ಬಸವನಬಾಗೆವಾಡಿ: ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಕಸ ವಿಲೇವಾರಿ ಮಾಡು ತ್ತಿಲ್ಲ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ್ ಆರೋಪಿಸಿದರು.
ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಮಾತನಾಡಿದ ಅವರು ಪಟ್ಟಣದಲ್ಲಿ ಕಳೆದ ಒಂದು ತಿಂಗಳಿಂದ ಕಸ ವಿಲೇವಾರಿ ಮಾಡದೆ ಪಟ್ಟಣವು ಗಬ್ಬು ನಾರುತಿದೆ ಈ ಮೊದಲು ಪ್ರತಿ ದಿನ ಬೆಳಗ್ಗೆ ಮನೆ ಮನೆಗೆ ಬಂದು ಕಸವನ್ನು ಪುರಸಭೆಯವರು ತೆಗೆದುಕೊಂಡು ಹೋಗುತ್ತಿದ್ದರು ಆದರೆ ಒಂದು ತಿಂಗಳಿಂದ ಸರಿಯಾಗಿ ಕಸ ವಿಲೇವಾರಿಯನ್ನು ಮಾಡದೆ ಜನಸಾಮಾನ್ಯರಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ಅಧಿಕಾರಿಗಳಿಗೆ ಕೇಳಿದರೆ ಕಸ ವಿಲೇವಾರಿ ಮಾಡುವ ಸ್ಥಳವನ್ನು ಅಲ್ಲಿನ ಸ್ಥಳೀಯರು ಬಂದ್ ಮಾಡಿದ್ದಾರೆ ನಾವು ಎಲ್ಲಿ ಕಸವನ್ನು ತೆಗೆದುಕೊಂಡು ಹೋಗಬೇಕು ಎಂದು ಹಾರಿಕೆ ಉತ್ತರ ನೀಡುತ್ತಾರೆ.
ಸರ್ಕಾರ ಸ್ವಚ್ಚ ಭಾರತ ಮಿಷನ್ ಯೋಜನೆಯಲ್ಲಿ ಸಾಕಷ್ಟು ಯೋಜನೆಯನ್ನು ಜಾರಿ ಗೊಳಿಸುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಅಲ್ಲದೆ ಪಟ್ಟಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಪುರಸಭೆ ಅಧಿಕಾರಿಗಳಿಗೆ ಫಾಗಿಂಗ್ ಮಾಡಲು ವಿನಂತಿಸಿದರೆ ಸಾರ್ವಜನಿಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.
ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ಕೂಡ ಸಾರ್ವಜನಿಕರಿಗೆ ತುಂಬಾ ಕಿರಕಿರಿ ನೀಡುತ್ತಿದೆ ಪಟ್ಟಣದ ಜನರ ಭಾವನೆಗಳ ಜೊತೆ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎರಡು ದಿನದಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ ಹೋದರೆ ರಾಷ್ಟ್ರೀಯ ಬಸವ ಸೈನ್ಯದಿಂದ ಬಸವನಬಾಗೇವಾಡಿ ಬಂದ್ ಕರೆ ನೀಡಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.