ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ಧೃತಿ ಮಹಿಳಾ ಮಾರುಕಟ್ಟೆ ಸಂಸ್ಥೆಯ ಸಂಸ್ಥಾಪಕಿ ಅಪರ್ಣಾರಾವ್
ವಿಶ್ವವಾಣಿ ಕ್ಲಬ್ಹೌಸ್ ಬೆಂಗಳೂರು
ವಿಶ್ವವಾಣಿ ಕ್ಲಬ್ಹೌಸ್ ಏರ್ಪಡಿಸಿದ್ದ ‘ಮಹಿಳೆಯರೇ, ಮನೆಯಲ್ಲೇ ಕುಳಿತು ಉದ್ಯಮಿ ಗಳಾಗಿ’ ಕಾರ್ಯಕ್ರಮದಲ್ಲಿ ಧೃತಿ ಮಹಿಳಾ ಮಾರುಕಟ್ಟೆ ಸಂಸ್ಥೆಯ ಸಂಸ್ಥಾಪಕಿ ಅಪರ್ಣಾ ರಾವ್ ಅವರು ಅರಿವಿನ ಉಪನ್ಯಾಸ ನೀಡಿದರು.
೨೦೨೦ರಲ್ಲಿ ಕರೋನಾ ದೃಷ್ಟಾಂತವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಕರೋನಾ ಬಂದಾಗ ಮತ್ತು ನಂತರದ ವ್ಯತ್ಯಾಸ ಗಳನ್ನು ಗಮನಿಸಿದ್ದೇನೆ. ನಮ್ಮ ಕಣ್ಣ ಮುಂದೆ ಕೆಲಸ ಮಾಡುತ್ತಿದ್ದ ಅನೇಕ ಕೆಲಸಗಾರರು ಕೆಲಸ ಕಳೆದುಕೊಂಡು ಊರು ಬಿಡುವ ಸಂದರ್ಭ, ಏರಿಯಾಗೆ ಏರಿಯಾನೇ ಖಾಲಿಯಗಿತ್ತು.
ವಾಟ್ಸ್ಆಪ್ನಲ್ಲಿದ್ದ ಮಹಿಳೆಯರ ಒಂದು ಗುಂಪಿನಲ್ಲಿ ಮಹಿಳೆಯರ ಉದ್ಯೋಗದ ಬಗ್ಗೆ ಅನೇಕ ಚರ್ಚೆಗಳಾಗುತ್ತಿದ್ದವು. ನನಗೆ ಕಾಸ್ಮೆಟಿಕ್ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದವ ಳಾದ್ದರಿಂದ ಸೋಪ್ಗಳ ಬಗ್ಗೆ ನಮ್ಮ ಗ್ರೂಪ್ನಲ್ಲಿ ಹಂಚಿಕೊಳ್ಳುತ್ತಿದ್ದೆ. ಕೆಲವರು ನನಗೆ ಈ ಸೋಪ್ ತಯಾರಿಕೆ ಮಾಡುವುದಕ್ಕೆ ಪ್ರೋತ್ಸಾಹ ನೀಡಿದ್ದರು.
ತಮಾಷೆಯಾಗಿ ಮಾಡಿಕೊಂಡಿದ್ದ ಹವ್ಯಾಸ ಕರೋನಾ ಸಂದರ್ಭದಲ್ಲಿ ಒಂದು ಮಾರು ಕಟ್ಟೆಯನ್ನೇ ಹುಟ್ಟುಹಾಕುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದರು. ಈ ಮಹಿಳಾ ಮಾರುಕಟ್ಟೆ ಸಂಸ್ಥೆಯನ್ನು ಕೆಲವು ಪರಿಚಿತ ಮಹಿಳೆಯರೊಂದಿಗೆ ಸೇರಿ ಪ್ರಾರಂಭಿ ಸಲಾಯಿತು. ಅವರನ್ನು ಸಂಕೋಚಗಳಿಂದ ಹೊರತಂದು ಉದ್ಯಮ ಕಟ್ಟಿ ಕೊಳ್ಳುವುದಕ್ಕೆ ಪ್ರೇರೇಪಣೆ ನೀಡುವುದು ತುಂಬಾ ಸವಾಲಿನ ಕೆಲಸವಾಗಿತ್ತು.
ಆದರೆ ತಿಂಗಳುಗಟ್ಟಲೇ ಆಗಬೇಕಿದ್ದ ಕೆಲಸಗಳು, ಸದ್ಯ ಭರದಿಂದ ಸಾಗುತ್ತಿದೆ. ದಿನದಿಂದ ದಿನಕ್ಕೆ ಸಾವಿರಾರು ಮಂದಿ ಈ ವೇದಿಕೆ ಮೂಲಕ ತಮ್ಮ ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭ ಮಾಡಿದರು. ನಮ್ಮ ಶ್ರಮಕ್ಕೆ ಮಾಧ್ಯಮಗಳು ಪ್ರೋತ್ಸಾಹ ನೀಡಿದವು. ನಮ್ಮ ಕಾರ್ಯ ಶ್ಲಾಘಿಸಿದರು. ಈ ಮೂಲಕ ವಿಚಾರ ತಿಳಿದ ಅನೇಕರು ಬಂದು ನಮ್ಮ ಕೆಲಸದಲ್ಲಿ ಭಾಗಿಯಾದರು ಎಂದು ತಿಳಿಸಿದರು. ಪ್ರತಿಯೊಬ್ಬ ಮಹಿಳೆಯರಲ್ಲೂ ಒಂದು ಸ್ಕಿಲ್ ಇರುತ್ತದೆ. ಆದರೆ ಅದನ್ನು ಬಳಸುವ ಮಾರ್ಗ ಕಂಡು ಹಿಡಿಯುವುದಕ್ಕೆ ಕೆಲವು ಸಮಯ ತೆಗೆದುಕೊಳ್ಳುತ್ತದೆ. ಈ ಉದ್ಯಮದಲ್ಲಿ ತೊಡಗಿಕೊಳ್ಳುವುದರಿಂದ ನಿಮ್ಮ ಸ್ಕಿಲ್ ಬಗ್ಗೆ ನಿಮಗೇ ತಿಳಿದುಕೊಳ್ಳುವ ಅವಕಾಶ ದೊರೆಯುತ್ತದೆ. ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ ಸಹಾಯವಾಗುತ್ತದೆ. ನಮ್ಮ ಕೌಶಲ್ಯಕ್ಕೆ ನಾವೇ ಬೆಲೆಕೊಡಬೇಕು, ನಮ್ಮಲ್ಲಿ ನಮಗೆ ಆತ್ಮವಿಶ್ವಾಸ ಇರಬೇಕು.
ನಾನು ಮಾಡಬಹುದು ಎಂಬ ಆತ್ಮವಿಶ್ವಾಸದ ಮುಂದೆ ಎಲ್ಲವೂ ಗೌಣವಾಗಿ ಕಾಣುತ್ತದೆ. ಹಠ, ಛಲದಿಂದ ನಾವು ಕೆಲಸ ಮಾಡಿ ದರೆ ಎಲ್ಲರೂ ಬೆಲೆ ನೀಡಲು ಪ್ರಾರಂಭಿಸುತ್ತಾರೆ. ನಮ್ಮ ಹಾದಿಯಲ್ಲಿ ನಾವು ಯಶಸ್ಸು ಕಂಡರೆ ಅನೇಕರು ನಮ್ಮನ್ನು ಹಿಂಬಾಲಿ ಸಲು ಪ್ರಾರಂಭಿಸುತ್ತಾರೆ ಎಂದರು. ಯಾವುದೇ ಮಹಿಳೆಯರಾದರೂ ನಿಮಗೆ ಕೆಲಸ ಮಾಡಬೇಕು ಎಂದು ಆಸೆ ಇದ್ದರೆ, ನಿಮ್ಮನ್ನು ನೀವು ಒಂದು ವರ್ಷ ಅರಿತುಕೊಳ್ಳಿ. ನಿಮ್ಮಿಂದ ಏನು ಮಾಡಲು ಸಾಧ್ಯ ಎಂದು ತಿಳಿದುಕೊಳ್ಳಿ. ನಿಮ್ಮ ಆಸೆಯನ್ನು ಪೋಷಿಸಿ, ಅದರ ಕಡೆ ಗಮನ ನೀಡಿ. ಇದರಿಂದ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಕಾಣುತ್ತೀರಿ. ನೀವು ಏನಾದರೂ ಮಾಡಿದರೆ ನಿಮ್ಮಿಂದ ಅನೇಕ ಮಹಿಳೆಯರು ಪ್ರೇರೇಪಣೆ ಪಡೆಯುತ್ತಾರೆ ಎಂದರು.
***
ಪ್ರತಿ ಹೆಜ್ಜೆಯಲ್ಲೂ ನಮಗೆ ಮಹಿಳೆಯರೇ ಬೆನ್ನೆಲುಬು. ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಳ್ಳುವವರಿಗೆ ಧೃತಿ ಸಂಸ್ಥೆ
ಸಹಾಯವಾಗಿದೆ. ಉದ್ಯೋಗದಲ್ಲಿ ತೊಡಗಿಕೊಂಡರೆ ನಮ್ಮ ಯೋಗ್ಯತೆ ನಾವು ಕಂಡುಕೊಳ್ಳಲು ಸಾಧ್ಯ.
***
ಧೃತಿ ಮಹಿಳಾ ಮಾರುಕಟ್ಟೆ ಒಂದು ನೊಂದಣೀಕೃತವಾದ ಆನ್ಲೈನ್ ಮಾರಾಟದ ವೇದಿಕೆ. ಫೇಸ್ಬುಕ್ ಗುಂಪಾಗಿ ಮುನ್ನಡೆ ಯುತ್ತಿರುವ ಗುಂಪಿನಲ್ಲಿ ಯಾವುದೇ ಮಹಿಳೆಯರು ಮನೆಯಿಂದಲೇ ತಯಾರಿಸಲ್ಪಟ್ಟ ಪದಾರ್ಥಗಳನ್ನು ಮಾರಾಟ ಮಾಡುವು ದಕ್ಕೆ ಅವಕಾಶ ಇರುವಂತಹ ಗುಂಪು. ಈಗಾಗಲೇ ೪೭೦೦೦ ಸಾವಿರ ಸದಸ್ಯರನ್ನು ಹೊಂದಿರುವ ಗುಂಪು ಇದು. ‘ಧೃತಿಗೆಡದ ಹೆಜ್ಜೆಗಳು’ ಪುಸ್ತಕದಲ್ಲಿ ಅನೇಕ ಮಹಿಳೆಯರ ಯಶಸ್ಸಿನ ಕಥೆಗಳ ಬಗ್ಗೆ ಬರೆಯಲಾಗಿದೆ. ಧೃತಿಗೆಟ್ಟು ಕೂತ ಹೆಣ್ಣು ಮಕ್ಕಳಿಗೆ ಈ ಪುಸ್ತಕ ಸಹಾಯವಾಗಲಿದೆ.
***
ಮಹಿಳೆಯರು ಕೇವಲ ಮನೆ ವಾರ್ತೆಗಳಿಗೆ ಅಷ್ಟೇ ಅಲ್ಲ, ಅದಕ್ಕೂ ಮೀರಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಾವು ಕೂಡ ಸ್ವಾಲಂಭಿಗಳಾಗಲು ಸಾಧ್ಯ ಎಂಬುದನ್ನು ಅಪರ್ಣಾ ರಾವ್ ತೋರಿಸಿಕೊಟ್ಟಿದ್ದಾರೆ. ಹಾಗೆಯೇ ಇನ್ನಿತರ ಮಹಿಳೆಯರಿಗೆ ಆ
ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿಕ್ಕೆ ಪ್ರೇರಕರಾಗಿದ್ದಾರೆ. ನಮ್ಮ ಬಹುತೇಕ ಮಹಿಳೆಯರ ಸಮಯ ಧಾರವಾಹಿಯನ್ನು ವೀಕ್ಷಿಸು ವುದರಲ್ಲೇ ಕಳೆದು ಹೋಗುತ್ತದೆ. ಆದರೆ ಬಿಡುವಿನ ವೇಳೆಯನ್ನು ಸಮರ್ಥವಾಗಿ ಬಳಸಿಕೊಂಡರೆ, ಅದರಿಂದ ಸಾಕಷ್ಟು ಹಣ ಗಳಿಕೆ ಮಾಡಲಿಕ್ಕೆ ಸಾಧ್ಯವಾಗುತ್ತದೆ, ಮರ್ಯಾದೆಯಿಂದ ಜೀವನ ಸಾಗಿಸುವುದು ಸಾಧ್ಯ ಎಂಬುದನ್ನು ತಿಳಿಸಿದ್ದಾರೆ. ಧೃತಿ ಮಹಿಳಾ ಮಾರುಕಟ್ಟೆ ಸಂಸ್ಥೆ ಸ್ಥಾಪಿಸುವ ಮೂಲಕ ೪೫ ಸಾವಿರ ಮಹಿಳೆಯರಿಗೆ ಗೃಹಪಯೋಗಿ ಉತ್ಪನ್ನದ ವಸ್ತುಗಳನ್ನು ಈ ಸಂಸ್ಥೆಯ ಮೂಲಕ ಮಾರಾಟ ಮಾಡಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಟ್ಟಿದ್ದಾರೆ.
-ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು,
ವಿಶ್ವವಾಣಿ