Thursday, 12th December 2024

ಭಯ: ಮನೆಯ ಹೊಸ್ತಿಲಿಗೂ ಬರದಂತೆ ನೋಡಿಕೊಳ್ಳಿ

ಪರಿಶ್ರಮ

parishramamd@gmail.com

ಭಯ. ತುಂಬಾ ಜನರನ್ನ ನಿದ್ದೆಗೆಡಿಸುವ ಪದ ಕೆಲವು ಭಯಗಳು ಪರಿಸ್ಥಿತಿಯಿಂದ ಹುಟ್ಟಿದರೆ. ಕೆಲವು ಭಯಗಳನ್ನ ನಾವೇ ವಿನಾಃಕಾರಣ ಸೃಷ್ಟಿಸಿಕೊಳ್ಳುತ್ತೇವೆ. ಸೋಲ್ತಿವಿ ಎನ್ನುವ ಭಯ ಗೆಲ್ಲಿಸುತ್ತೆ.

ಸಾಯ್ತಿವಿ ಎನ್ನುವ ಭಯ ಬದುಕಿಸುತ್ತೆ. ಚಿಕ್ಕ ವಯಸ್ಸಿನಲ್ಲಿ ಭಯ ಬೀಳಿಸುವ ಅಪ್ಪ-ಅಮ್ಮ ಕಾಲ್ಪನಿಕವಾಗಿ ಭಯ ಸೃಷ್ಟಿಸು ತ್ತಾರೆ. ಆದರೆ ನಮ್ಮ ದುರಾದೃಷ್ಟ ನೋಡಿ ಬೆಳೆದು ಬೆಳೆದು ಯಾವ ಯಾವ ಕಾರಣಕ್ಕೊ ಭಯ ಬೀಳ್ತಿರ್ತಿವಿ. ಭಯ ಎಂಬುದು ಅಲ್ಸರ್ ಇರುವವರನ್ನು ಸಾಯಿಸುತ್ತದೆ, ಧೈರ್ಯ ಎನ್ನುವುದು ಕ್ಯಾನ್ಸರ್ ಇರುವವರನ್ನು ಬದುಕಿಸುತ್ತದೆ. ಭಯವೆಂದರೆ ಧೈರ್ಯದ ಕೊರತೆಯಲ್ಲ. ಕ್ಲಾರಿಟಿ ಇಲ್ಲದಿದ್ದಾಗ, ಕನ್ಪ್ಯೂಷನ್ ಡಾಮಿನೇಟ್ ಆದಾಗ ಸೃಷ್ಠಿಯಾಗುವ ಭಯಕ್ಕೆ ಅಂತ್ಯವೂ ಇರೊಲ್ಲ, ಆರಂಭವಂತೂ ಇರೊಲ್ಲ, ಆರಂಭವಂತೂ ಇರೋದೆ ಇರೊಲ್ಲ.

ಬೆಂಗಳೂರಿನ ಬಿ.ಟಿ.ಎಸ್.ನಲ್ಲಿ ಕಂಡಕ್ಟರ್ ಆಗಿದ್ದ ಹುಡುಗನಿಗೆ ಬದುಕಿನ ಬಗ್ಗೆ ಅಭದ್ರತೆಯ ಭಾವವಿತ್ತು. ಎಲ್ಲರಿಗೂ ಕಾಡು ವಂತೆ ಭಯವು ಆತನನ್ನ ಬೆಂಬಿಡದೆ ಕಾಡಿತ್ತು. ಅದೇನಾಯಿತೋ ಏನೋ, ಒಂದು ದಿನ ಮದ್ರಾಸ್ ನಗರದ ಕಡೆ ನಡೆದೆಬಿಟ್ಟ. ಪ್ರಾರಂಭದ ದಿನಗಳು ಪ್ರಾಣ ಹೋಗುವಷ್ಟು ದರಿದ್ರವಾಗಿತ್ತು. ಒಂದೊತ್ತಿಗಿದ್ರೆ ಇನ್ನೊಂದೊತ್ತಿಗಿಲ್ಲ. ಮದ್ರಾಸಿನ ರಸ್ತೆಗಳಿಗೆ ಆ ವ್ಯಕ್ತಿಯ ಕಷ್ಟ ಗೊತ್ತು. ಆ ವ್ಯಕ್ತಿ ಅನುಭವಿಸಿದ ಯಾತನೆ ಗೊತ್ತು. ನಿದ್ದೆ ಕೆಟ್ಟ ರಾತ್ರಿಗಳ ನೀರವ ಮೌನ ಗೊತ್ತು.

ಯಾರಿಗೂ ಹೋಳಿಕೊಳ್ಳದೆ ನರಳಿದ ಕ್ಷಣಗಳು ಗೊತ್ತು. ಒಂದು ದಿನ ಆತನಿಗೆ ಬೆಳ್ಳಿ ಪರೆದೆಯಲ್ಲಿ ಎಂಟ್ರಿ ಸಿಕ್ತು. ಕಾಲೆಳೆಯುವವರ ಸಂಖ್ಯೆ ಪ್ರಾರಂಭದಲ್ಲಿ ತುಂಬಾ ಟ್ರಾಫಿಲ್ ಜಾಮ್‌ನಂತೆ ಇತ್ತು. ನಂತರ ದಿನಗಳು ಕಳೆದಂತೆ ಭಯ ಬೀಳದೆ ಧೈರ್ಯವಾಗಿ ಮತ್ತಷ್ಟು ಧೈರ್ಯವಾಗಿ ಬೆಳ್ಳಿ ಪರದೆಯನ್ನ ಆಕ್ರಮಿಸಿಕೊಂಡ. ಆತನನ್ನ ವಿಮರ್ಶಿಸಿದ ವಿಮರ್ಶಕರು ಇಂದು ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಬೀದಿ ಬದಿಯಲ್ಲೇ ಇದ್ದಾರೆ. ಆದರೆ ಆತ ಇವತ್ತು ಸ್ಟಾರ್ ಅಲಿಯಾಸ್ ಸೂಪರ್ ಸ್ಟಾರ್ ರಜನಿಕಾಂತ್, ಚಿತ್ರ ರಂಗದ ಪ್ರೇಮಿಗಳ ಆರಾಧ್ಯ ದೈವ, ಮಾನವೀಯತೆಗೆ ಮತ್ತೊಂದು ಹೆಸರು ರಜನಿಕಾಂತ್.

ಎದೆಯ ತುಂಬಾ ಭಯ ಇದ್ದರೂ ವೈ-ಫಯ ತರ ಆತನ ಧೈರ್ಯ ಆತನನ್ನ ಅಭಿಮಾನಿಗಳ ಪಾಲಿನ ದೇವರನ್ನಾಗಿ ಮಾಡಿದೆ. ರಜನಿಕಾಂತ್ ಯಶಸ್ಸಿಗೆ ಕಾರಣ ಬ್ಯಾಕ್ ಗ್ರೌಂಡ್ ಅಲ್ಲ ಗುಂಡಿಗೆ ಎಂಬ ಗ್ರೌಂಡ್‌ನಲ್ಲಿದ್ದ ಧೈರ್ಯ ಕಾರಣ. ಅಂದು ಭಯ ಆಗ್ತಿದೆಯಂತ ಭಯ ಬೀಳ್ತಲೇ ಇದ್ದಿದ್ರೆ ಇವತ್ತು ತಮಿಳುನಾಡಿನ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಯಾವಾಗ್ ಬರ‍್ತಾನೋ ಎಂಬ ಭಯ ಬೀಳಲು ಸಾಧ್ಯವಾಗುತ್ತಿರಲಿಲ್ಲ.ಅವಮಾನಿಸಿದವನು ಬೀದಿಯಲ್ಲೇ ಇರ್ತಾನೆ, ಸಹಿಸಿಕೊಂಡವನು
ಸೋಲನ್ನೇ ಸೋಲಿಸುತ್ತಾನೆ ಈ ಜನರೇಷನ್ನಿನ ಅತೀ ದೊಡ್ಡ ಸಮಸ್ಯೆಯೇ ಇದು.

ಯಾರು ಏನೆಂದುಕೊಳ್ತಾರೋ ಎಂಬ ಮನಸ್ಥಿತಿಯಿಂದ ಹೊರ ಬರಲಾಗದೆ ನರಳುತ್ತಿರುತ್ತಾರೆ. ಚಿಕ್ಕ ಅವಮಾನಕ್ಕೆ ಕುಗ್ಗಿ ಹೋಗು ತ್ತಾರೆ. ಬದುಕೇ ಮುಗಿದು ಹೋಯಿತು ಎಂಬ ಅಭದ್ರತೆಗೆ ಸಿಲುಕಿ ಬಿಡುತ್ತಾರೆ. ಗೆಲುವಿನ ಹೊಸ್ತಿಲಲ್ಲಿರುವ ಎಷ್ಟೋ ಮಂದಿ ಅವರಿವರ ಅಭಿಪ್ರಾಯಕ್ಕೆ ಕಿವಿಕೊಟ್ಟು ಬೀದಿಗೆ ಬಿದ್ದಿರ‍್ತಾರೆ. ಹಾದಿ ತಪ್ಪಿದ ಯೋಚನೆಗಳಿಂದ ಬಾಳಿನ ಹಾದಿಯನ್ನೇ ಕೆಡವಿ ಕೊಳ್ತಾರೆ.

ಗೆಲುವಿಗೆ ಫಾಸ್ಟ್ ಫಾರ್ಮುಲಾ ಪರಿಶ್ರಮವಲ್ಲ, Smart Work, ಅಂತೂ ಅಲ್ಲ, ಯಾವನು ಏನು ಅಂದುಕೊಳ್ತಾನೋ ಎಂಬ ರೋಗ ವಾಸಿಯಾಗಿ ಅಂತಹ ಮನಸ್ಥಿತಿಯಿಂದ ಹೊರಬರುವುದು ಮಾಡುವ ಕೆಲಸದ ಏಕಾಗ್ರತೆ ಕುದರಬೇಕಾದರೆ, ಶ್ರದ್ದೇ ಜೊತೆ ಯಾಗಬೇಕೆಂದರೆ, ಹೆದರಿಗೆ ಹೆದರಿಕೆ ಹುಟ್ಟಿಸುವಷ್ಟು ಧೈರ್ಯ ನಿಮ್ಮದಾಗಬೇಕಾದರೆ, ಅವಮಾನಗಳ ನಡುವೆಯೂ ಅದ್ಭುತ ಗಳು ಸಾಧಿಸಬೇಕಾದರೆ ಯಾರ ವಿಮರ್ಶೆಗೂ ಕಿವಿಕೊಡಬೇಡಿ.

ಬೊಗಳುವ ನಾಯಿಗಳು ಬೊಗಳಲಿ Don’t worry. ಬೈದವನು ಬೀದಿಯಲ್ಲೇ ಬಿದ್ದಿರುತ್ತಾನೆ. ಸಹಿಸಿಕೊಂಡವನು ಸಾಮ್ರಾಜ್ಯವನ್ನೇ ಕಟ್ಟುತ್ತಾನೆ. ಮೌನವೆಂಬ ರಸ್ತೆಯಲ್ಲಿ ನಡೆದಾಗಲೇ, ಘರ್ಜನೆಯ ಸಾಮ್ರಾಜ್ಯ ಕಟ್ಟಲು ಸಾಧ್ಯ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಮುಂದೊಂದು ದಿನ ಫಲ ಕೊಡಲೇಬೇಕು, ಕೊಟೇಕೊಡುತ್ತದೆ. ಸಹಿಸಲಾಗದಷ್ಟು ಅವಮಾನವಾದರೂ ಹೇಳಿಕೊಳ್ಳ ಲಾಗದಷ್ಟು ನೋವು ಆವರಿಸಿದರೂ ಬಿ ಕೂಲ್.

ಒಂದು ದಿನ ಅಂತ ಬರುತ್ತೆ, ನಿನ್ನ ಯಶಸ್ಸು ನೋಡಿ ನಿನ್ನ ಶತ್ರುಗಳ ನಿದ್ದೆಗೆಡುವ ದಿನ. ಆ ದಿನದವರೆಗೂ ಸಹನೆಯಿಂದ ವರ್ತಿಸಬೇಕು. ಯಶಸ್ಸೆಂದರೆ ಪ್ರತಿದಿನ ಎಷ್ಟುಬಾರಿ ಉಸಿರಾಡುತ್ತೀಯ ಅಂತಲ್ಲ. ನಿನ್ನ ಯಶಸ್ಸು ನೋಡಿ ಎಷ್ಟು ಮಂದಿಗೆ ಉಸಿರು ನಿಲ್ಲುತ್ತದೆ ಎನ್ನುವುದೇ ಯಶಸ್ಸಿಗೆ ನಾವು ಕೊಡುವ ಗೌರವ. ಅದು ರಾಜಸ್ಥಾನದ ಸದುಲ್ಪೂರ್ ಎಂಬ ಸಣ್ಣ ಹಳ್ಳಿ.
1950ರಲ್ಲಿ ಆ ಚಿಕ್ಕ ಹಳ್ಳಿಯಲ್ಲಿ ಜಗತ್ತೇ ಮೆಚ್ಚುವಂತಹ ವ್ಯಕ್ತಿ ಹುಟ್ಟುತ್ತಾನೆಂದು ಯಾರು ಊಹಿಸಿರಲಿಲ್ಲ. ಕಿತ್ತು ತಿನ್ನುವ ಬಡತನ, ಮಣ್ಣಿನ ನೆಲದ ಮೇಲೆ ಬದುಕಿನ ಬಂಡಿ ಸಾಗುತ್ತಿದ ಆ ವ್ಯಕ್ತಿಯ ಬಾಳಲ್ಲಿ ಧೈರ್ಯವೆಂಬುದು ಅದ್ಭುತಗಳನ್ನ ಸೃಷ್ಟಿಸಿದೆ.

ಓದಿದ್ದು ಹಿಂದಿ ಮಾಧ್ಯಮದ ಶಾಲೆಯಲ್ಲಿ. ನಂತರ ಕೊಲ್ಕತ್ತಾದ ಕ್ಸೇವಿಯರ್ ಕಾಲೇಜಿನಲ್ಲಿ ಬಿ.ಕಾಂ ತರಗತಿಗೆ ಪ್ರವೇಶ ಪಡೆದು ಶೈಕ್ಷಣಿಕವಾಗಿಯೂ ಯಶಸ್ಸನ್ನು ಕಂಡರು. ಬದುಕಿನಲ್ಲಿ ಏನೋ ಕಳೆದುಕೊಳ್ಳುತ್ತಿದ್ದೀನಿ ಎಂಬ ತುಡಿತ ಅವನನ್ನ ಪದೇ ಪದೇ ಕಾಡುತ್ತಿತ್ತು. ಡಿಗ್ರಿ ಸರ್ಟಿಫಿಕೇಟ್ ಜತೆ ಸಂಬಂಧವಿಲ್ಲದೆ ಹೊಸ ಯೋಚನೆಯನ್ನು ಮಾಡಿದ. ತಂದೆ ನಡೆಸುತ್ತಿದ್ದ ಉಕ್ಕಿನ ವ್ಯಾಪಾರಕ್ಕೆ ಕೈ ಹಾಕಿದ. ಮುಚ್ಚಿ ಹೋಗಿದ್ದ ಕಬ್ಬಿಣ ಕಾರ್ಖಾನೆಗಳನ್ನ ಕಡಿಮೆ ದರಕ್ಕೆ ಕೊಳ್ಳತೊಡಗಿದ.

ಅಸಾಧ್ಯವಾದ ಸಾಧನೆಯನ್ನು ಮಾಡಿ ಯಾವುದು, ಆಗಲ್ಲವೆಂದು ಬಯಸಿದ್ದ ಜನರ ಬಾಯಲ್ಲೇ ಯಶಸ್ಸಿನ ಮಂತ್ರವನ್ನ ಪಟಿಸಿದ. ಸ್ಥಳೀಯವಾಗಿ ಪ್ರಾರಂಭವಾದ ಆತನ ವ್ಯಾಪಾರ ಮೆಲ್ಲಗೆ ಇಂಡೋನೇಷ್ಯಾ ತಲುಪಿತ್ತು. ಅಲ್ಲಿಂದ ಇಂಗ್ಲೆಂಡನ್ನು ಪ್ರವೇಶಿಸಿತ್ತು. ಇವತ್ತು ವಿಶ್ವದ ೧೪ ದೇಶದಲ್ಲಿ ಆತನ ಕಂಪ ನಿಗಳಿವೆ 1.50 ಲಕ್ಷ ಕೆಲಸಗಾರರಿಗೆ ಕೆಲಸ ಕೊಟ್ಟಿದ್ದಾರೆ. ಲಕ್ಷಾಂತರ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ.

ಅವತ್ತು ರಾಜಸ್ಥಾನದ ಹಳ್ಳಿಯಿಂದ ಪಯಣ ಬೆಳೆಸಿ ಇವತ್ತು ರಾಜನಾಗಿ ಮಿಂಚುತ್ತಿರುವ ಆತನ ಹೆಸರು ಲಕ್ಷ್ಮೀನಿವಾಸ್ ಮಿತ್ತಲ್. ಇಂಗ್ಲೆಂಡಿನ ಶ್ರೀಮಂತ ವ್ಯಕ್ತಿ! ಆತನ ಮನೆಯೇ ಸುಮಾರು 600 ಕೋಟಿ. ತನ್ನ ಮಗಳ ಮಧುವೆಗೆ 240 ಕೋಟಿ ರೂ ವೆಚ್ಚ ಮಡಿದ. ಲಕ್ಷ್ಮೀನಿವಾಸ್ ಮಿತ್ತಲ್ ಮೂಲತಹ ಭಾರತೀಯರೆನ್ನುವುದು ನಮ್ಮ ಹಿರಿಮೆ. ನಾನು ಹಳ್ಳಿಯಲ್ಲಿ ಹುಟ್ಟಿದೆ, ಕನ್ನಡ ಮಾಧ್ಯಮದಲ್ಲಿ ಓದಿದೆ, ಮನೆ ಕಡೆ ಕಷ್ಟ ಇದೆ, ನಾವು ಶ್ರೀಮಂತಲ್ಲ, ಬಡತನ ನಮ್ಮನ್ನ ಬಿಟ್ಟು ಹೋಗುತ್ತಿಲ್ಲ ಎಂದು ಪ್ರತಿ ದಿನ
ಕೊರಗುವ ಪ್ರತಿಯೊಬ್ಬರೂ ಒಮ್ಮೇ ಧೈರ್ಯವಾಗಿ ಯೋಚಿಸಿದರೆ ಎಲ್ಲಿಗೆ ಬೇಕಾದರೂ ತಲುಪ ಬಹುದು ಎನ್ನುವುದಕ್ಕೆ ಈ ಲಕ್ಷ್ಮೀ ಪುತ್ರನೇ ಸಾಕ್ಷಿ.

ಬದುಕು ಕ್ರಿಕೆಟ್ ಇದ್ದಂತೆ ಸುತ್ತಲೂ ನಿಂತವರು, ನಮ್ಮವರಂತೆಯೇ ಕಂಡರೂ. ನಮ್ಮ ಸೋಲಿಗಾಗಿಯೇ ಕಾದುಕುಳಿತಿರುತ್ತಾರೆ
ಅನ್ನೋದು ಸತ್ಯ ಮನಸ್ಸಿದ್ದರೆ ಮಾರ್ಗ ಅದೇ ಸೃಷ್ಟಿಯಾಗುತ್ತದೆ ಜೀವನದಲ್ಲಿ ಏನೋ ಸಾಧಿಸಬೇಕು, ನಾಲ್ಕು ಜನ ಮೆಚ್ಚುವಂತೆ ಬದುಕಬೇಕು, ಸೋತ ಕಡೆಯೇ ಬದುಕಿ ತೋರಿಸಬೇಕು, ಒಂದಲ್ಲಾ ಒಂದು ದಿನ ಈ ಜಗತ್ತಿಗೆ ನಾನೇನೆಂದು ತೋರಿಸದೇ ಇರ‍್ತೇನಾ ಎನ್ನುವ ಪ್ರಶ್ನೆಗಳು ಪ್ರತಿ ಯುವಕ ಯುವತಿಯರನ್ನ ಬಿಡದಂತೆ ಕಾಡುತ್ತಿರುತ್ತದೆ.

ಚಿಕ್ಕ ಗೆಲುವು ದೊಡ್ಡ ಸೋಲಿನಲ್ಲೇ ಕಳೆದು ಹೋದ ಹೈಸ್ಕೂಲ್ ದಿನಗಳು. ಅರ್ಥವಾಗುವ ಮುನ್ನವೇ ಮುಗಿದು ಹೋದ ಪಿ.ಯು.ಸಿ. ಕ್ಷಣಗಳು. ಇನ್ಮೇಲಾದ್ರೂ ನೆಟ್ಟಗೆ ಓದೋಣ ಅಂತ ಅಂದುಕೊಂಡರೆ, ಕೈ ಬೀಸಿ ಕರೆಯುವ ಡಿಗ್ರಿಯ ಮಧುರ ಯಾತನೆ ಗಳು. ಅರ್ಥವಾಗದ ಪ್ರೀತಿಯ ಸೆಳೆಗಳು, ಕಾಡುವ ಒಂಟಿತನದ ಕ್ಷಣಗಳು. ಎಲ್ಲವೂ ಇದ್ದು ಏನೂ ಇಲ್ಲದಂತೆ ಪರಿತಪಿಸುವ ನಮ್ಮ ಮನ ಸ್ಥಿತಿಗಳು. ಚದುರದ ಏಕಾಗ್ರತೆ, ನಿಚ್ಛಳವಾದ ನಂಬಿಕೆ ಪಡೆಯಬೇಕೆಂದು ಎಷ್ಟು ಪ್ರಯತ್ನಪಟ್ಟರು ಬಹಳಷ್ಟು ಯುವಕ ಯುವತಿಯರು ಕೈಯಲ್ಲಿ ಆಗುತ್ತಿಲ್ಲ.

ಸಹನೆಯಿಂದ ಕಂಡರೂ ಮನಸ್ಸಿನಲ್ಲಿ ನೂರು ಘರ್ಷಣೆಗಳು. ಸಾವಿರ ಗೊಂದಲಗಳು ಹೇಳಿಕೊಳ್ಳಲಾಗದ ಚಡಪಡಿಕೆ. ಜಿಯೋ ಸಿಮ್‌ನಂತೆ ಸೆಳೆಯುವ ಸೆಳೆತಗಳು. ಬಿಗ್‌ಬಾಸ್‌ನಂತೆ ಪ್ರತಿದಿನ ಬಿಡದೆ ಕಾಡುವ ರೋಮಾಂಚನವಾದ ನೆನಪುಗಳು. ಜಗತ್ತು ಬದಲಾದರೂ ಮನಸ್ಥಿತಿಗಳು ಬದಲಾಗುತ್ತಿಲ್ಲ. ರೇಡಿಯೋ ಇಂದ ಎಫ್.ಎಂ.ಗೆ ಟ್ರೆಂಡ್ ಚೇಂಚ್ ಆದರೂ, ಪತ್ರದಿಂದ ಫೇಸ್‌ ಬುಕ್‌ಗೆ ಪಯಣ ಸಾಗಿದರೂ, ಸಂಜೆ ತಿನ್ನುವ ಚಾಟ್ಸ್‌ನಿಂದ ಚಾಟಿಂಗ್‌ವರೆಗೂ ಜಮಾನ ಬದಲಾಗಿದೆ.

ಆಕರ್ಷಣೆ ವಿಕರ್ಷಣೆಯ ಮಧ್ಯೆ ನಮ್ಮ ಜನರೇಷನ್ ಎತ್ತ ಸಾಗುತ್ತಿದೆಎ ಎಂಬ ಗೊಂದಲದ ನಡುವೆಯೇ ನನ್ನ ಅಕ್ಷರ ಯಾತ್ರೆ ಯನ್ನ ಮುಂದುವರೆಸುತ್ತಿದ್ದೀನಿ. ಹೈಸ್ಕೂಲಿನಲ್ಲೋ ಕಾಲೇಜಿನಲ್ಲೋ ಬಹಳಷ್ಟು ಜನ ಪ್ರೀತಿಗೆ ಫಿದಾ ಆಗಿರ‍್ತೀರ. ಕ್ಲಾರಿಟಿ ಇಲ್ಲದ ವಯಸ್ಸಿನಲ್ಲೇ ಕನ್ಪ್ಯೂಷನ್ ಜೊತೆ ಸ್ನೇಹ ಬೆಳೆಸಿರುತ್ತಿರ. ಹೆತ್ತವರ ಹೆಸರು ಉಳಿಸಬೇಕು, ಅಪ್ಪನನ್ನ Hurt ಮಾಡಬಾರದು, ಅಮ್ಮನ ಕಣ್ನಲ್ಲಿ ಕಣ್ಣೀರು ನೋಡಬಾರದು ಎನ್ನುವ ದೃಢ ಸಂಕಲ್ಪವಿದ್ದರೂ ಪ್ರೀತಿ ಎಂಬ ಅಂತ್ಯವಿಲ್ಲದ ಪಯಣ ಟೇಪ್‌ಕಟ್ ಮಾಡಿರ‍್ತೀರ. ಗೆಳತಿಯ ನಗುವನ್ನ ಮರೆಯಲಾಗದೆ, ಗೆಳೆಯನ ಸ್ಟೈಲ್‌ನ್ನ ಮರೆಯಲಾಗದೆ Dedication ಕಲಿಯಬೇಕಾದ ಸಮಯ ದಲ್ಲಿ ಡಿಪ್ರೆಷನ್‌ಗೆ ಇನ್ವಿಟೇಷನ್ ಕೊಟ್ಟಿರುತ್ತಿರಿ.

ಪ್ರತಿದಿನ ಬೇಸರ ಹತಾಶೆಯ ನಡುವೆ ಪ್ರೀತಿಯ ಸೆಳೆತವನ್ನ ಸೆಲ್ ಫೋನ್ Maintain ನಂತೆ ಮಾಡ್ತಿರ್ತಿರ. ಓದಲೇ ಬೇಕೆಂಬ ಬಯಕೆ ಪ್ರತಿದಿನ ಬಂದರೂ ಪರೀಕ್ಷೆಯ ಹಿಂದಿನ ದಿನವೇ ಓದುವ, ಒಂದು ದಿನ ಓದಿ ಯಶಸ್ಸು ಸಿಕ್ಕಿಬಿಡಲೆಂದು ಬಯಸುವ ನಮ್ಮ ತಲೇಮಾರಿನ ಹಣೆಬರಹವನ್ನ ಊಹಿಸಲೂ ಕಷ್ಟ. ಬರೆದ ಬ್ರಹ್ಮನಿಗೂ ಕನ್ಯೂಸ್ ಮಾಡುವ ಮಟ್ಟಕ್ಕೆ ನಾವು ಬೆಳೆದು ನಿಂತಿದ್ದೀವಿ. ಮತ್ತಷ್ಟು ವಿಚಾರಗಳು ಆನ್ ಇಂಟ್ರಸ್ಟಿಂಗ್.