ದಲೈಲಾಮಾ ಅವರಿಗೆ ಫೋನ್ ಮೂಲಕ 87 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದೇವೆ. ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಎಂದೇಳಿದ್ದಾರೆ.
ದಲೈಲಾಮಾ ಅವರ 87ನೇ ಹುಟ್ಟುಹಬ್ಬವನ್ನು ಧರ್ಮಶಾಲಾದಲ್ಲಿ ಆಚರಿಸಲಾಯಿತು. ಸೆಂಟ್ರಲ್ ಟಿಬೆಟಿಯನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಲಿವುಡ್ ನಟ ರಿಚರ್ಡ್ ಗೆರೆ ಕೂಡ ಭಾಗವಹಿಸಿದ್ದರು. ಜೊತೆಗೆ ಸಿಎಂ ಠಾಕೂರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು.
ಜನ್ಮದಿನದಂದು ನಾನು ಅವರಿಗೆ ಶುಭ ಹಾರೈಸಿದಾಗ ಅವರು ನನಗೆ ದೇವಭೂಮಿ ಹಿಮಾಚಲದಲ್ಲಿ ವಾಸಿಸುವ ಅವಕಾಶವನ್ನು ನೀಡಿದಕ್ಕಾಗಿ ಹಿಮಾಚಲ ಸರ್ಕಾರ ಮತ್ತು ಕೇಂದ್ರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು ಎಂದು ಠಾಕೂರ್ ಹೇಳಿದ್ದಾರೆ.
1959 ರಲ್ಲಿ ಚೀನಾದಿಂದ ಪಲಾಯನ ಮಾಡಿದ ನಂತರ ದಲೈ ಲಾಮಾ ಭಾರತವನ್ನು ತನ್ನ ಮನೆಯಾಗಿ ಮಾಡಿಕೊಂಡಿದ್ದಾರೆ. ಅಹಿಂಸೆ ಮತ್ತು ಸ್ವಾತಂತ್ರ್ಯದ ಕಟ್ಟಾ ಪ್ರತಿಪಾದಕರಾದ ದಲೈ ಲಾಮಾ ಅವರಿಗೆ 1989 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡ ಲಾಗಿದೆ.