Sunday, 24th November 2024

ಸ್ಯಾಮ್‌ಸಂಗ್‌ನಿಂದ ಸಾಲ್ವ್‌ ಫಾರ್‌ ಟುಮಾರೋ ಸ್ಪರ್ಧೆಗೆ ಅರ್ಜಿ ಆಹ್ವಾನ

ಸ್ಪರ್ಧೆಯಲ್ಲಿ ಗೆದ್ದವರಿಗೆ ೧ ಕೋಟಿ ರೂ.ವರೆಗೆ ಬೆಂಬಲ

ಬೆಂಗಳೂರು: ಶಿಕ್ಷಣ, ಪರಿಸರ, ಕೃಷಿ ಹಾಗೂ ಆರೋಗ್ಯ ಕ್ಷೇತ್ರವನ್ನು ಸುಧಾರಿಸುವ ನಿಟ್ಟಿನಲ್ಲಿ ನಿಮ್ಮ ಬಳಿ ಉತ್ತಮ ಯೋಜನೆ ಇದ್ದರೆ ಈಗಲೇ ಈ ಯೋಜನೆಯನ್ನು ಕಳುಹಿಸುವ ಮೂಲಕ ೧ ಕೋಟಿ ರೂವರೆಗೂ ನೀವು ನೆರವು ಪಡೆಯಬಹುದು.!

ಹೌದು, ಸ್ಯಾಮ್‌ಸಂಗ್‌ ತನ್ನ ಸಿಎಸ್‌ಆರ್‌ ಚಟುವಟಿಕೆ ಅಡಿಯಲ್ಲಿ “ಸಾಲ್ವ್‌ ಫಾರ್‌ ಟುಮಾರೋ” (ನಾಳಿನ ಪರಿಹಾರ) ಎಂಬ ಸ್ಪರ್ಧೆಯನ್ನು ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಿದೆ. ಈ ದೇಶದಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಇಂಧನ ತ್ಯಾಜ್ಯ, ಆರೋಗ್ಯ ಸಮಸ್ಯೆ, ಕಸದ ಸಮಸ್ಯೆ, ಶಿಕ್ಷಣದ ಕೊರತೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ನಿಮ್ಮ ಬಳಿ ಬೆಸ್ಟ್‌ ಐಡಿಯಾ ಇದ್ದರೆ ಅದನ್ನು ಈ ಸ್ಪರ್ದೆಯಲ್ಲಿ ಕಳುಹಿಸಿಕೊಡಬಹುದು.

ಬೆಂಗಳೂರಿನ ಸ್ಯಾಮ್‌ಸಂಗ್ ಒಪೆರಾ ಹೌಸ್‌ನಲ್ಲಿ ಸ್ಯಾಮ್‌ಸಂಗ್‌ ಇಂಡಿಯಾ ಆಯೋಜಿಸಿದ್ದ ಶೈಕ್ಷಣಿಕ ಮತ್ತು ಅನ್ವೇಷಣೆ ರೋಡ್‌ಶೋನಲ್ಲಿ ಈ ಘೋಷಣೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ರೋಡ್‌ಶೋದಲ್ಲಿ ಭಾಗವಹಿ ಸಿದ್ದ ಸ್ಟಾಂಡಪ್‌ ಕಾಮಿಡಿಯನ್‌ ಡಾ. ಚತುರ್ವೇದಿ, ಭಾರತ ಶಿಕ್ಷಣ, ಕುಡಿಯುವ ನೀರು, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ.

ಈ ಸಮಸ್ಯೆಗಳನ್ನು ಪರಿಹರಿಸಲು ಯುವಜನರು ತಮ್ಮಲ್ಲಿರುವ ಐಡಿಯಾಗಳನ್ನು ಹಂಚಿಕೊಳ್ಳಬೇಕು. ಸ್ಯಾಮ್‌ಸಂಗ್‌‌ ನಿಮಗಾಗಿ ಉತ್ತಮ ವೇದಿಯನ್ನು ಕಲ್ಪಿಸಿದೆ, ನಿಮ್ಮಲ್ಲಿ ಈ ಸಮಸ್ಯೆಗಳಿಗೆ ಪರಿಹಾರವಾಗಿ ಉತ್ತಮ ಐಡಿಯಾವಿದ್ದರೆ, ಅದನ್ನು ಪರಿಗಣಿಸ ಲಾಗುತ್ತದೆ.. ಈ ಸ್ಪರ್ದೆಯಲ್ಲಿ ೧೬-೨೨ ವರ್ಷದ ಓಳಗಿನ ವಿದ್ಯಾರ್ಥಿಗಳು ಭಾಗವಹಿಸಲು ಅರ್ಹರಾಗಿದ್ದಾರೆ. ಜು.೩೧ರೊಳಗೆ ನಿಮ್ಮ ಐಡಿಯಾಗಳನ್ನು ಸ್ಯಾಮ್‌ಸಂಗ್‌ ವೆಬ್‌ಸೈಟ್‌ : www.samsung.com/in/solvefortomorrow ನಲ್ಲಿ ಶೇರ್‌ ಮಾಡುವ ಮೂಲಕ ಆಯ್ಕೆಯಾಗಬಹುದು.

ದೇಶದ ವಿವಿಧ ಭಾಗದಿಂದ ಈವರೆಗೆ 8 ಸಾವಿರಕ್ಕೂ ಹೆಚ್ಚು ತಂಡಗಳು ಅನ್ವೇಷಣೆ ಸ್ಫರ್ಧೆಗೆ ನೋಂದಣಿ ಮಾಡಿಕೊಂಡಿವೆ. ಈ ಪೈಕಿ ಮೂರು ರಾಷ್ಟ್ರೀಯ ವಿಜೇತರು 1 ಕೋಟಿ ರೂ.ವರೆಗೆ ಬೆಂಬಲ ಪಡೆಯುತ್ತಾರೆ ಮತ್ತು ಐಐಟಿ ದೆಹಲಿಯ ಪರಿಣಿತರ ಮಾರ್ಗದರ್ಶನದೊಂದಿಗೆ ಮುಂದಿನ ಹಂತಕ್ಕೆ ತಮ್ಮ ಐಡಿಯಾಗಳನ್ನು ತೆಗೆದುಕೊಂಡು ಹೋಗಲು ಆರು ತಿಂಗಳುಗಳವರೆಗೆ ಮಾರ್ಗದರ್ಶನವನ್ನು ಪಡೆಯುತ್ತಾರೆ.

ಸಾಲ್ವ್‌ಫಾರ್ ಟುಮಾರೋ ವಿವರ

• ಯಾರು ಭಾಗವಹಿಸಬಹುದು: 16-22 ವರ್ಷದವರು, ವೈಯಕ್ತಿಕವಾಗಿ ಅಥವಾ 3 ರ ವರೆಗಿನ ತಂಡದಲ್ಲಿ
• ಅರ್ಜಿ ಥೀಮ್‌ಗಳು: ಶಿಕ್ಷಣ, ಪರಿಸರ, ಆರೋಗ್ಯ ಸೇವೆ ಮತ್ತು ಕೃಷಿ
• ಅವರು ಏನನ್ನು ಪಡೆಯುತ್ತಾರೆ: ಆನ್‌ಲೈನ್‌ತರಬೇತಿ, ಸ್ಯಾಮ್‌ಸಂಗ್‌ಮತ್ತು ಐಐಟಿ ದೆಹಲಿಯಂದ ಮಾರ್ಗದರ್ಶನ, ಐಐಟಿ ದೆಹಲಿಯಲ್ಲಿ ಬೂಟ್‌ಕ್ಯಾಂಪ್‌
• ವಿಜೇತರು ಏನನ್ನು ಪಡೆಯುತ್ತಾರೆ: 3 ವಿಜೇತ ತಂಡಗಳಿಗೆ ರೂ. 1 ಕೋಟಿವರೆಗೆ ಮೊತ್ತ, 6 ತಿಂಗಳವರೆಗೆ ಮಾರ್ಗದರ್ಶನ
• ಎಲ್ಲಿ ಅರ್ಜಿ ಸಲ್ಲಿಸಬಹುದು: www.samsung.com/in/solvefortomorrow
• ಯಾವ ದಿನಾಂಕದವರೆಗೆ ಅರ್ಜಿ ಸಲ್ಲಿಸಬಹುದು: ಸಂಜೆ 5 ಗಂಟೆ, ಜುಲೈ 31, 2022