Saturday, 23rd November 2024

350 ಕೋಟಿ ರೂ.ಗೂ ಮೌಲ್ಯದ 70 ಕೆಜಿ ಹೆರಾಯಿನ್‍ ಜಪ್ತಿ

ಅಹಮದಾಬಾದ್: ಗುಜರಾತ್‍ ರಾಜ್ಯದ ಭಯೋತ್ಪಾದಕ ನಿಗ್ರಹ ದಳ 350 ಕೋಟಿ ರೂ.ಗೂ ಹೆಚ್ಚು ಮೌಲ್ಯದ 70 ಕೆಜಿ ಹೆರಾಯಿನ್‍ ನನ್ನು ಜಪ್ತಿ ಮಾಡಿದೆ.

ಕುಚ್ ಜಿಲ್ಲೆಯ ಮುಂಡ್ರಾ ಬಂದರಿನಲ್ಲಿ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಈ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದು, ಶೋಧ ಕಾರ್ಯ ಮುಂದುವರೆಸಿದೆ. ಬೇರೆ ದೇಶದಿಂದ ಆಗಮಿಸಿದ ಕಂಟೈನರ್‍ನಲ್ಲಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಎಟಿಎಸ್ ಶೋಧ ಕಾರ್ಯಾ ಚರಣೆ ನಡೆಸಿತ್ತು.

ಬಂದರಿನಿಂದ ಹೊರಗಡೆ ನಿಲ್ಲಿಸಲಾಗಿದ್ದ ಕಂಟೈನರ್‍ನಲ್ಲಿ ಸರಕು ಸಾಗಾಣಿಕೆ ಯೊಂದಿಗೆ ಮಾದಕ ವಸ್ತು ಅಡಗಿಸಲಾಗಿತ್ತು. ಎಟಿಎಸ್ – ಕಂದಾಯ ಗುಪ್ತಚರ ಇಲಾಖೆ ಕೂಡ ಕಾರ್ಯಾಚರಣೆಗೆ ಕೈ ಜೋಡಿಸಿದ್ದು, ಕಂಟೈನರ್‍ನನ್ನು ಜಪ್ತಿ ಮಾಡಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಸುಮಾರು 21 ಸಾವಿರ ಕೋಟಿ ಬೆಲೆ ಬಾಳುವ 3 ಸಾವಿರ ಕೆಜಿ ಹೆರಾಯಿನ್‍ನನ್ನು ಕಂದಾಯ ಗುಪ್ತಚರ ಇಲಾಖೆ ಜಪ್ತಿ ಮಾಡಿತ್ತು. ಈ ವರ್ಷದ ಆರಂಭದಲ್ಲಿ 500 ಕೋಟಿ ಬೆಲೆ ಬಾಳುವ 56 ಕೆಜಿ ಕೊಕೈನ್‍ನನ್ನು ಮುಂಡ್ರಾ ಬಂದರಿನಲ್ಲಿ ಜಪ್ತಿ ಮಾಡಲಾಗಿದೆ.

ಕಳೆದ ಏಪ್ರಿಲ್‍ನಲ್ಲಿ 1439 ಕೋಟಿ ಮೊತ್ತದ 205 ಕೆಜಿ ಹೆರಾಯಿನ್‍ನನ್ನು ಕಚ್ ಜಿಲ್ಲೆಯ ಕಂಡ್ಲಾ ಬಂದರಿನಲ್ಲಿ ವಶಪಡಿಸಿಕೊಳ್ಳ ಲಾಯಿತು.