Saturday, 23rd November 2024

ರವಿ ಸಿಂಗ್ ಖಾಲ್ಸಾ ಟ್ವಿಟರ್ ಖಾತೆ ನಿಷೇಧ

ನವದೆಹಲಿ: ಖಾಲ್ಸಾ ಏಡ್ ಸಂಸ್ಥಾಪಕ ರವಿ ಸಿಂಗ್ ಖಾಲ್ಸಾ ಅವರ ಟ್ವಿಟರ್ ಖಾತೆ ಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ಅವರ ಖಾತೆಯನ್ನು “ತಡೆಹಿಡಿಯಲಾಗಿದೆ” ಎಂದು ಟ್ವಿಟರ್‌ ತಿಳಿಸಿದೆ. ರವಿ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯ ಸ್ಕ್ರೀನ್‌ಶಾಟ್ ಅನ್ನು ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ.

“ಇದು ಬಿಜೆಪಿ ಅಡಿಯಲ್ಲಿ ಪ್ರಜಾಪ್ರಭುತ್ವದ ನಿಜವಾದ ಮುಖವಾಗಿದೆ. ಸಿಖ್ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಯಾನ್ ಮಾಡುವುದರಿಂದ ನಾವು ಧ್ವನಿ ಎತ್ತುವುದನ್ನು ತಡೆ ಯುವುದಿಲ್ಲ. ನಾವು ಗಟ್ಟಿಯಾಗುತ್ತೇವೆ!” ಎಂದು ಬರೆದುಕೊಂಡಿದ್ದಾರೆ.

ಪ್ರಪಂಚದಾದ್ಯಂತ ಮಾನವೀಯ ಯೋಜನೆಗಳನ್ನು ನಡೆಸಲು ಹೆಸರುವಾಸಿಯಾದ ಖಾಲ್ಸಾ ಏಡ್, 2020 ರಲ್ಲಿ ರೈತ ಆಂದೋ ಲನದ ಸಂದರ್ಭದಲ್ಲಿ ಸರಕಾರದ ವಿರೋಧ ಕಟ್ಟಿಕೊಂಡಿತ್ತು. ಅದರ ಅಧಿಕಾರಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ನೋಟಿಸ್ ಕಳುಹಿಸಲಾಗಿತ್ತು.