Friday, 22nd November 2024

ರಾಜಸ್ಥಾನದ ಅಜ್ಮೇರ್​ ದರ್ಗಾದ ಗುಮಾಸ್ತನ ಬಂಧನ

ಜೈಪುರ: ಪ್ರವಾದಿ ಮುಹಮ್ಮದ್​ ಬಗ್ಗೆ ಕಾಮೆಂಟ್​ ಮಾಡಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್​ ಶರ್ಮಾರ ತಲೆ ಕಡಿದವರಿಗೆ ಮನೆ ಉಡುಗೊರೆ ನೀಡುವುದಾಗಿ ಕ್ಯಾಮೆರಾ ಮುಂದೆಯೇ ಹೇಳಿದ್ದ ರಾಜಸ್ಥಾನದ ಅಜ್ಮೇರ್​ ದರ್ಗಾದ ಗುಮಾಸ್ತ ನನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೋ ತುಣುಕೊಂದು ವೈರಲ್​ ಆದ ಬೆನ್ನಲ್ಲೇ ರಾಜಸ್ಥಾನ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು. ಇದೀಗ ಆರೋಪಿ ಸಲ್ಮಾನ್​ ಚಿಸ್ತಿಯನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿ ದ್ದಾರೆ.

ವಿಡಿಯೋದಲ್ಲಿ ಆರೋಪಿ ಸಲ್ಮಾನ್​, ನೂಪುರ್​ ಶರ್ಮಾ ತಲೆಯನ್ನು ಕಡಿದು ತಂದವ ರಿಗೆ ಮನೆ ಕೊಡುವುದಾಗಿ ಆಫರ್​ ಮಾಡಿದ್ದ. ಪ್ರವಾದಿಯನ್ನು ಅವಹೇಳನ ಮಾಡಿದ್ದ ಕ್ಕಾಗಿ ಆಕೆಯನ್ನು ಗುಂಡಿಕ್ಕಿ ಸಾಯಿಸುವುದಾಗಿಯೂ ವಿಡಿಯೋದಲ್ಲಿ ಹೇಳಿದ್ದಾನೆ. ನೀನು ಎಲ್ಲ ಮುಸ್ಲಿಂ ದೇಶಗಳಿಗೆ ಪ್ರತಿಕ್ರಿಯೆ ನೀಡಲೇಬೇಕು. ನಾನಿದನ್ನು ರಾಜಸ್ಥಾನದ ಅಜ್ಮೇರ್​ನಿಂದ ಹೇಳು ತ್ತಿದ್ದೇನೆ.

ಆರೋಪಿ ಸಲ್ಮಾನ್​, ಅಪರಾಧ ಹಿನ್ನೆಲೆಯನ್ನು ಹೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿ ದಲ್ವೀರ್ ಸಿಂಗ್ ಫೌಜ್ದಾರ್ ಹೇಳಿ ದ್ದಾರೆ. ಅಜ್ಮೀರ್ ದರ್ಗಾದ ದಿವಾನ್ ಝೈನುಲ್ ಅಬೇದಿನ್ ಅಲಿ ಖಾನ್ ಅವರ ಕಚೇರಿಯು ಸಹ ವೈರಲ್​ ವಿಡಿಯೋವನ್ನು ಖಂಡಿಸಿದೆ ಮತ್ತು ದೇಗುಲವು ಕೋಮು ಸೌಹಾರ್ದತೆಯ ಸ್ಥಳವಾಗಿದೆ ಎಂದು ಹೇಳಿದೆ.

ನೂಪುರ್​ ಶರ್ಮಾ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದಕ್ಕೆ ಟೈಲರ್​ ಕನ್ಹಯ್ಯ ಲಾಲ್ ಅವರನ್ನು ಅನ್ಯ ಧರ್ಮದ ಇಬ್ಬರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ರಾಜಸ್ಥಾನದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.