕಾರ ಪಡೆಯುವುದು ನಮಗೆ ಅಪಾರ ಸಂತೋಷ ತಂದಿದೆ. ನಮ್ಮ ಸತತ ಬದ್ಧತೆ ಹಾಗೂ ದಣಿವಿರದ ಪ್ರಯತ್ನಗಳು ನಮ್ಮ ಪ್ರಯಾಣಿಕ ರಿಗೆ ಮಹತ್ತರವಾದ ವಿಮಾನ ನಿಲ್ದಾಣದ ಅನುಭವಗಳನ್ನು ನೀಡುವಲ್ಲಿ ಸಫಲವಾಗಿವೆ. ವರ್ಷ ವರ್ಷ ನಾವು ಪಡೆಯುತ್ತಿರುವ ಈ ಪ್ರಶಸ್ತಿಗಳು ಇದನ್ನು ಪಡೆಯುವಲ್ಲಿ ನಾವು ಸರಿಯಾದ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇವೆ ಎನ್ನುವುದಕ್ಕೆ ಅಂಗೀಕಾರ ವಾಗಿದೆ” ಎಂದು ನುಡಿದರು.

ಸ್ಕೆöÊಟ್ರಾಕ್ಸ್ನ ಸಿಇಒ ಎಡ್ವರ್ಡ್ ಪ್ಲೆöÊಸ್ಟೆಡ್, “ನಾವು ಬೆಂಗಳೂರು ಅಂತಾರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ೨೦೨೨ರ ಅತ್ಯುತ್ತಮ ಭಾರತ/ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಮುಖ ಗ್ರಾಹಕ ಪುರಸ್ಕಾರ ಪಡೆದಿರುವುದಕ್ಕೆ ಅಭಿನಂದಿಸುತ್ತೇವೆ. ಕಳೆದ ಎರಡು ವರ್ಷಗಳು ವಿಶ್ವದಾದ್ಯಂತ ಕೋವಿಡ್-೧೯ ನಿರ್ಬಂಧಗಳಿAದ ಹಾಗೂ ಪ್ರಯಾಣದ ಬೇಡಿಕೆ ತೀವ್ರ ಕುಸಿತದಿಂದ ವಿಮಾನ ನಿಲ್ದಾಣಗಳಿಗೆ ಅತ್ಯಂತ ಕಠಿಣವಾಗಿದ್ದವು. ವೈಮಾನಿಕ ಪ್ರಯಾಣ ತ್ವರಿತವಾಗಿ ಹೆಚ್ಚು ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯುನ್ನತ ಮಾನದಂಡಗಳ ಸವಾಲನ್ನು ಸಮರ್ಥ ವಾಗಿ ಪೂರೈಸಲಾಗುತ್ತಿದೆ” ಎಂದು ಶ್ಲಾಘಿಸಿದರು.

ಆವಿಷ್ಕಾರದತ್ತ ತುಡಿಯುವ ಬಿಐಎಎಲ್ ತನ್ನ ಎಲ್ಲ ಪ್ರಯಾಣಿಕರಿಗೆ ಅತ್ಯುತ್ತಮ ವಿಮಾನ ನಿಲ್ದಾಣದ ಅನುಭವ ನೀಡಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅನುಷ್ಠಾನಗೊಳಿಸಿದೆ. ಇದರ ದೃಢೀಕರಣಕ್ಕೆ ಬೆಂಗಳೂರು ವಿಮಾನ ನಿಲ್ದಾಣವು `ವಿಂಗ್ಸ್ ಇಂಡಿಯಾ ಅವಾರ್ಡ್ಸ್’ ೨೦೨೨ರಲ್ಲಿ `ಬೆಸ್ಟ್ ಏರ್‌ಪೋರ್ಟ್ ಅಂಡ್ ಏವಿಯೇಷನ್ ಇನ್ನೊವೇಷನ್ ಅವಾರ್ಡ್’ ಪಡೆದಿದ್ದು, ಸ್ಕೆöÊಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ ೨೦೨೧ರಲ್ಲಿ `ಬೆಸ್ಟ್ ಏರ್‌ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಅಂಡ್ ಸೆಂಟ್ರಲ್ ಏಷ್ಯಾ’ ಪುರಸ್ಕಾರ ಮತ್ತು ಉನ್ನತ ಗ್ರಾಹಕ ಸೇವೆ ಪೂರೈಸುವ ದಣಿವಿರದ ಪ್ರಯತ್ನಗಳಿಗಾಗಿ ಎಸಿಐನ `ವಾಯ್ಸ್ ಆಫ್ ದಿ ಕಸ್ಟಮರ್’ ಪುರಸ್ಕಾರ ನೀಡಿದೆ.