Saturday, 23rd November 2024

ಪರಿಷತ್‍ನ ಮೂವರು ಸದಸ್ಯರು ನಾಳೆ ನಿವೃತ್ತಿ

ಬೆಂಗಳೂರು: ವಿಧಾನ ಪರಿಷತ್‍ನ ಮೂವರು ಸದಸ್ಯರು ಜು.೪ರಂದು ನಿವೃತ್ತಿಯಾಗ ಲಿದ್ದಾರೆ.

ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಚುನಾಯಿತರಾಗಿದ್ದ ನಿರಾಣಿ ಹಣಮಂತ ರುದ್ರಪ್ಪ , ಶಿಕ್ಷಕರ ಕ್ಷೇತ್ರದಿಂದ ಚುನಾ ಯಿತರಾಗಿದ್ದ ಅರುಣ್ ಶಹಾಪುರ, ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಕೆ.ಟಿ.ಶ್ರೀಕಂಠೇಗೌಡ ಅವರು ಸೋಮವಾರ ಪರಿಷತ್ ಸದಸ್ಯತ್ವದಿಂದ ನಿವೃತ್ತಿ ಹೊಂದುತ್ತಿದ್ದಾರೆ.

ಪರಿಷತ್ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಆ ಸ್ಥಾನ ತೆರವಾಗಿದೆ. ನಾಲ್ಕೂ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಸಿದ್ದು, ಬಿಜೆಪಿಯಿಂದ ಬಸವರಾಜ ಹೊರಟ್ಟಿ, ನಿರಾಣಿ ಹಣಮಂತ ರುದ್ರಪ್ಪ, ಕಾಂಗ್ರೆಸ್‍ನಿಂದ ಪ್ರಕಾಶ್ ಹುಕ್ಕೇರಿ ಹಾಗೂ ಮಧು ಜಿ.ಮಾದೇಗೌಡ ಚುನಾಯಿತರಾಗಿದ್ದಾರೆ.

ಆಡಳಿತಾರೂಢ ಬಿಜೆಪಿ 37, ಕಾಂಗ್ರೆಸ್ 26 ಹಾಗೂ ಜೆಡಿಎಸ್ 10 ಸ್ಥಾನಗಳನ್ನು ಹೊಂದಿ ದ್ದು, ಸದಸ್ಯರ ನಿವೃತ್ತಿ ನಂತರ ಜೆಡಿಎಸ್ 2 ಸ್ಥಾನಗಳನ್ನು ಕಳೆದುಕೊಂಡು 7 ಸ್ಥಾನಕ್ಕೆ ಕುಸಿಯಲಿದ್ದು, ಎಂದಿನಂತೆ ಮೂರನೆ ಸ್ಥಾನದಲ್ಲಿದೆ.

ಬಿಜೆಪಿ ಮೇಲ್ಮನೆಯಲ್ಲಿ ಬಹುಮತ ಪಡೆಯುವುದರಿಂದ ಖಾಲಿ ಇರುವ ವಿಧಾನ ಪರಿಷತ್ ಸಭಾಪತಿ, ಉಪಸಭಾಪತಿ ಸ್ಥಾನ ಗಳನ್ನು ಬಿಜೆಪಿ ಸುಲಭವಾಗಿ ಪಡೆಯಲಿದೆ.