ಪ್ಯಾರಿಸ್:
ಮಹಾಮಾರಿ ಕರೋನಾ ಇಡೀ ವಿಶ್ವವನ್ನು ವ್ಯಾಾಪಿಸಿದ್ದು, ವಿಷವರ್ತಲ ಆವರಿಸಿದೆ. ಸಾವಿನ ಸಂಖ್ಯೆೆ 3 ಲಕ್ಷಕ್ಕೇರುವ ಆತಂಕ ಉಂಟಾಗಿದೆ.
ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಇಡೀ ಜಗತ್ತನಾದ್ಯಂತ ಅಪಾರ ಸಾವು ನೋವು ಮತ್ತು ಭಾರೀ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುವ ವಿನಾಶಕಾರಿ ಕರೋನಾ ವೈರಸ್ ದಾಳಿಯಿಂದ ಎಲ್ಲ ರಾಷ್ಟ್ರಗಳು ಕಂಗೆಟ್ಟು ಅಸಹಾಯಕವಾಗಿವೆ.
ಪ್ರಪಂಚದಾದ್ಯಂತ ಈಗಾಗಲೇ ಸುಮಾರು 2.73 ಲಕ್ಷ ಜನರನ್ನು ನುಂಗಿರುವ ಕೋವಿಡ್-19 ಆರ್ಭಟ ಮತ್ತಷ್ಟು ತೀವ್ರವಾಗಿದೆ.
ನಿನ್ನೆೆ ಮಧ್ಯರಾತ್ರಿವರೆಗೆ 39,38,064 ಮಂದಿ ಸೋಂಕಿನಿಂದ ಬಳಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಸಾಂಕ್ರಾಮಿಕ ರೋಗ ಪೀಡಿತರ ಸಂಖ್ಯೆ 40 ಲಕ್ಷ ದಾಟುವ ಆತಂಕವಿದೆ.
ಕರೋನಾ ವೈರಸ್‌ಗೆ ಅಂಕುಶ ಹಾಕಲು ವಿಶ್ವದ ಎಲ್ಲ ದೇಶಗಳು ಒಗ್ಗೂಡಿ ಓಡಾಡುತ್ತಿದ್ದರೂ, ಮಹಾಮಾರಿ ರೌದ್ರಾವತಾರ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ. ಪ್ರಪಂಚದ 250ಕ್ಕೂ ಹೆಚ್ಚು ದೇಶಗಳು ಕೊರೋನಾ ಅಟ್ಟಹಾಸಕ್ಕೆ ಕಂಗೆಟ್ಟಿವೆ. ವಿಶ್ಯಾದಾದ್ಯಂತ ವ್ಯಾಪಕ ಸಾವು ಮತ್ತು ಸೋಂಕು ಪ್ರಕರಣಗಳು ಕಳವಳಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಮರಣ ಪ್ರಮಾಣ ಮತ್ತಷ್ಟು ವೃದ್ದಿಯಾಗುವ ಆತಂಕವಿದೆ. ಈ ನಡುವೆ ಸುಮಾರು 13 ಲಕ್ಷ ಮಂದಿ ಸಾವಿನ ದವಡೆಯಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತದ್ದಾರೆ. ಅಮೆರಿಕ ದಾಳಿಯಿಂದ ತತ್ತರಿಸುತ್ತಿದ್ದು ಮುಂದೇನು ಎಂಬ ಪ್ರಶ್ನೆ ಇಡೀ ವಿಶ್ವದ ಜನರ ಕಾಡುತ್ತಿದೆ.