Sunday, 27th October 2024

ಶಾಸಕನಾಗಿದ್ದ ಕಾಲದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಪ್ರಾರಂಭಿಸಲಾಯಿತು: ಕೆ.ಎನ್.ರಾಜಣ್ಣ

ಮಧುಗಿರಿ: ಕನ್ನಡದ ಸಾಹಿತ್ಯ ಇನ್ನಷ್ಟು ಅಭಿವೃದ್ಧಿಯಾಗುವ ಉದ್ದೇಶದಿಂದ ನಾನು ಶಾಸಕನಾಗಿದ್ದ ಕಾಲದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಪ್ರಾರಂಭಿಸಲಾಯಿತು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಟ್ಟಣದ ಕನ್ನಡ ಭವನ ಕಾಮಗಾರಿ ಪೂರ್ಣಗೊಳಿಸಲು ವಿವಿಧ ಮೂಲಗಳಿಂದ ಹಣ ಕಾಸಿನ ನೆರವು ನೀಡುವುದಾಗಿ ತಿಳಿಸಿ ತಾಲೂಕಿನಲ್ಲಿರುವ ಸಾಹಿತ್ಯಾಸಕ್ತರನ್ನು ಕನ್ನಡ ಭಾಷೆಯ ಕೃಷಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕು ಕ.ಸಾ.ಪ. ಅಧ್ಯಕ್ಷೆ ಸಹನ ನಾಗೇಶ್ ಹಾಗೂ ಸಂಘದ ಪಧಾದಿಕಾರಿಗಳು ನನ್ನನ್ನು ಭೇಟಿಯಾಗಿ ಸುಮಾರು ವರ್ಷಗಳಿಂದ ಅಮೆ ಗತಿಯಲ್ಲಿ ಸಾಗುತ್ತಿರುವ ಕನ್ನಡ ಭವನ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಆರ್ಥಿಕ ನೆರವು ಕೊಡಿಸುವಂತೆ ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿ ಭವನದ ಆಸನ ವ್ಯವಸ್ಥೆ ಇನ್ನಿತರ ಕಾಮಗಾರಿಗಳನ್ನು ಪೂರ್ಣಗೊ ಳಿಸಲು ಸಹಕಾರ ನೀಡುವುದಾಗಿ ತಿಳಿಸಿದ ಅವರು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ತಿಳಿಸಿದರು.

ತಾಲೂಕಿನ ಸಾಹಿತ್ಯ, ಸಾಹಿತಿಗಳು ಹಾಗೂ ಗಣ್ಯರ ಕುರಿತ ಲೇಖನಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಸ್ಮರಣ ಸಂಚಿಕೆಯನ್ನು ಹೊರತರಲು ಮಲನ.ಮೂರ್ತಿ, ನಾ.ಮಹಲಿಂಗೇಶ್ ಹಾಗೂ ಇನ್ನೂಳಿದ ಸಾಹಿತಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದರು.

ಜು. ೬ ರಂದು ಮಧುಗಿರಿ ಪಟ್ಟಣಕ್ಕೆ ಆಗಮಿಸಲಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆ ಯವರನ್ನು ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸಲಾಗುವುದು ಎಂದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನ0ಜು0ಡಯ್ಯ ಇದ್ದರು.