ಕಲಬುರಗಿ
ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಚಿಂಚೋಳಿ ಪುರಸಭೆ ವ್ಯಾಪ್ತಿಯ ಸವಿತಾ ಸಮಾಜ (ಹಡಪದ ಸಮಾಜದ) ಎಲ್ಲಾ ಅಂಗಡಿ, ಬ್ಯೂಟಿ ಪಾರ್ಲರ್‍ಗಳ ಮಾಲೀಕರ ಮತ್ತು ಅಂಗಡಿಯಲ್ಲಿ ಕೆಲಸ ಮಾಡುವವರೊಂದಿಗೆ ಗುರುವಾರ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ಅವರು ಸಭೆ ನಡೆಸಿದರು.
ದೇಶಾದ್ಯಂತ ವಿವಿಧ ಕಡೆಗಳಲ್ಲಿ ಹೇರ ಕಟ್ಟಿಂಗ್‍ದಿಂದ ಕೊರೋನಾ ವೈರಸ್ (ಕೋವಿಡ್-19) ವೈರಾಣು ಹರಡಿರುತ್ತದೆ. ಇದರ ಪ್ರಯುಕ್ತ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಹೇರ ಕಟ್ಟಿಂಗ್ ಶಾಪಗಳನ್ನು ತರೆದು ಯಾವುದೆ ಪ್ರಕಾರದ ಕಟ್ಟಿಂಗ್ ಹಾಗೂ ಮಕ್ಕಳಿಗೆ ಗಾಂಧಿ ಕಟ್ಟಿಂಗ್ ಮಾಡಬಾರದು. ಅಂಗಡಿಗಳನ್ನು ಯಾವುದೆ ಕಾರಣಕ್ಕೂ ತೆರೆಯಬಾರದು. ಮನೆ ಮನೆಗೆ ಹೋಗಿ ಕಟ್ಟಿಂಗ್ ಮಾಡಬಾರದು. ರಾಜ್ಯದಾದ್ಯಂತ ಲಾಕ್‍ಡೌನ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ತಪ್ಪದೆ ಪಾಲಿಸಿ ಮನೆಯಲ್ಲಿ ಇರಬೇಕೆಂದು ತಿಳಿಸಿದರು.
ಈ ಸಭೆಯಲ್ಲಿ ಸವೀತಾ ಸಮಾಜದ ಮುಖಂಡರಾದ ಸಿದ್ದಪ್ಪ ಹುಳಗೇರಾ, ಸುಭಾಶ್ಚಂದ್ರ, ಆನಂದ, ಜಗದೀಶ ದ್ಯೂದಲ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.