ಡಾ. ಶಫೀಕ್. ಎ ಎಂ., ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸ್ಪೆಷಲಿಸ್ಟ್ ಹಾಸ್ಪಿಟಲ್
ಭಾರತದಲ್ಲಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಇದು ವೈದ್ಯರನ್ನು ನೆನಪಿಸಿಕೊಳ್ಳುವ ದಿನ ವಾಗಿರುವುದಲ್ಲದೆ, ವೈಯಕ್ತಿಕವಾಗಿ ಮತ್ತು ಒಂದು ಸಮಾಜವಾಗಿ ನಮಗೆ ವೈದ್ಯರು ಸಲ್ಲಿಸುವ ಎಲ್ಲಾ ಸೇವೆಗಳಿಗೆ ಕೃತಜ್ಞತೆ ಸಲ್ಲಿಸುವಂತಹ ದಿನ ಇದಾಗಿರುತ್ತದೆ. ಆದರೆ, ಅವರು ಕೂಡ ಮನುಷ್ಯರು ಎಂಬುದನ್ನು ನಾವು ಎಷ್ಟು ಬಾರಿ ಅರ್ಥ ಮಾಡಿಕೊಂಡಿದ್ದೇವೆ? ಮತ್ತು ಇತ್ತೀಚೆಗೆ ದೀರ್ಘಕಾಲದ ಕೆಲಸದ ಗಂಟೆಗಳಿoದ ಮತ್ತು ಸತತವಾಗಿ ಹೆಚ್ಚುತ್ತಿರುವ ರೋಗಿಗಳ ಒತ್ತಡದಿಂದ ವೈದ್ಯರು ತೀವ್ರ ರೀತಿಯಲ್ಲಿ ಭಾವನಾತ್ಮಕವಾಗಿ ಮತ್ತು ತೀವ್ರ ರೀತಿಯಲ್ಲಿ ದೈಹಿಕವಾಗಿ ಸುಸ್ತಿಗೆ ಒಳಗಾಗಿರುವ ಹಲವಾರು ಪ್ರಕರಣಗಳನ್ನು ನಾವು ಕಂಡಿದ್ದೇವೆ. ಭಾವನಾತ್ಮಕವಾಗಿ ತೀವ್ರ ಸುಸ್ತಿಗೆ ಒಳಗಾಗುವ ತೊಂದರೆಗೆ ಗುರಿಯಾಗುವುದಕ್ಕೆ ಹಲವಾರು ಬೇರೆ ಬೇರೆ ಕಾರಣಗಳು ಇರುತ್ತವೆ.
ಇವುಗಳಲ್ಲಿ ರೋಗಿಗಳು ಮತ್ತು ಅವರ ಕುಟುಂಬಗಳ ಭಾವನೆಗಳಿಗೆ ತೆರೆದುಕೊಳ್ಳುವುದು, ಸರಿಯಾದ ಚಿಕಿತ್ಸೆ ಪೂರೈಸುವ ಅಗತ್ಯ, ನಿರೀಕ್ಷೆಗೆ ತಕ್ಕಂತೆ ಚಿಕಿತ್ಸಾ ಕ್ರಮಗಳು, ಪ್ರಗತಿ ಹೊಂದದಿರುವ ನಿರಾಸೆಯ ಭಾವನೆ ಮತ್ತು ನಿರ್ದಿಷ್ಟ ಕಠಿಣವಾದ ರೋಗಗಳ ವಿರುದ್ಧ ಶಕ್ತಿಹೀನರಾಗುವ ಭಾವನೆಗಳು ಸೇರಿರುತ್ತದೆ. ಈ ಭಾವನಾತ್ಮಕವಾಗಿ ಸುಸ್ತಾಗುವುದರಿಂದ ಆಯಾಸ ಹೆಚ್ಚುತ್ತದೆ. ನಿದ್ರೆಯ ಸಮತೋಲನ ತಪ್ಪುತ್ತದೆ. ಕುಟುಂಬದಲ್ಲಿ ವಾದ-ವಿವಾದ ಗಳಿಂದ ಹೊಂದಾಣಿಕೆ ತಪ್ಪುವುದು ಮತ್ತು ಅತ್ಯಂತ ತೀವ್ರ ರೀತಿಯ ಪ್ರಕರಣಗಳಲ್ಲಿ ಆತ್ಮಹತ್ಯೆಗೂ ಕೂಡ ಇದು ದಾರಿಯಾಗಬಹುದು. ಹೆಚ್ಚುವರಿಯಾಗಿ, ಅವರು ಕೆಲಸ ಮಾಡುವ ವಾತಾವರಣ ತೀವ್ರ ಒತ್ತಡದಿಂದ ಕೂಡಿರುತ್ತದೆ.
ತಪ್ಪು ನಿರ್ಣಯ ಅಥವಾ ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯ ಸಂಬ0ಧಿಗಳು ಅಥವಾ ಸ್ನೇಹಿತರು ಅಥವಾ ಸಾರ್ವಜನಿಕರಿಂದ ತೀವ್ರ ಒತ್ತಡ ವೈದ್ಯರ ಮೇಲೆ ಬೀಳುತ್ತದೆ. ಪ್ರತಿ ದಿನ ನೂತನ ಚಿಕಿತ್ಸೆಗಳ ಆವಿಷ್ಕಾರ ಮತ್ತು ಪರೀಕ್ಷೆಗಳೊಂದಿಗೆ ವೈದ್ಯಕೀಯ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಪ್ರಗತಿ ಹೊಂದುತ್ತಿದೆ. ಅಂದರೆ ಅಭಿವೃದ್ಧಿಯ ವೇಗದೊಂದಿಗೆ ಹೊಂದಿಕೊoಡು ಪ್ರಸ್ತುತವಾಗಿ ಉಳಿಯಲು ವೈದ್ಯರು ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಳ್ಳಬೇಕಾದ ಅಗತ್ಯವಿರುತ್ತದೆ.
ಬಹುತೇಕ ವೈದ್ಯರು ಮಧ್ಯಮದಿಂದ ತೀವ್ರ ರೀತಿಯ ಭಾವನಾತ್ಮಕ ಸುಸ್ತಿನಿಂದ ಬಳಲುತ್ತಿದ್ದಾರೆ ಎಂದು ಇತ್ತೀಚಿನ ವರದಿಗಳು ಸೂಚಿಸಿವೆ. ಆದ್ದರಿಂದ ಕಾರ್ಯಸ್ಥಳದಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ಬಹಳ ಮುಖ್ಯವಾಗಿರುತ್ತದೆ. ಕೆಲಸ ಮತ್ತು ಜೀವನದ ಆರೋಗ್ಯಕರ ಸಮತೋಲನವನ್ನು ಉಳಿಸಿಕೊಳ್ಳುವುದು ವೈದ್ಯರಿಗೆ ಮುಖ್ಯವಾಗಿರುತ್ತದೆ.
ಅಲ್ಲದೆ, ಅವರು ಸೈಕಲ್ ಸವಾರಿ, ಈಜು, ಚಾರಣ ಮುಂತಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆಯಲ್ಲದೆ, ಪ್ರತಿ ದಿನ ಕೆಲವು ನಿಮಿಷಗಳ ಕಾಲವಾದರೂ ಕೂಡ ಯಾವುದಾದರೂ ರೀತಿಯ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕಾಗಿರುತ್ತದೆ. ಧ್ಯಾನ ಎಂಬುದು ಒಪ್ಪಿಗೆಯಾಗದಿದ್ದಲ್ಲಿ, ಅಂತಹವರು ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವನ್ನು ಬದಲಿ ಅವಕಾಶವಾಗಿ ಆಯ್ದುಕೊಳ್ಳಬಹುದು. ಕೆಲವೊಮ್ಮೆ ತಾವು ಒತ್ತಡದಲ್ಲಿರುವುದು ವೈದ್ಯರಿಗೆ ಕೂಡ ತಿಳಿದಿರುವುದಿಲ್ಲ. ಆದ್ದರಿಂದ ವೈದ್ಯರಿಗೆ ಇಂತಹ ಪರಿಸ್ಥಿತಿಗಳಲ್ಲಿ ಅವರ ತೊಂದರೆಗಳನ್ನು ಗುರುತಿಸಿ ನೆರವಾಗಲು ಮನಃಶಾಸ್ತ್ರಜ್ಞರು ಕೆಲವು ಆಸ್ಪತ್ರೆಗಳ ಸಂಪರ್ಕ ದಲ್ಲಿರುತ್ತಾರೆ.
ನಿಗದಿತವಾಗಿ ಒತ್ತಡ ನಿರ್ವಹಣೆ ತರಬೇತಿ ಕಾರ್ಯಕ್ರಮಗಳಿಗೆ ಹಾಜರಾಗುವ ಸಲಹೆಯನ್ನು ವೈದ್ಯರಿಗೆ ನೀಡಲಾಗುತ್ತದೆ. ಇದ ರಿಂದ ಕಾರ್ಯಸ್ಥಳದಲ್ಲಿನ ಒತ್ತಡ ಕಡಿಮೆ ಮಾಡಿಕೊಳ್ಳಬಹುದಲ್ಲದೆ, ಅವರ ಸಹಯೋಗಿಗಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡಬಹುದಾಗಿದೆ. ತೀವ್ರ ಒತ್ತಡಕ್ಕೆ ಗುರಿಯಾಗಿ ನಿಶ್ಯಕ್ತಗೊಳಿಸುವ ಕ್ಷೀಣಿಸುವಿಕೆಗೆ ವೈದ್ಯರು ಗುರಿಯಾದಲ್ಲಿ ಅದನ್ನು ಸರಿಪಡಿಸಲು ಸಾಧ್ಯವಿಲ್ಲವೆಂಬುದನ್ನು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ಹೀಗಾಗದಂತೆ ತಡೆಯುವುದು ಏಕೈಕ ಆಯ್ಕೆ ಯಾಗಿರುತ್ತದೆ.
ಒತ್ತಡ ಮತ್ತು ಖಿನ್ನತೆಯಿಂದ ಮುಕ್ತರಾಗಬೇಕಾದಲ್ಲಿ ವೈದ್ಯರಿಗೆ ನಿಗದಿತವಾಗಿ ರಜಾ ದಿನಗಳ ಅಗತ್ಯವಿರುತ್ತದೆ. ವೈದ್ಯರು ಅಭಿವೃದ್ಧಿಪಡಿಸಿಕೊಳ್ಳಬೇಕಾದ ಮತ್ತೊಂದು ಮುಖ್ಯವಾದ ಸಾಮರ್ಥ್ಯ ಎಂದರೆ, ರಜಾ ದಿನದಲ್ಲಿ ಎಲ್ಲ ಕೆಲಸಗಳಿಂದ ದೂರ ವಾಗಿರುವ ಮತ್ತು ಕೇವಲ ತುರ್ತು ಸ್ಥಿತಿಗಳಲ್ಲಿ ಮಾತ್ರ ಕಾರ್ಯಸ್ಥಳದ ಸಂಪರ್ಕ ಹೊಂದುವ ಕ್ರಮವನ್ನು ಇಟ್ಟುಕೊಳ್ಳ ಬೇಕು. ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಆರೋಗ್ಯಕರ ರೀತಿಯಲ್ಲಿ ಆಹಾರ ಸೇವನೆ ಮತ್ತು ಸಾಕಷ್ಟು ನಿದ್ರೆಯನ್ನು ವೈದ್ಯರು ಪಡೆದುಕೊಳ್ಳಬೇಕು. ಆದರೆ, ಇದನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ.
ನಿಗದಿತ ವ್ಯಾಯಾಮ ಕೂಡ ಮನಸ್ಸು ಮತ್ತು ದೇಹಗಳ ಆರೋಗ್ಯದಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ವೈದ್ಯರು ತಮ್ಮ ಆಧ್ಯಾತ್ಮಿಕ ಅಗತ್ಯಗಳಿಗೆ ಕೂಡ ಗಮನಹರಿಸಬೇಕು. ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮನಸ್ಸನ್ನು ಪುನರುಜ್ಜೀವನಗೊಳಿಸುತ್ತದೆ ಅಲ್ಲದೆ, ಉತ್ತಮ ಪ್ರದರ್ಶನ ನೀಡಲು ಉತ್ತೇಜನ ತುಂಬುತ್ತದೆ. ತಮ್ಮ ಭಾವನೆಗಳನ್ನು ಅಭಿವ್ಯಕ್ತಿ ಗೊಳಿಸದೆ ಮನಸ್ಸಿನಲ್ಲಿಯೇ ತುಂಬಿಸಿಕೊAಡು ಇಟ್ಟುಕೊಳ್ಳುವುದರಿಂದ ಒಳ್ಳೆಯದಕ್ಕಿಂತ ಹೆಚ್ಚಿನ ಕೆಡುಕು ಉಂಟಾಗುತ್ತದೆ ಎಂಬುದನ್ನು ವೈದ್ಯರು ನೆನಪಿನಲ್ಲಿಟ್ಟುಕೊಂಡಿರಬೇಕು.
ತಾವು ಮನಸ್ಸು ಬಿಚ್ಚಿ ಮಾತನಾಡಲು ಯಾರನ್ನಾದರೂ ಜೊತೆಗೆ ಹೊಂದಿರುವುದು ಮುಖ್ಯವಾಗಿರುತ್ತದೆ. ಇಂತಹವರೊ೦ದಿಗೆ ಅವರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶ ಮಾಡಿಕೊಳ್ಳಬೇಕು. ನೂತನ ಕೌಶಲ್ಯವನ್ನು ಕಲಿತು ಕೊಳ್ಳುವುದು ಕೂಡ ಆತ್ಮವಿಶ್ವಾಸ ಮತ್ತು ಸಾಮರ್ಥ್ಯ ನಿರ್ಮಾಣಕ್ಕೆ ನೆರವಾಗುತ್ತದೆ. ಸಂಗೀತ ಕೂಡ ಒತ್ತಡವನ್ನು ನಿವಾರಿಸು ವಲ್ಲಿ ಅದ್ಭುತ ಪರಿಣಾಮ ಉಂಟು ಮಾಡುತ್ತದೆ.
ಕೆಲಸಕ್ಕೆ ತೆರಳುವಾಗ ಅಥವಾ ಮನೆಗೆ ಮರಳುವಾಗ ಕೂಡ ಸಂಗೀತವನ್ನು ಆಲಿಸಬಹುದು. ಸಂಗೀತ ಮನಸ್ಸಿಗೆ ಉಲ್ಲಾಸ ನೀಡುವುದಲ್ಲದೆ, ಒತ್ತಡದ ಪರಿಣಾಮಗಳನ್ನು ತೆಗೆದುಹಾಕುವ ಸಾಮರ್ಥ್ಯ ಹೊಂದಿರುತ್ತದೆ. ವೈದ್ಯರು ಹಲವಾರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಪಾಳಿಗಳ ನಡುವೆ ವಿಶ್ರಾಂತಿ ಅತ್ಯಂತ ಮುಖ್ಯವಾಗಿರುತ್ತದೆ. ಒತ್ತಡದ ಅಡಿಯಲ್ಲಿ ಕೆಲಸ ಮಾಡುವ ವೈದ್ಯರು ರೋಗಿಗಳಿಗೆ ಕಳಪೆ ಗುಣಮಟ್ಟದ ಆರೋಗ್ಯ ಸೇವೆ ನೀಡಬಹುದಲ್ಲದೆ, ವೈದ್ಯಕೀಯವಾಗಿ ತಪ್ಪು ಮಾಡಬಹುದಾ ಗಿರುತ್ತದೆ.
ಇನ್ನೊಂದು ಕಡೆ, ರೋಗಿಯಿಂದ ರೋಗಿಯನ್ನು ಆಧರಿಸಿ ತಮ್ಮ ಕೆಲಸದ ಸ್ವಭಾವಕ್ಕೆ ಅನುಗುಣವಾಗಿ ವೈದ್ಯರು ಭಾವನೆಗಳು ಮತ್ತು ಒತ್ತಡಕ್ಕೆ ಗುರಿಯಾಗುತ್ತಾರೆ ಎಂಬುದನ್ನು ರೋಗಿಗಳು ಕೂಡ ಅರ್ಥ ಮಾಡಿಕೊಳ್ಳುವ ಅಗತ್ಯವಿರುತ್ತದೆ. ಅನಗತ್ಯ ಟೀಕೆಗಳು ಮತ್ತು ಕಾರ್ಯಗಳು ವೈದ್ಯರ ಒತ್ತಡವನ್ನು ಹೆಚ್ಚಿಸುತ್ತವೆ. ಅಲ್ಲದೆ, ಇವುಗಳನ್ನು ತಪ್ಪಿಸಬೇಕು. ವೈದ್ಯರು ಕೂಡ ಮನುಷ್ಯರೇ ಮತ್ತು ಅವರು ಕೂಡ ಒತ್ತಡಕ್ಕೆ ಗುರಿಯಾಗಬಹುದು ಎಂಬುದನ್ನು ರೋಗಿಗಳು ನೆನಪಿನಲ್ಲಿಡಬೇಕು.
ರೋಗಿಗಳು ಕೈಗೊಳ್ಳಬಹುದಾದ ಅತ್ಯಂತ ಅಮೂಲ್ಯವಾದ ಕೆಲಸ ಎಂದರೆ ಅದು ವೈದ್ಯರನ್ನು ನಂಬುವುದಾಗಿರುತ್ತದೆ. ಅತ್ಯಂತ ಹೆಚ್ಚಿನ ಅರ್ಹತೆ ಹೊಂದಿರುವುದರಿoದ ವೈದ್ಯರು ಪರಿಸ್ಥಿತಿಯ ನಿಯಂತ್ರಣ ಹೊಂದಿರುತ್ತಾರೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ರೋಗಿಗಳಿಗೆ ಅತ್ಯಂತ ಅಗತ್ಯವಾಗಿರುತ್ತದೆ. ಪ್ರಶಾಂತವಾದ ಮತ್ತು ಫಲಪ್ರದವಾದ ಅನುಭವವನ್ನು ಹೆಚ್ಚಿಸುವುದಕ್ಕಾಗಿ ರೋಗಿಗಳು ಮತ್ತು ವೈದ್ಯರ ನಡುವೆ ಪರಸ್ಪರ ಸಹಾನುಭೂತಿ ಅತ್ಯಂತ ಅಗತ್ಯವಾಗಿರುತ್ತದೆ.