Monday, 25th November 2024

ಅಪಪ್ರಚಾರದಿಂದ ವಿಕಲಚೇತನರಿಗೆ ಸವಲತ್ತು ದೊರೆಯುತ್ತಿಲ್ಲ: ನ್ಯಾ.ರಾಘವೇಂದ್ರ ಶೆಟ್ಟಿಗಾರ್

ತುಮಕೂರು: ಮಾಹಿತಿಯ ಕೊರತೆ ಮತ್ತು ಕೆಲವರ ಅಪಪ್ರಚಾರದಿಂದಾಗಿ ವಿಕಲಚೇತನರಿಗೆ ಸರಕಾರದ ಸವಲತ್ತುಗಳು ನಿರಾ ಶಾಯವಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಂಗವಿಕಲರ ಪುನರವಸತಿ ವ್ಯಕ್ತಿಗಳಾಗಿ ಕೆಲಸ ಮಾಡುತ್ತಿರುವ ನೀವುಗಳು ಹೆಚ್ಚು ಜವಾಬ್ದಾರಿ ವಹಿಸಿ ಕಾರ್ಯನಿರ್ವಹಸಬೇಕಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದ್ದಾರೆ.
ನಗರದ ಬಾಲಭವನದಲ್ಲಿ ಚಶೈರ್ ಡಿಸೈಬಲಿಟಿ ಟ್ರಸ್ಟ್,ಬೆಂಗಳೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾ ಣಾಭಿವೃದ್ದಿ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶ ನಾಲಯ ಹಾಗೂ ಹೆಲನ್ ಕೆಲರ್ ಇಂಟಿಗ್ರೇಟೆಡ್ ಎಜುಕೇಷನ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರ ಯೋಜನೆಗಳ ಬಗ್ಗೆ ಅರಿವು ಮೂಡಿ ಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ನೀವು ಸಕ್ರಿಯ ವಾಗಿ ಕಾರ್ಯನಿರ್ವಹಿಸುವ ಮೂಲಕ ನೀವು ಹಾಗೂ ನಿಮ್ಮಿಂದ ಹಲವರು ಸರಕಾರದ ಸವಲತ್ತುಗಳನ್ನು ಪಡೆಯಲು ಕಾರಣಕರ್ತರಾಗಬೇಕೆಂದರು.
ಚಶೈರ್ ಡಿಸೈಬಲಿಟಿ ಟ್ರಸ್ಟ್ ಬೆಂಗಳೂರಿನ ವ್ಯವಸ್ಥಾಪಕರಾದ  ಅನುರಾಧ ಪಾಟೀಲ್ ಮಾತನಾಡಿ, ಅಂಗವಿಕಲರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2011ರಲ್ಲಿ ಪ್ರಾರಂಭ ವಾದ ನಮ್ಮ ಸಂಸ್ಥೆ ಇದುವರೆಗೂ ಐದು ಸಾವಿರ ಜನ ಅಂಗವಿಲರಿಗೆ ಅಗತ್ಯ ತರಬೇತಿ ನೀಡಿ, ಅವರಲ್ಲಿ ಶೇ70ರಷ್ಟು ಜನರಿಗೆ ವಿವಿಧೆಡೆ ಉದ್ಯೋಗ ದೊರೆಯುವಂತೆ ಮಾಡಿದೆ.
ತುಮಕೂರು ಜಿಲ್ಲೆಯಲ್ಲಿಯೂ ಇದುವರೆಗೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಳೆದ ಒಂದು ವರ್ಷದಿಂದ ಹೊಲಿಗೆ ತರಬೇತಿ ಪಡೆದ ಅಂಗವಿಕಲ ಹೆಣ್ಣು ಮಕ್ಕಳಲ್ಲಿ 26 ಜನರಿಗೆ ಇಂದು ಉಚಿತವಾಗಿ ಹೊಲಿಗೆ ಯಂತ್ರ ವಿತರಿಸುವ ಕೆಲಸ ನಡೆದಿದೆ.ಇದರ ಜೊತೆಗೆ ಹೆಲನ್‌ಕೆಲರ್ ಸಂಸ್ಥೆಯ ಜೊತೆ ಸೇರಿದ ಅತಿ ಚಿಕ್ಕಮಕ್ಕಳಲ್ಲಿ ಕಂಡು ಬರುವ ಶ್ರವಣ ದೋಷವನ್ನು ಗುರುತಿಸಿ, ಅವರಿಗೆ ಅಗತ್ಯ ತರಬೇತಿ ನೀಡುವ ಮೂಲಕ ಅವರನ್ನು ಸಾಮಾನ್ಯ ಮನುಷ್ಯರಂತೆ ಸಮಾಜದಲ್ಲಿ ಬೆಳೆಯಲು ಅವಕಾಶ ಕಲ್ಪಿಸಲಿದೆ ಎಂದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಎಂ.ರಮೇಶ್ ಮಾತನಾಡಿ,ಕಲಿಕೆ ಎಂಬುದು ಎಲ್ಲಾ ಹಂತದ ನೌಕರರಿಗೂ ನಿರಂತರ. ಈ ಹಿನ್ನೇಲೆಯಲ್ಲಿ ಹೊಸದಾಗಿ ಅಂಗವಿಕಲರ ಕಲ್ಯಾಣಕ್ಕಾಗಿ ಸರಕಾರ ಜಾರಿಗೆ ತಂದಿರುವ ಆರ್.ಪಿ.ಡಬ್ಯು ಯೋಜನೆಗಳ ಕುರಿತು ಇಂದು ದಾವಣಗೆರೆಯ ಸಿಆರ್‌ಸಿ ಅವರುಗಳು ಮಾಹಿತಿ ನೀಡಲಿದ್ದಾರೆ.  ಸರಕಾರವು ಸಹ ನಿಮಗೆ ನೀಡುತ್ತಿರುವ ಗೌರವಧನವನ್ನು ಕನಿಷ್ಠ ಕೂಲಿ ಕಾಯ್ದೆಗೆ ಅನುಗುಣವಾಗಿ ನೀಡುವ ಬಗ್ಗೆ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ಅದು ಜಾರಿಗೆ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಸಿಆರ್‌ಸಿ ಸುರೇಂದ್ರಬಾಬು, ಗ್ರಾಯಿತ್ರಿ ರವೀಶ್, ಅಂಗವಿಕಲರ ಕಲ್ಯಾಣಾಧಿಕಾರಿ ಎಂ.ರಮೇಶ್, ಅಂಗವಿಕಲರ ಪುನರ್ವಸತಿ ನೌಕರರ ಸಂಘದ ಅಧ್ಯಕ್ಷ ಚಿತ್ತಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.