Monday, 16th September 2024

ಧಾರಾಕಾರ ಮಳೆ: 317 ಮನೆಗಳ ಕುಸಿತ

ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದು, ಈವರೆಗೆ 317 ಮನೆಗಳು ಕುಸಿದಿವೆ.

ಚಿಕ್ಕೋಡಿ ತಾಲ್ಲೂಕಿನಲ್ಲಿ 82, ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ 39, ರಾಮದುರ್ಗ ತಾಲ್ಲೂಕಿನಲ್ಲಿ 43, ಸವದತ್ತಿ 35 ಹಾಗೂ ಬೆಳಗಾವಿ ತಾಲ್ಲೂಕಿ ನಲ್ಲಿ 19 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.

ಉಳಿದಂತೆ, ಮೂಡಲಗಿ ತಾಲ್ಲೂಕು 22, ಕಾಗವಾಡ 24, ಬೈಲಹೊಂಗಲ 19, ಹುಕ್ಕೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 14 ಮನೆಗಳ ಗೋಡೆಗಳು ಕುಸಿದಿವೆ.

ನಿರಂತರ ಸುರಿಯುತ್ತಿರುವ ಮಳೆಯಿಂದಯಾಗಿ ಹಳ್ಳಿಗಳಲ್ಲಿನ ಕಲ್ಲು- ಮಣ್ಣಿನ ಮನೆಗಳ ಗೋಡೆ ಕುಸಿಯುವುದು ಮುಂದುವರಿ ದಿದೆ. ಚಿಕ್ಕೋಡಿ ತಾಲ್ಲೂಕಿನ ಐದು ಹಾಗೂ ನಿಪ್ಪಾಣಿ ತಾಲ್ಲೂಕಿನ ಎರಡು ಸೇತುವೆಗಳ ಸಂಚಾರ ಬಂದ್ ಆಗಿದೆ.

ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಒಳಹರಿವೂ ಮತ್ತಷ್ಟು ಹೆಚ್ಚಳ ವಾಗಿದೆ. ಇದರಿಂದ ಗೋಕಾಕ- ಶಿಂಗ್ಲಾಪುರ ಮಧ್ಯದ ಕೆಳಹಂತದ ಸೇತುವೆ ಮುಳುಗಡೆಯಾಗಿದೆ. ಆದರೂ ಜನ ಹಾಗೂ ವಾಹನ ಓಡಾಟ ಮುಂದುವರಿದಿದೆ.

ಗೋಕಾಕ ಹೊರವಲಯದಲ್ಲಿರುವ ಈ ಸೇತುವೆ ಮೇಲೆ ಅರ್ಧ ಅಡಿಯಷ್ಟು ನೀರು ಹರಿಯುತ್ತಿದೆ. ಅಪಾಯವನ್ನೂ ಲೆಕ್ಕಿಸದೆ ಬೈಕ್, ಕಾರ್, ಜೀಪ್, ಬಸ್ಸುಗಳ ಸಂಚಾರ ನಡೆದಿದೆ. ಮತ್ತೆ ಕೆಲವರು ಮುಳುಗಡೆ ಆದ ಸೇತುವೆ ಮೇಲೆಯೇ ವಾಹನ ನಿಲ್ಲಿಸಿ ತೊಳೆಯುವುದು ಸಾಮಾನ್ಯವಾಗಿದೆ.