Saturday, 14th December 2024

ಕೃಷ್ಣೆಯ ಉಗಮಸ್ಥಾನದಲ್ಲಿ ಬಾಗಿನ ಅರ್ಪಣೆ

ಕೊಲ್ಹಾರ: ಕೃಷ್ಣಾ ನದಿಯ ಉಗಮಸ್ಥಾನವಾದ ಮಹಾರಾಷ್ಟ್ರದ ಸತಾರ್ ಜಿಲ್ಲೆಯ ಮಹಾಬಳೇಶ್ವರದಲ್ಲಿ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದರು. ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗಳಿಂದ ನೂರಾರು ರೈತರು ಭಾಗವಹಿಸಿದ್ದರು.

ಮಳೆ, ಬೆಳೆ ಸಮೃದ್ಧವಾಗಿ ಸುಮಾರು ೧೫ ವರ್ಷಗಳಿಂದ ಕಡ್ಲೀಗಾರ್ ಹುಣ್ಣಮೆಯ ದಿನದಂದು ಮಾಜಿ ಸಚಿವ ಬೆಳ್ಳುಬ್ಬಿ ರೈತರೊಂದಿಗೆ ಕೃಷ್ಣೆಯ ಉಗಮಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ ಅದರಂತೆ ಪ್ರಸಕ್ತ ವರ್ಷವೂ ಕೂಡ ಪೂಜೆ ಸಲ್ಲಿಸಿದರು. ಕರೋನಾ ಸಂಕಷ್ಟದ ಸಂದರ್ಭದಲ್ಲಿ ಎರಡು ವರ್ಷಗಳಕಾಲ ಕೊಲ್ಹಾರ ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದ್ದರು. ಪ್ರಸಕ್ತ ವರ್ಷ ಅಪಾರ ರೈತರೊಂದಿಗೆ ಕೃಷ್ಣೆಯ ಉಗಮಸ್ಥಾನಕ್ಕೆ ತೆರಳಿ ಪೂಜಾ ಕೈಂಕರ್ಯ ನೆರವೇರಿಸಿದರು.

ಶೀಲವಂತ ಹಿರೇಮಠದ ಶ್ರೀ ಕೈಲಾಸನಾಥ ಸ್ವಾಮಿಜಿಗಳು ಪೂಜೆಯ ನೇತೃತ್ವ ವಹಿಸಿದ್ದರು ಈ ಸಂದರ್ಭದಲ್ಲಿ ಅಪಾರ ರೈತರು ಇದ್ದರು.