ವಿಜಯಪುರ; ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.
ವಿಜಯಪುರ ಗ್ರಾಮೀಣ ಭಾಗದಲ್ಲಿ ಹೆಚ್ಚು ಭೂ ಕಂಪನದ ಅನುಭವ ಹೆಚ್ಚಾಗಿದೆ. ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆಯಲ್ಲಿ ಭೂಮಿಯಾಳದ 5 ಕಿಲೋ ಮೀಟರ್ ಒಳಗಿನಿಂದ ಭೂಮಿ ನಡುಗಿದೆ. ಬಸವನಬಾಗೇವಾಡಿ ಭಾಗದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಪ್ರಾಥಮಿಕ ವರದಿ ನೀಡಲಾಗಿದೆ.
ವಿಜಯಪುರದಲ್ಲಿ 2 ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. 4.9ರ ತೀವ್ರತೆಯಲ್ಲಿ ಭೂಮಿ ಕಂಪಿಸಿದರೆ, 6:24ರಲ್‌ಇ 4.6ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.
ವಿಯಜಪುರ , ಇಂಡಿ, ಬಸವನ ಬಾಗೇವಾಡಿ , ಬಬಲೇಶ್ವರ, ಸೊಲ್ಲಾಪುರ, ಜಮಖಂಡಿ ಭಾಗಗಳಲ್ಲಿ ಭೂಕಂಪನದ ತೀವ್ರತೆ ದಾಖಲಾಗಿದೆ.