Saturday, 23rd November 2024

ತನ್ನದೇ ಆದ ಇಂಟರ್ನೆಟ್ ಸೇವೆ ಹೊಂದಿದ ರಾಜ್ಯ ಕೇರಳ

ತಿರುವನಂತಪುರಂ: ತನ್ನದೇ ಆದ ಇಂಟರ್ನೆಟ್ ಸೇವೆ ಹೊಂದಿರುವ ದೇಶದ ಮೊದಲ ಮತ್ತು ಏಕೈಕ ರಾಜ್ಯವಾಗಿದೆ ಕೇರಳ.

ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ ರಾಜ್ಯದ ಪ್ರತಿಯೊಬ್ಬರಿಗೂ ಇಂಟರ್ನೆಟ್ ಅನ್ನು ಪ್ರವೇಶಿಸುವಂತೆ ಮಾಡಲು ಸರ್ಕಾರದ ಮಹತ್ವಾಕಾಂಕ್ಷೆಯ ಐಟಿ ಮೂಲಸೌಕರ್ಯ ಯೋಜನೆಯಾಗಿದೆ.

ಇತ್ತೀಚೆಗೆ ದೂರಸಂಪರ್ಕ ಇಲಾಖೆಯಿಂದ ಇಂಟರ್ನೆಟ್ ಸೇವಾ ಪೂರೈಕೆದಾರ (ಐಎಸ್‌ ಪಿ) ಪರವಾನಗಿ ಸ್ವೀಕರಿಸಿದ ಹಿನ್ನೆಲೆ ಯಲ್ಲಿ ಈ ಪ್ರಕಟಣೆ ಹೊರಬಿದ್ದಿದೆ. ಸಮಾಜದಲ್ಲಿನ ಡಿಜಿಟಲ್ ವಿಭಜನೆಯನ್ನು ನಿವಾರಿಸಲು ಉದ್ದೇಶಿಸಿರುವ ಯೋಜನೆಯು ತನ್ನ ಕಾರ್ಯಾ ಚರಣೆ ಪ್ರಾರಂಭಿಸಬಹುದು ಎಂದು ಸಿಎಂ ಹೇಳಿದರು.

ಕೇರಳವು ತನ್ನದೇ ಆದ ಇಂಟರ್ನೆಟ್ ಸೇವೆಯನ್ನು ಹೊಂದಿರುವ ದೇಶದ ಏಕೈಕ ರಾಜ್ಯವಾಗಿದೆ. ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ @DoT_India ನಿಂದ ISP ಪರವಾನಗಿ ಪಡೆದುಕೊಂಡಿದೆ.

KFON ಯೋಜನೆಯು BPL ಕುಟುಂಬಗಳಿಗೆ ಮತ್ತು 30,000 ಸರ್ಕಾರಿ ಕಚೇರಿಗಳಿಗೆ ಉಚಿತ ಇಂಟರ್ನೆಟ್ ಒದಗಿಸಲು ಕಲ್ಪಿಸ ಲಾಗಿದೆ.