Friday, 22nd November 2024

ಸಿದ್ದರಾಮಯ್ಯ ಅವರ ವಾಹನದತ್ತ ಹಣ ಎಸೆದ ಸಂತ್ರಸ್ಥ ಕುಟುಂಬ…

Siddaramayya

ಬಾಗಲಕೋಟೆ: ಮಾನವೀಯತೆ ದೃಷ್ಟಿಯಿಂದ ಹಣ ನೀಡಲಾಗಿತ್ತು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಕುಳಗೇರಿ ಕ್ರಾಸ್‌ ಘಟನೆಯಲ್ಲಿ ಗಾಯಾಳುಗಳಿಗೆ ನೀಡಿದ್ದ ಹಣವನ್ನು ಸಿದ್ದರಾಮಯ್ಯ ಅವರ ವಾಹನದತ್ತ ಹಣ ಎಸೆದ ಕುರಿತು ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇದು ಪರಿಹಾರ ಅಲ್ಲ, ಕಷ್ಟದಲ್ಲಿರುವವರಿಗೆ ಅನುಕೂಲ ಆಗಲಿ ಎಂದು ನೀಡಿ ದ್ದೇನೆ ಎಂದರು.

ಗಲಭೆಯಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೂ ಹಣ ನೀಡುತ್ತೇವೆ. ಸತ್ತಿರು ವವರು ವಾಪಸ್‌ ಬರುವುದಿಲ್ಲ. ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಕಾರಣಕ್ಕೆ ನೀಡಲಾಗು ತ್ತದೆ. ಹಣವನ್ನು ಪುನಃ ಅವರಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.

ಘಟನೆ: ಬಾದಾಮಿಯ ಕುಳಗೇರಿ ಕ್ರಾಸ್ ಡಾಬಾ ಬಳಿ ಹಲ್ಲೆಗೊಳಗಾಗಿದ್ದ ವ್ಯಕ್ತಿಯ ಕುಟುಂಬಕ್ಕೆ ಹಣ ನೀಡಿ ಸಂತೈಸಲು ಬಂದ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಸ್ಥಳೀಯ ಶಾಸಕ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡು ನೀಡಿದ ಹಣವನ್ನು ಅವರ ವಾಹನದ ಮೇಲೆ ಎಸೆದಿರುವ ಘಟನೆ ನಡೆದಿದೆ.

ಹಲ್ಲೆಯಲ್ಲಿ ಗಾಯಗೊಂಡಿದ್ದ ಮಹಮ್ಮದ್ ಹನೀಫ್ ಸೇರಿದಂತೆ ನಾಲ್ವರಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ ತಲಾ 50 ಸಾವಿರ ಹಣವನ್ನು ವೈಯಕ್ತಿಕವಾಗಿ ನೀಡಿದರು. ಘಟನೆ ನಡೆದು ಇಷ್ಟು ದಿನ ಕಳೆದರೂ ಯಾರೂ ಬಂದು ನಮ್ಮ ಕಷ್ಟವನ್ನು ಕೇಳಿಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ಸೇರಿದಂತೆ ಯಾರೂ ನಮ್ಮ ನೋವನ್ನು ಕೇಳಲು ಬಂದಿಲ್ಲ. ಈಗ ನೀವು ಬಂದಿದ್ದೀರಿ. ನೀವು ನೀಡುವ ಹಣ ನಮಗೆ ಬೇಡ, ವಾಪಸ್ ತೆಗೆದುಕೊಳ್ಳಿ ಎಂದು ಹೇಳಿದರು.

ಅವರಿಗೆ ಸಮಾಧಾನ ಹೇಳಿ ಕಾರಿನಲ್ಲಿ ಕುಳಿತು ಸಿದ್ದರಾಮಯ್ಯ ಹೊರಡಲು ಸಿದ್ಧರಾದರು. ಆದರೂ ಅವರ ಕೋಪ ತಣ್ಣ ಗಾಗಲಿಲ್ಲ. ಸಿದ್ದರಾಮಯ್ಯ ಅವರಿದ್ದ ಕಾರು ಮುಂದಕ್ಕೆ ಹೋಗುತ್ತಿದ್ದಂತೆ ನೀವು ನೀಡಿದ ಹಣ ನಮಗೆ ಬೇಡ ಎಂದು ಕಾರಿನ ಮೇಲೆ ಎಸೆದರು.