Saturday, 26th October 2024

ಪೋಲಕಪಳ್ಳಿ: ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

ಚಿಂಚೋಳಿ: ತಾಲೂಕಿನ ಪೋಲಕಪಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೇ ನಂ 45 ರಲ್ಲಿ ಅಕ್ರಮವಾಗಿ ಮನೆಯ ಕಟ್ಟಡ ನಿರ್ಮಿಸಿಕೊಂಡ ಫಲಾನು ಭವಿಗಳಿಗೆ 94 ಸಿ ನಿಯಮದ ಅಡಿಯಲ್ಲಿ ಸಕ್ರಮಗೊಳಿಸಿ, ಕಂದಾಯ ಇಲಾಖೆ ಯ ಅಧಿಕಾರಿ ತಹಸೀ ಲ್ದಾರ್ ಅಂಜುಮ್ ತಬಸ್ಸುಮ್ ಅವರು ಪೋಲಕಪಳ್ಳಿ ಗ್ರಾಮ ಪಂಚಾಯತ ಕಚೇರಿಯಲ್ಲಿ ಹಕ್ಕು ಪತ್ರಗಳನ್ನು ವಿತರಿಸಿದರು.

ಹಕ್ಕು ಪತ್ರ ವಿತರಣೆಗೆ ಒಟ್ಟು 310 ಅರ್ಜಿಗಳನ್ನು ಬಂದಿದ್ದು, ಇದರಲ್ಲಿ 117 ಅರ್ಜಿಗಳನ್ನು ಪರಿಶೀಲನೆ ಮಾಡಿ ಹಕ್ಕು ಪತ್ರಗಳನ್ನು ನೀಡಲಾಗಿದೆ. 154 ಹಕ್ಕು ಪತ್ರಗಳಿಗೆ ಫಲಾನುಭವಿಗಳು ಚಾಲನ್ ತುಂಬದೆ ಇರುವುದರಿಂದ ಕೊಡುವುದು ಬಾಕಿವುಳುದಿವೆ. 39 ಅರ್ಜಿಗಳು ಫಲಾನುಭವಿ ಗಳು ನೀಡಿದ ಮಾಹಿತಿಗೆ ಇಲಾಖೆಯ ಮಾಹಿತಿಗೆ ಸರಿಯಾಗಿ ಹೊಂದಿಕೆ ಆಗದ ಕಾರಣ ತಿರಸ್ಕರಿಸಲಾಗಿದೆ ಎಂದು ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರು ತಿಳಿಸಿದರು.

ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೈ. ಎಲ್. ಹಂಪಣ್ಣ ಅವರು ಮಾತನಾಡಿ, ಇಷ್ಟು ದಿವಸ ಸರಕಾರಿ ಜಮೀನಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡು ವಾಸುತ್ತಿದ್ದೀರಿ, ಮನೆಯನ್ನು ಕಟ್ಟಿಕೊಂಡವರು, ಬಡತನ ರೇಖೆಗಿಂತ ಕೆಳಗಿನವರು ಆಗಿರು ವವರ ಅನುಕೂಲಕ್ಕಾಗಿ ಸರಕಾರ ಅಕ್ರಮ ಸಕ್ರಮ ಎಂದು ಹೊಸ ಯೋಜನೆ ಯನ್ನು ತಂದು ಸರಕಾರ ನಿಮ್ಮ ಮನೆಬಾಗಿಲಿಗೆ ಬಂದು ನಿಮಗೆ ಅಕ್ರಮ ವಾಗಿದ್ದ ಮನೆಗಳನ್ನು ಸಕ್ರಮ ಮಾಡಿಕೊಡುತ್ತಿದೆ ಎಂದು ಹೇಳಿದರು.

ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಾತನಾಡಿ, ತೆಗೆದುಕೊಂಡಿರುವ ಹಕ್ಕು ಪತ್ರಗಳನ್ನು ಪಂಚಾಯತಿಯಲ್ಲಿ ದಾಖಲಿಸ ಬೇಕು. ಇದ್ದರಿಂದ ನಿಮ್ಮ ಮುಂದಿನ ದಿನಗಳಲ್ಲಿ ಪಂಚಾಯತಿ ಸೌಲಭ್ಯ ಗಳನ್ನು ಪಡೆದುಕೊಳಲ್ಲು ಅರ್ಹತೆ ಪಡೆದುಕೊಳ್ಳು ವುದು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಗ್ರಾಮದ ಪ್ರಥಮ ಪ್ರಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೈಯದ್ ಜಾಕೀರ್ ಸಾಬ್, ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ್ ದುಗ್ಗನ್, ಕಂದಾಯ ನೀರಿಕ್ಷಕ ರವಿಕುಮಾರ ಚಿಟ್ಟಾ, ಗ್ರಾಮ ಲೆಕ್ಕಾಧಿಕಾರಿ ಸುಮ್ಮ, ಗ್ರಾ. ಪಂ. ಸದಸ್ಯರಾದ ರಾಜ ಶೇಖರ ನಾಟಿಕಾರ್, ಜಗನ್ನಾಥ ಕೊಡಬಳ, ಹಣಮಂತ ಕೊಡಡೂರ್, ಹಣಮಂತ, ಗುರುಬಸವ, ನರಸಪ್ಪ ಪೂಜಾರಿ, ಶಂಕ್ರಪ್ಪ ಹಿತ್ತಲ, ಗ್ರಾಮಸ್ಥರಾದ ಶಿವರಾಜ ಪಾಟೀಲ್, ಖುರಾನ್ ಭಟ್ಟಿ, ನಸೀರ್ ಪಟೇಲ್, ಜಾಕೀರ್ ಟೇಲರ್, ನಿಯಮತ್ ಟೇಲರ್, ಶಿವಗಿರಪ್ಪ ಪ್ಯಾರಶಾಬದಿ ಇದ್ದರು.