೧೦,೩೮೬ ಅಭ್ರ‍್ಥಿಗಳು ಪದವಿ ಸ್ವೀಕಾರ
೭೪ ಪಿಎಚ್.ಡಿ. ಪದವಿ
ತುಮಕೂರು : ತುಮಕೂರು ವಿಶ್ವವಿದ್ಯಾಲಯದ ೧೫ನೇ ಘಟಿಕೋತ್ಸವವು ಮಂಗಳ ವಾರ( ಜು.೫) ವಿಶ್ವವಿದ್ಯಾಲಯದ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಜರುಗಲಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಉಪಸ್ಥಿತರಿರುವರು. ಯುಜಿಸಿ ಸದಸ್ಯೆ ಪ್ರೊ. ಸುಷ್ಮಾ ಯಾದವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಘಟಿಕೋತ್ಸವ ಭಾಷಣ ಮಾಡಲಿ ರುವರು. ಪ್ರಭಾರ ಕುಲಪತಿ ಪ್ರೊ. ಕೇಶವ ವಿಶ್ವವಿದ್ಯಾನಿಲಯದ ವರ‍್ಷಿಕ ವರದಿ ಮಂಡಿಸಲಿರುವರು.
ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು ಒಟ್ಟು ೧೦,೩೮೬ ಅಭ್ರ‍್ಥಿಗಳು ಪದವಿ ಸ್ವೀಕರಿ ಸಲು ರ‍್ಹರಾಗಿದ್ದಾರೆ. ಇವರಲ್ಲಿ ೦೩ ಅಭ್ರ‍್ಥಿಗಳು ಡಿ.ಲಿಟ್ ಪದವಿ, ೭೪ ಅಭ್ರ‍್ಥಿಗಳು ಪಿಎಚ್.ಡಿ. ಪದವಿ, ೧,೫೨೨ ಅಭ್ರ‍್ಥಿಗಳು ಸ್ನಾತಕೋತ್ತರ ಹಾಗೂ ೮,೭೮೭ ಅಭ್ರ‍್ಥಿಗಳು ಸ್ನಾತಕ ಪದವಿಗೆ ರ‍್ಹರಾಗಿರುತ್ತಾರೆ.
ವಿಶ್ವವಿದ್ಯಾನಿಲಯವು ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ‍್ಯಾಂಕುಗಳನ್ನು (ಎಂಸಿಎ ಪದವಿ-೦೩ ರ‍್ಯಾಂಕು), ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಇಡಿ, ಬಿಎಸ್ಡಬ್ಲ್ಯು (ಸೆಮಿಸ್ಟರ್ ಪದ್ಧತಿ)ಗಳಿಗೆ ತಲಾ ಹತ್ತು ರ‍್ಯಾಂಕುಗಳನ್ನು, ಬಿಎಫ್ಎ-೦೧ ರ‍್ಯಾಂಕು, ಬಿ.ವೋಕ್. -೦೩, ಹಾಗೂ ಬಿಎ ಇಂಟಗ್ರೇಟೆಡ್ ಕನ್ನಡ ಪಂಡಿತ್ಗೆ ೦೧ ರ‍್ಯಾಂಕ್ ಘೋಷಿಸಿದೆ. ಒಟ್ಟು ೭೨ ವಿದ್ಯರ‍್ಥಿಗಳಿಗೆ ೯೬ ಚಿನ್ನದ ಪದಕಗಳನ್ನು ಹಾಗೂ ಆರು ನಗದು ಬಹುಮಾನಗಳನ್ನು ವಿಶ್ವವಿದ್ಯಾ ಲಯವು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಿದೆ.