Friday, 22nd November 2024

ಆಧುನಿಕ ವೈದ್ಯದಲ್ಲಿ ನಾಡಿಪರೀಕ್ಷೆಯ ದಾರಿ

ಹಿಂದಿರುಗಿ ನೋಡಿದಾಗ

ಯುನಾನಿ ವೈದ್ಯಕೀಯದಲ್ಲಿ ನಾಡಿ ಪರೀಕ್ಷೆಗೆ ಮಹತ್ವವಿದೆ. ಯುನಾನಿ ಎನ್ನುವ ಶಬ್ದವು ‘ಯವನ’ಎನ್ನುವ ಶಬ್ದದಿಂದ ರೂಪುಗೊಂಡಿದೆ. ಯವನ ಶಬ್ದವು ಗ್ರೀಕರನ್ನು ಕುರಿತಾದದ್ದು. ಹಾಗಾಗಿ ಯುನಾನಿ ವೈದ್ಯಕೀಯವು ಗ್ರೀಕ್ ಸಂಸ್ಕೃತಿಯಲ್ಲಿಯೇ ಹುಟ್ಟಿತು ಎನ್ನಬಹುದು.

ಆದರೆ ಪ್ರಸ್ತುತ ಅಸ್ತಿತ್ವದಲ್ಲಿರುವ ಯುನಾನಿ ವೈದ್ಯಕೀಯವನ್ನು ಪರ್ಷಿಯೋ-ಅರಾಬಿಕ್ ವೈದ್ಯಕೀಯವೆನ್ನುವುದು ಸೂಕ್ತ. ಯುನಾನಿ ವೈದ್ಯರು ಆರಂಭದ ದಿನಗಳಲ್ಲಿ ಸಂಪೂರ್ಣ ವಾಗಿ ಗ್ರೀಕ್ ವೈದ್ಯಕೀಯದ ತತ್ತ್ವಗಳನ್ನೇ ಪರಿಪಾಲಿಸುತ್ತಿದ್ದರು. ಆದರೆ ಮಧ್ಯಯುಗ-
ದಲ್ಲಿ ಪರ್ಷಿಯನ್ನರು, ಗ್ರೀಕ್ ವೈದ್ಯಕೀಯ ತತ್ತ್ವಗಳ ಆಧಾರದ ಮೇಲೆ, ತಮ್ಮದೇ ಆದ ವೈದ್ಯಕೀಯ ತತ್ತ್ವಗಳನ್ನು ರೂಪಿಸಿಕೊಂಡು ಹೊಸ ಪದ್ಧತಿಯನ್ನು ರೂಪಿಸಿಕೊಂಡರು.

ಯುನಾನಿ ವೈದ್ಯಕೀಯದ ನಾಡಿ ಪರೀಕ್ಷೆಯ ತತ್ತ್ವಗಳು, ಗ್ರೀಕ್ ವೈದ್ಯಕೀಯ ತತ್ತ್ವ ಗಳನ್ನೇ ಹೋಲುವ ಕಾರಣ, ನಾಡಿಯ ಮಹತ್ವದ ಬಗ್ಗೆ ವಿಸ್ತೃತವಾಗಿ ಗಮನಿಸೋಣ. ಗ್ರೀಕ್ ವೈದ್ಯರಿಗೆ ಮಾನವ ರಕ್ತಪರಿಚಲನಾ ವ್ಯವಸ್ಥೆಯ ಬಗ್ಗೆ ಸ್ಥೂಲ ಪರಿಕಲ್ಪನೆಯಿತ್ತು ಎನ್ನಬಹುದು. ಅವರು ಮೊದಲ ಬಾರಿ ರಕ್ತ ನಾಳಗಳನ್ನು‘ಆರ್ಟರಿ’ಎಂದು ಕರೆದರು. ಇದೊಂದು ತಪ್ಪು ಶಬ್ದವಾಗಿತ್ತು. ಆರ್ಟರಿ ಎಂದರೆ ಲ್ಯಾಟಿನ್ ಭಾಷೆಯಲ್ಲಿ ‘ಗಾಳಿಯನ್ನು ಸಾಗಿಸುವ ಕೊಳವೆ’ ಎಂದರ್ಥ.

ಶವವನ್ನು ವಿಚ್ಛೇದಿಸುವಾಗ, ರಕ್ತನಾಳಗಳಲ್ಲಿ ಹರಿಯುತ್ತಿದ್ದ ರಕ್ತವೆಲ್ಲ ಗುರುತ್ವಾಕರ್ಷಣೆ ಯ ಕಾರಣ, ರಕ್ತನಾಳಗಳ ತಳದಲ್ಲಿ ಸಂಗ್ರಹವಾಗಿ, ಮೇಲೆ ಸಾಕಷ್ಟು ಗಾಳಿಯು ಇರುತ್ತಿತ್ತು. ಮನುಷ್ಯನಿಗೆ ಬದುಕಲು ಗಾಳಿಯು ಅಗತ್ಯವೆಂದು ತಿಳಿದಿದ್ದ ಗ್ರೀಕರು, ‘ರಕ್ತನಾಳಗಳು ಜೀವಾಧಾ ರಕ ಗಾಳಿಯನ್ನು ಕೊಂಡೊಯ್ಯುವ ಕೊಳವೆಗಳು’ಎಂದು ಭಾವಿಸಿ, ಅವುಗಳಿಗೆ ಆರ್ಟರಿ ಎಂಬ ಹೆಸರನ್ನು ನೀಡಿದರು. ಮುಂದಿನ ದಿನಗ ಳಲ್ಲಿ ಆಧುನಿಕ ವೈದ್ಯಕೀಯ ವಿಜ್ಞಾನದ ವೈದ್ಯರಿಗೆ, ರಕ್ತನಾಳಗಳು ಗಾಳಿಯನ್ನಲ್ಲ, ರಕ್ತವನ್ನುಕೊಂಡೊಯ್ಯುತ್ತವೆ ಎನ್ನುವ ಸತ್ಯವು ಗೊತ್ತಾ ದರೂ, ಅವರು ಈ ತಪ್ಪು ಹೆಸರನ್ನು ಸರಿಪಡಿಸುವ ಗೋಜಿಗೇ ಹೋಗಲಿಲ್ಲ.

ಹಾಗಾಗಿ ಪ್ರಾಚೀನ ಗ್ರೀಕರು ಮಾಡಿದ ತಪ್ಪನ್ನುಅವರು ಮುಂದುವರಿಸಿಕೊಂಡು ಬಂದರು. ಅದನ್ನೇ ನಾವು ಇಂದಿಗೂ ಮುಂದುವರಿಸಿ ಕೊಂಡು ಹೋಗುತ್ತಿದ್ದೇವೆ. ಆರ್ಟರಿ ಎನ್ನುವ ಶಬ್ದಕ್ಕೆ, ಕನ್ನಡದಲ್ಲಿ‘ಧಮನಿ’ಎಂಬ ಸಮಪದವು ಬಳಕೆಯಲ್ಲಿದೆ. ನಾಡಿಯು ಜೀವಿಗಳ ಧಮನಿಗಳಲ್ಲಿ ಕಂಡುಬರುವ ವಿದ್ಯಮಾನ. ಹೃದಯವು ವಾಸ್ತವದಲ್ಲಿ ಒಂದು ಸ್ನಾಯು ಪಂಪ್. ಇದು ರಕ್ತವನ್ನು ಪಂಪ್ ಮಾಡುತ್ತದೆ. ಪಂಪ್ ಮಾಡುವಾಗ ಉಂಟಾಗುವ ಒತ್ತಡವೇ ಸಂಕುಚನದೊತ್ತಡ . ಈ ಒತ್ತಡವು ರಕ್ತನಾಳಾದ್ಯಂತ ಸಾಗುತ್ತದೆ. ಇದುವೇ ನಾಡಿ. ಹೃದಯ ಮಿಡಿತವನ್ನು ಸ್ಟೆಥೋಸ್ಕೋಪಿನ ಮೂಲಕ ಆಲಿಸುವಂತೆ, ವೈದ್ಯರು ತಮ್ಮ ನುರಿತ ಕೈಬೆರಳುಗಳ ಮೂಲಕ ನಾಡಿಯನ್ನು ತಿಳಿಯಬಲ್ಲರು.

ಜಗತ್ತಿನ ಎಲ್ಲ ವೈದ್ಯಕೀಯ ಪದ್ಧತಿಗಳಲ್ಲಿ ನಾಡಿಯನ್ನು ಸಾಮಾನ್ಯವಾಗಿ ಮುಂಗೈ / ಮಣಿಕಟ್ಟಿನ ಬಳಿ ಪರೀಕ್ಷಿಸುವುದುಂಟು. ಇಲ್ಲಿ ಹೆಬ್ಬೆರಳ ಕೆಳಗೆ, ಮಣಿಕಟ್ಟಿನ ಮೇಲೆ ಸಾಗುವ ತ್ರಿಜ್ಯೀಯ ಧಮನಿಯು ಇರುತ್ತದೆ. ಇದನ್ನು ಪರೀಕ್ಷಿಸಿ, ನಾಡಿಯ ಸ್ವರೂಪವನ್ನು ತಿಳಿಯುವ ಕಾರಣ ಇದನ್ನು ‘ತ್ರಿಜ್ಯೀಯಧಮನಿ’ ಅಥವಾ ‘ರೇಡಿಯಲ್ ಪಲ್ಸ್’ಎಂದು ಕರೆಯುವರು. ಹೀಗೆ ಕುತ್ತಿಗೆಯ ಬಳಿನ್ ಕಂಠೀಯ ನಾಡಿಯನ್ನು, ತೋಳಿನ ಬಳಿ ತೋಳಿನ ನಾಡಿ (ಬ್ರೇಕಿಯಲ್ ಪಲ್ಸ್), ತೊಡೆಗಳ ಬಳಿ ತೊಡೆಯ ನಾಡಿಯನ್ನು (ಫೀಮೋರಲ್ ಪಲ್ಸ್), ಎರಡೂ ಮೊಣ ಕಾಲಿನ ಹಿಂಭಾಗದಲ್ಲಿ ಮೊಣಕಾಲ ನಾಡಿ (ಪಾಪ್ಲೀಟಿಯಲ್ ಪಲ್ಸ್), ಎರಡೂ ಕಣಕಾಲಿನ ಬಳಿ ಕಣಕಾಲ ಹಿಂಬದಿಯ ನಾಡಿ ಹಾಗೂ ಎರಡೂ ಪಾದಗಳ ಮೇಲ್ಭಾಗದಲ್ಲಿ ಪಾದ ಮೇಲ್ಭಾಗದ ನಾಡಿಗಳನ್ನೂ ಪರೀಕ್ಷಿಸಿ ನಿಗದಿತ ಮಾತಿಯನ್ನು ಪಡೆಯುವರು.

ನಾಡಿಯನ್ನು ನಿಮಿಷಕ್ಕೆ ಇಂತಿಷ್ಟು ಮಿಡಿತ ಎನ್ನುವ ಅರ್ಥದಲ್ಲಿ ಬೀಟ್ಸ್ ಪರ್ ಮಿನಿಟ್‌ಎಂದು ಲೆಕ್ಕಹಾಕುವ ವಾಡಿಕೆಯಿದೆ. ವಯಸ್ಕರಲ್ಲಿ ಇದು 60-100ರ (ಸರಾಸರಿ 72) ನಡುವೆ ಇರುತ್ತದೆ. ನಾಡಿಮಿಡಿತದ ಪ್ರಮಾಣವು, ಹೃದಯದ ಮಿಡಿತದ ಪ್ರಮಾಣಕ್ಕೆ ಸಮನಾ ಗಿರುತ್ತದೆ. ಕೆಲವು ಅನಾರೋಗ್ಯಗಳಲ್ಲಿ ಇರದಿರಬಹುದು. ನಾಡಿಯನ್ನು ಪರೀಕ್ಷಿಸಲು ಸಾಂಪ್ರದಾಯಿಕವಾಗಿ ತೋರುಬೆರಳು, ನಡು ಬೆರಳು ಹಾಗೂ ಉಂಗುರದ ಬೆರಳುಗಳ ಮೆತ್ತೆಯನ್ನು ಬಳಸಿದರೂ, ದೈನಂದಿನ ವೃತ್ತಿಯಲ್ಲಿ ತೋರು ಮತ್ತು ನಡುಬೆರಳುಗಳನ್ನು ಮಾತ್ರ ಬಳಸಬಹುದು.

ತೋರುಬೆರಳಿನಿಂದ ತ್ರಿಜ್ಯೀಯ ಧಮನಿಯ ಮೇಲೆ ಒತ್ತಡವನ್ನು ಹಾಕಿ, ನಡುಬೆರಳಿನ ನೆರವಿನಿಂದ ರಕ್ತದೊತ್ತಡದ ಒಂದು ಅಂದಾಜು ಪ್ರಮಾಣವನ್ನು ಗ್ರಹಿಸಿ ಲೆಕ್ಕ ಹಾಕಬಹುದು. ಆಧುನಿಕ ವೈದ್ಯಕೀಯದ ಪಿತಾಮಹ ಪ್ಪೋಕ್ರೇಟ್ಸ್ (ಕ್ರಿ.ಪೂ.460-ಕ್ರಿ.ಪೂ.370) ತನ್ನ‘ ಪ್ಪೋಕ್ರೇಟಿಕ್ ರೈಟಿಂಗ್ ’ನಲ್ಲಿ ನಾಡಿ ಎಂದರೆ ಏನು, ಅದನ್ನು ಹೇಗೆ ಪರೀಕ್ಷಿಸಬೇಕು ಎನ್ನುವುದನ್ನು ಬರೆದಿರುವುದು ನಿಜ. ನಮ್ಮ
ಶರೀರದಲ್ಲಿರುವ ನಾಲ್ಕು ರಸಗಳಿರುತ್ತವೆ(ಹ್ಯೂಮರ್ಸ್). ರಕ್ತ, ಕಫ, ಹಳದಿ ಪಿತ್ತ ಮತ್ತು ಕಪ್ಪು ಪಿತ್ತ. ಈ ನಾಲ್ಕೂ ರಸಗಳ ನಡುವೆ ಏರುಪೇರಾದಾಗ ಅನಾರೋಗ್ಯವುಂಟುಗುತ್ತದೆ ಎನ್ನುವುದು ಪ್ಪೋಕ್ರೇಟ್ಸಿನ ನಿಲುವು.

ಹಾಗಾಗಿ ಶಾರೀರಿಕ ರಸಗಳ ಬಗ್ಗೆ ಬರೆಯುವಾಗ, ನಾಡಿಯ ಸ್ವರೂಪದಲ್ಲಾಗುವ ಬದಲಾವಣೆಗಳನ್ನೂ ದಾಖಲಿಸಿದ. ಆದರೂ ಗ್ರೀಕ್ ವೈದ್ಯಕೀಯ ಸಾಹಿತ್ಯವು ‘ನಾಡಿಯನ್ನು ಮೊದಲು ಕಂಡು ಹಿಡಿದವನು’ ಎನ್ನುವ ಅಭಿದಾನವನ್ನು ಕಾಸ್ ನಗರದ ಪ್ಯಾರಾಕ್ಸಗೊರಾಸ್
(ಕ್ರಿ.ಪೂ.340)ಎನ್ನುವ ವೈದ್ಯನಿಗೆ ನೀಡಿದೆ. ಪ್ಯಾರಾಕ್ಸಗೋರಾಸ್, ನಾಡಿ ಎಂದರೆ ಏನು, ಶರೀರದಲ್ಲಿ ನಾಡಿಯು ಕಂಡು ಬರುವ ಸ್ಥಳಗಳು, ಅವುಗಳನ್ನು ಪರೀಕ್ಷಿಸುವ ವಿಧಾನ ಹಾಗೂ ವಿವಿಧ ಕಾಯಿಲೆಗಳಲ್ಲಿ ಕಂಡು ಬರುವನಾಡಿಯ ಲಕ್ಷಣಗಳನ್ನು ವಿವರಿಸಿದ.

ಮುಖ್ಯವಾಗಿ, ನಾಡಿಯು ಧಮನಿಗಳಲ್ಲಿ ಮಾತ್ರ ಕಂಡು ಬರುತ್ತದೆ, ಸಿರೆಗಳಲ್ಲಿ ಕಂಡುಬರುವುದಿಲ್ಲ ಎಂದು ಖಚಿತವಾಗಿ ನುಡಿದ. ಪ್ಯಾರಾಕ್ಸಗೊರಾಸಿನ ಶಿಷ್ಯ ಹೆರೋಫಿಲಸ್ . ಈತನು ‘ಪಲ್ಸಸ್ ಕೇಪ್ರಿಜ಼ೆನ್ಸ್’ ಎಂಬ ನಾಡಿ ನಮೂನೆಯನ್ನು ಮೊದಲಿಗೆ ವರಿಸಿದ. ಈ
ನಮೂನೆಯ ನಾಡಿ, ಮೇಕೆಯು ಹೇಗೆ ಜಿಗಿಯುತ್ತದೆಯೋ ಹಾಗೆ ಜಿಗಿಯುತ್ತದೆ ಎಂದು ವರ್ಣಿಸಿದ.

ಹೆರೋಫಿಲಸ್ಸನ ಸಮಕಾಲೀನನಾಗಿದ್ದ ಎರಾಸಿಸ್ಟ್ರಾಟಸ್ (ಕ್ರಿ.ಪೂ.340-ಕ್ರಿ.ಪೂ.320) ಒಬ್ಬ ಪ್ರಮುಖ ವೈದ್ಯ. ಏಕೆಂದರೆ ಎರಾಸಿಸ್ಟ್ರಾ ಟಸ್ ನಾಡಿ ಮಿಡಿತಕ್ಕೂ, ಹೃದಯ ಮಿಡಿತಕ್ಕೂ ಸಂಬಂಧವಿರುವುದನ್ನು ಗುರುತಿಸಿದ. ಜತೆಗೆ ಧಮನಿಯು ವ್ಯಾಕೋಚಿಸುವಾಗ (ಡಯಲೇಟ್ಸ್), ಹೃದಯವು ಸಂಕುಚಿಸುತ್ತದೆ (ಕಾಂಟ್ರಾಕ್ಟ್ಸ್) ಹಾಗೂ ಧಮನಿಯು ಸಂಕುಚಿಸುವಾಗ ಹೃದಯವು ವ್ಯಾಕೋಚಿಸುತ್ತದೆ ಎನ್ನುವ ಮಹತ್ವಯುತ ಅಂಶವನ್ನುಎತ್ತಿ ತೋರಿಸಿದ.

ಧಮನಿಯ ವ್ಯಾಕೋಚನವು ಅಕ್ರಿಯ (ಪ್ಯಾಸಿವ್) ಸ್ವರೂಪದ್ದು. ಧಮನಿಗಳಲ್ಲಿ ‘ನ್ಯೂಮ’ ಚಲನೆಯ ಕಾರಣ ಚಲನೆಯು ರೂಪುಗೊಳ್ಳು ತ್ತದೆ ಎಂದ. ಪ್ರಾಕ್ಸಾಗೊರಾಸ್, ಹೆರೋಫಿಲಸ್, ಎರಾಸಿಸ್ಟ್ರಾಟಸ್ ಮುಂತಾದ ವೈದ್ಯರು ಧಮನಿಗಳಲ್ಲಿ ನ್ಯೂಮಾ (ಜೀವದಾಯಕ ಗಾಳಿ) ಹಾಗೂ ಸಿರೆಗಳಲ್ಲಿ ರಕ್ತವು ಹರಿಯುತ್ತದೆ ಎಂದು ಭಾಸಿದ್ದರು. ಧಮನಿಯು ವ್ಯಾಕೋಚಿಸಿದಾಗ, ಹೃದಯದಲ್ಲಿರುವ ನ್ಯೂಮಾವನ್ನು ಸೆಳೆಯುತ್ತದೆ ಹಾಗೂ ಧಮನಿಯು ಸಂಕುಚಿಸಿದಾಗ ನ್ಯೂಮವನ್ನು ಮುಂದೂಡುವ ಕಾರಣ ನಾಡಿಯು ಮೂಡುತ್ತದೆ ಎಂದ.

ನಾಡಿಯು ಕೇವಲ ಧಮನಿಗಳ ಜನ್ಮದತ್ತ ಲಕ್ಷಣ, ಇದು ಹೃದಯ ಡಿತಕ್ಕಿಂತ ಭಿನ್ನವಾದದ್ದು ಎಂದು ಭಾಸಿದ. ಕೊನೆಗೆ ರೋಮನ್ ವೈದ್ಯ
ಗ್ಯಾಲನ್ ಈ ನ್ಯೂಮಾ ಸಿದ್ಧಾಂತಕ್ಕೆ ಕೊನೆಯನ್ನು ಹಾಡಿದ. ಧಮನಿಗಳಲ್ಲಿ ರಕ್ತ, ಗಾಳಿಗಳೆರಡೂ ಇರುವುದನ್ನು ತೋರಿಸಿದ. ಹೆರೋ ಫಿಲಸ್ ಧಮನಿಗಳ ನಾಡಿಮಿಡಿತವನ್ನು, ಸಂಗೀತದ ಲಯಕ್ಕೆ ಹೋಲಿಸಿದ. ಇದು ಅಂದಿನ ನಾಡಿಯ ವೈದ್ಯಕೀಯ ಮತ್ತು ಸಂಗೀತ ಸಾತ್ಯದ ಮೇಲೆ ಅಪಾರ ಪ್ರಭಾವವನ್ನು ಬೀರಿತು. ಈ ಪ್ರಭಾವವು ಪುನರುತ್ಥಾನದ ಕಾಲದವರೆಗೂ ಮುಂದುವರಿಯಿತು.

ಹೆರೋಫಿಲಸ್ ನಾಡಿಯಲ್ಲಿರುವ ಮಿಡಿತವನ್ನು ಸಂಗೀತದ ಏರುತಾಳ ಹಾಗೂ ಇಳಿತಾಳಕ್ಕೆ ಹೋಲಿಸಿದ. ನಾಡಿಯ ರಿದಂನಲ್ಲಿ
‘ಗ್ರಹಿಸಬಹುದಾದ ಕಾಲ’ (ಪರ್ಸೆಪ್ಟಬಲ್ ಟೈಮ್) ಇರುವುದನ್ನು ತೋರಿಸಲು ನವಜಾತ ಶಿಶುನ ನಾಡಿಯ ಮಿಡಿತವನ್ನು ಉದಹರಿಸಿದ.
ನಾಡಿಗೆ ಗಾತ್ರ, ವೇಗ, ಆವರ್ತನ ಇತ್ಯಾದಿ 27 ಗುಣಲಕ್ಷಣಗಳನ್ನು ಆರೋಪಿಸಿದ. ಶರೀರದಲ್ಲಿರುವ ನಾಡಿ ಮಿಡಿತದ ಸ್ವರೂಪ ಎಲ್ಲ ಕಡೆ ಏಕರೂಪವಾಗಿ ಇರುವುದಿಲ್ಲವೆಂದ. ದೇಹದ ಎಡ ಮತ್ತು ಬಲ ಭಾಗಗಳಲ್ಲಿ ಭಿನ್ನವಾಗಿರಬಹುದೆಂದ.

ನಾಡಿಗಳಲ್ಲಿ ಹಲವು ನಮೂನೆಗಳಿರುವುದನ್ನು ಸೋದಾಹರಣವಾಗಿ ವಿವರಿಸಿದ. ಗರಗಸದಂಚಿನಂತಹ ನಾಡಿ, ಅಲೆಯ ರೂಪದಲ್ಲಿ ಚಲಿಸುವ ನಾಡಿ, ಹುಳುವಿನ ಹಾಗೆ ಚಲಿಸುವ ಮಂದ ನಾಡಿ ಇತ್ಯಾದಿ. ಶರೀರವು ಉಷ್ಣತೆಗೆ ಒಳಗಾದಾಗ ಉಷ್ಣ ನಾಡಿ ಇಲ್ಲವೇ
ಶೀತಲ ಸ್ಥಿತಿಗೆ ಒಡ್ಡಿದಾಗ ಕಂಡು ಬರುವ ಶೀತನಾಡಿಯನ್ನು ಪ್ರಸ್ತಾಪಿಸಿದ. ಶರೀರಕ್ಕೆ ನೋವಾದಾಗ, ಉರಿಯೂತವುಂಟಾದಾಗ, ಸೋಮಾರಿತನವೇ ಮೈವೆತ್ತಾಗ, ಸೆಳವು ಬಂದಾಗ, ಕಾಮಾಲೆಯುಂಟಾದಾಗ ಹಾಗೂ ಆನೆಕಾಲಾದಾಗ (ಎಲಿ-ಂಟಿಯಾಸಿಸ್) ನಾಡಿಯ ಸ್ವರೂಪದಲ್ಲಿ ಸಂಭವಿಸುವ ಲಕ್ಷಣಗಳನ್ನು ಪಟ್ಟಿ ಮಾಡಿದ.

ಹೀಗೆ ಕೇವಲ ನಾಡಿಯ ಸ್ವರೂಪವನ್ನು ವರಿಸಲೆಂದೇ’ಡಿ ಪಲ್ಸಮ್ ಡಿಫರೆಂಟೀಸ್’ ಎಂಬ ನಾಲ್ಕು ಸಂಪುಟಗಳನ್ನು ಬರೆದ. ಆದರೆ ಗ್ಯಾಲನ್ನನಿಗೆ ನಾಡಿಯ ಮಹತ್ವವು ಅರಿವಾಗಲೇ ಇಲ್ಲ. ಗ್ಯಾಲನ್ ನಂತರ ಬಂದ ಅಸಂಖ್ಯ ವೈದ್ಯರೂ ನಾಡಿಯ ಮಹತ್ವದ ಬಗ್ಗೆ ತಲೆ ಯನ್ನು ಕೆಡಿಸಿಕೊಳ್ಳಲಿಲ್ಲ. ಹೀಗೆಯೇ ಸುಮಾರು 1500 ವರ್ಷಗಳು ಕಳೆದುಹೋದವು. ಕೊನೆಗೆ ಬ್ರಿಟನ್ನಿನ ಜಾನ್ ಫೈಯರ್(1649-1734) ಎಂಬುವವನು ನಾಡಿಯ ಮಹತ್ವದ ಬಗ್ಗೆ ಯೋಚಿಸಲಾರಂಭಿಸಿದ. ಗ್ಯಾಲನ್ ಬರಹಗಳನ್ನು ಕಲೆ ಹಾಕಿ ಅಧ್ಯಯನವನ್ನು ಮಾಡಲಾರಂಭಿಸಿದ.

ಸೆಕೆಂಡುಗಳಿದ್ದ ಗಡಿಯಾರದ ನೆರವಿನಿಂದ, ನಾಡಿಯು ಒಂದು ನಿಮಿಷಕ್ಕೆ ಎಷ್ಟು ಸಲ ಮಿಡಿಯುತ್ತದೆ ಎಂಬುದನ್ನು ಲೆಕ್ಕ ಹಾಕಿದ.
ವಿವಿಧ ಸಂದರ್ಭಗಳಲ್ಲಿ ನಾಡಿಯ ಪ್ರಮಾಣ ಏರುಪೇರಾಗುವುದನ್ನು ಗಮನಿಸಿದ. ವಿವಿಧ ರೋಗಗಳಲ್ಲಿ ಅದರ ಸ್ವರೂಪದಲ್ಲಿ ಸೂಕ್ಷ್ಮ ಬದಲಾವಣೆಗಳಾಗುವುದನ್ನು ನೋಡಿದ. ಇವೆಲ್ಲವನ್ನು ಸೇರಿಸಿ 1707ರಲ್ಲಿ ‘ವೈದ್ಯನ ನಾಡಿ ನಿರೀಕ್ಷೆ’ ಎಂಬ ಗ್ರಂಥವನ್ನು ಬರೆದ. ಆದರೆ ವೈದ್ಯರು ಈ ಗ್ರಂಥವನ್ನು ಹಾಗೂ ಈ ಗ್ರಂಥದೊಳಗಿದ್ದ ವಿಷಯವನ್ನು ಪೂರ್ಣವಾಗಿ ಕಡೆಗಣಿಸಿದರು.

ಹೀಗೆಯೇ 100 ವರ್ಷಗಳು ಕಳೆದುಹೋದವು. ಆನಂತರವೇ ವೈದ್ಯ ಜಗತ್ತಿಗೆನಾಡಿಯ ಮಹತ್ವವು ತಿಳಿದು, ಜಾನ್ ಫೈಯರನಿಗೆ ಗೌರವವನ್ನು ಸೂಚಿಸಿತು. ಶಾರೀರಿಕ ಪರೀಕ್ಷೆಗಳಲ್ಲಿ ನಾಡಿಪರೀಕ್ಷೆಗೆ ಮಹತ್ವಯುತ ಸ್ಥಾನವು ದೊರೆಯಿತು.