ಕಲಬುರಗಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ತ್ವರಿತವಾಗಿ ಮುಗಿಸಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಹಾಗೂ ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿ ಗಳಾದ ಗಂಗಾಧರ ಸ್ವಾಮಿ ಜಿ.ಎಂ. ರವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ ಸ್ವಚ್ಛ ಭಾರತ ಮಿಷನ್ ಹಾಗೂ ಜಲ ಜೀವನ್ ಮಿಷನ್ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿಕೊಂಡು ಮಾತನಾಡು ತ್ತಿದ್ದರು.
ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿದೇ ರ್ಶಕರು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ರವರಿಗೆ ಬೂದು ನೀರು ನಿರ್ವಹಣೆಗೆ ಇಂಗು ಗುಂಡಿಗಳ ನಿರ್ಮಾಣ ಮತ್ತು ಸ್ವಚ್ಛ ಸಂಕೀರ್ಣ ಹಾಗೂ ಘನ ತಾಜ್ಯ ನಿರ್ವಹಣೆ ಹಾಗೂ ಓಡಿಎಫ್ ಪ್ಲಸ್ (ಬಹಿದರ್ಸೆ ಮುಕ್ತ ಗ್ರಾಮ) ಪ್ರಗತಿಯನ್ನು ನಿಗದಿತ ಅವಧಿಯಲ್ಲಿ ತ್ವರಿತವಾಗಿ ಮಾಡಬೇಕೆಂದರು.
ಜಲ ಜೀವನ ಮಿಷನ್ ಅಡಿಯಲ್ಲಿ ಪ್ರತಿ ಮನೆ ಮನೆಗೂ ಕಾರ್ಯಾತ್ಮಕ ಮನೆ ನಳ ಸಂಪರ್ಕ ಒದಗಿಸ ಬೇಕು ಹಾಗೂ ಕಾಮಗಾರಿ ಗಳು ಉತ್ತಮ ಗುಣ ಮಟ್ಟದಾಗಬೇಕೆಂದರು. ಸ್ವತ: ನಾನೆ ಜಿಲ್ಲೆಯ ನೋಡಲ್ ಅಧಿಕಾರಿಯಾಗಿರುವುದರಿಂದ ಇನ್ನು ಮುಂದೆ ಪ್ರತಿ ತಿಂಗಳು ಸ್ವತ: ಕಲಬುರಗಿ ಜಿಲ್ಲೆಗೆ ಭೇಟಿ ಮಾಡಿ ಪ್ರಗತಿ ಪರಿಶೀಲ ನೆ ಮಾಡುವುದಾಗಿ ಎಲ್ಲ ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಸೂಚಿಸಿದರು.
ಇಂದು ಮುಂಜಾನೆ ಜೇವರ್ಗಿ ತಾಲೂಕಿನ ನರಿಬೋಳ್ ಗ್ರಾಮ ಪಂಚಾಯತ್ಗೆ ಭೇಟಿ ನೀಡಿದ ನಿದೇರ್ಶಕರು, ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ವೀಕ್ಷಿಸಿದರು, ತದನಂತರ ಬಿರಾಳ್ ಬಿ. ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಾ ಕೆ. ಗ್ರಾಮಕ್ಕೆ ಭೇಟಿ ನೀಡಿ ನೀರು ಶುದ್ಧೀಕರಣಗೊಳ್ಳುವ ಘಟಕಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವೃತ್ತದ ಸೂಪರಿಟೆಂಡೆಟ್ ಇಂಜಿನಿಯರ್, ರಾಜು ಡಾಂಗೆ, ಟಿ.ಎ. ಶಿವಬಸಪ್ಪ ಕಾಳ ಶೆಟ್ಟಿ, ಜೇವರ್ಗಿ ಸಹಾಯಕ ಕಾರ್ಯಪಾಲಕ ಅಬಿಯಂತರಾದ ಮಲ್ಲಿನಾಥ ಕಾರಬಾರಿ, ಜೇವರ್ಗಿ ತಾಲೂಕು ಪಂಚಾಯತ್ ಸಹಾಯಕ ನಿದೇರ್ಶಕರು ವಿಶ್ವನಾಥ , ಜೆಇ ಮಾಲಿಂಗರಾಯ, ವಸಂತ ಇದ್ದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವಚ್ಛ ಭಾರತ ಮಿಷನ್ ನೋಡಲ್ ಅಧಿಕಾರಿಗಳಾದ ಜಗದೇವಪ್ಪಾ ಬಿ. ಹಾಗೂ ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮಹದೇವ ಸಿಂಧೆ ರವರು ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮೋನಪ್ಪ ಹಾಗೂ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯ ನಿದೇರ್ಶಕರು, ಜೆಜೆಎಂ ಡಿಪಿಎಂ.ಡಾ.ರಾಜು ಕಂಬಳಿಮಠ, ಸಿದ್ಧಲಿಂಗ ಮುಗಳಿ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದ ಜಿಲ್ಲಾ ಸಮಾಲೋಚಕರಾದ ಗುರಬಾಯಿ ಪಾಟೀಲ್ , ಪಾಪರಡ್ಡಿ ಶೇರಿಕಾರ, ಮಲ್ಲಿಕಾರ್ಜುನ ಕುಂಬಾರ, ಭಾಗಪ್ಪ ಮೋದಿ, ಶ್ರೀಶೈಲ್ ಹಿರೇಮಠ, ಸಿದ್ಧಲಿಂಗ ಮುಗಳಿ ರವರುಗಳು ಉಪಸ್ಥಿತರಿದ್ದರು.