Sunday, 24th November 2024

ಶಿಕ್ಷೆಯ ಅವಧಿ ಮೀರಿ ಜೈಲಿನಲ್ಲಿದ್ದ ಆರೋಪಿಗೆ 7.5 ಲಕ್ಷ ರೂ. ಪರಿಹಾರ

ನವದೆಹಲಿ: ಅತ್ಯಾಚಾರ ಆರೋಪಿಗೆ 7.5 ಲಕ್ಷ ರೂ. ಪರಿಹಾರ ನೀಡುವಂತೆ ಛತ್ತೀಸ್‌ಗಢ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿ ಸಿದೆ. ಶಿಕ್ಷೆಯ ಅವಧಿ ಮುಗಿದಿದ್ದರೂ ಆತ ಹೆಚ್ಚು ದಿನಗಳ ಕಾಲ ಜೈಲಿನಲ್ಲೇ ಇರಿಸ ಲಾಗಿತ್ತು. ಹೀಗಾಗಿ, ಸಂತ್ರಸ್ತನಿಗೆ ಪರಿಹಾರ ಹಣ ನೀಡುವಂತೆ ಸುಪ್ರೀಂ ತಿಳಿಸಿದೆ.

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರ ಪೀಠವು ವಿಚಾರಣೆ ಕೈಗೆತ್ತಿಕೊಂಡಿತ್ತು. ʻಅರ್ಜಿದಾರರು ಯುವಕರಾಗಿದ್ದು, ಹೆಚ್ಚುವರಿ ಅಕ್ರಮ ಬಂಧನದ ಕಾರಣದಿಂದಾಗಿ ಮಾನಸಿಕ ಸಂಕಟ ಮತ್ತು ನೋವನ್ನು ಅನುಭವಿಸಿದ್ದಾರೆ. ಇದಕ್ಕೆ ಪರಿಹಾರವಾಗಿ 7.5 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರವು ನೀಡುವ ಆದೇಶ ಹೊರಡಿಸುವುದು ನ್ಯಾಯ ಸಮ್ಮತವಾಗಿದೆ ಎಂದು ಭಾವಿಸುತ್ತೇವೆ ಎಂದಿದ್ದರು.

ಅತ್ಯಾಚಾರ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಛತ್ತೀಸ್​ಗಢ ಹೈಕೋರ್ಟ್ 12 ವರ್ಷಗಳ ಕಾಲ ​ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ, 2018ರಲ್ಲಿ ಆರೋಪಿಗೆ ಜೈಲು ಶಿಕ್ಷೆ ಪ್ರಮಾಣವನ್ನು 7 ವರ್ಷ ಕಠಿಣ ಜೈಲು ಶಿಕ್ಷೆಗೆ ಪರಿವರ್ತಿಸಿತ್ತು. ಶಿಕ್ಷೆ ಅವಧಿ ಮುಗಿದಿ ದ್ದರೂ, ನನ್ನನ್ನು ಬಿಡುಗಡೆಗೊಳಿಸಿಲ್ಲ ಎಂದು ವ್ಯಕ್ತಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿ ದ್ದರು.

ಪ್ರಕರಣವನ್ನು ಪರಿಶೀಲಿಸುವಾಗ, ಅವಧಿ ಮೀರಿ ಜೈಲಿನಲ್ಲಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ. ಸುಪ್ರೀಂ ಗರಂ ಆಗಿದ್ದು, ಛತ್ತೀಸ್‌ಗಢದಲ್ಲಿನ ಜೈಲಾಧಿಕಾರಿಗಳಿಗೆ ಛೀಮಾರಿ ಹಾಕಿದ್ದು, ರಾಜ್ಯ ಸರ್ಕಾರವು ಸಂತ್ರಸ್ತನಿಗೆ ಪರಿಹಾರವಾಗಿ 7.5 ಲಕ್ಷ ರೂ. ಹಣ ನೀಡುವಂತೆ ಸೂಚಿಸಿದೆ.