ದೆಹಲಿ:
ಮೂರನೇ ಹಂತದ ಲಾಕ್ಡೌನ್ ಸಂದರ್ಭದಲ್ಲಿ ಮಂಗಳವಾರದಿಂದ ಕ್ರಮೇಣವಾಗಿ ರೈಲು ಸೇವೆಗಳನ್ನು ಪುನಾರಂಭಿಸುತ್ತಿದ್ದು, ಸೋಮವಾರ ಸಂಜೆ 4 ಗಂಟೆಗೆ ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಬುಕಿಂಗ್ ತೆರೆಯಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಸದ್ಯಕ್ಕೆ 15 ರಾಜಧಾನಿ ಮಾರ್ಗಗಳಲ್ಲಿ ರೈಲು ಸೇವೆ ಪುನರಾರಂಭಗೊಳ್ಳಲಿದೆ. ರೈಲುಗಳು ಸಂಪೂರ್ಣ ಹವಾನಿಯಂತ್ರಿತವಾಗಲಿದ್ದು, ಕಡಿಮೆ ಸಾಮರ್ಥ್ಯದೊಂದಿಗೆ ಚಲಿಸುತ್ತಿದ್ದ ಶ್ರಾಮಿಕ್ ವಿಶೇಷ ರೈಲುಗಳಿಗಿಂತ ಭಿನ್ನವಾಗಿ ಪೂರ್ಣ ಸಾಮರ್ಥ್ಯದಲ್ಲಿ ಚಲಿಸುತ್ತವೆ.
ಈ ವಿಶೇಷ ರೈಲುಗಳ ಬುಕಿಂಗ್ ಸೋಮವಾರ ಸಂಜೆ 4 ಗಂಟೆಯಿಂದಲೇ ಆರಂಭವಾಗಲಿದ್ದು, ಐಆರ್ಸಿಟಿಸಿ ವೆಬ್ಸೈಟ್ನಲ್ಲಿ
ಲಭ್ಯವಿರುತ್ತದೆ. ರೈಲು ಟಿಕೆಟ್ಗಳನ್ನು ಐಆರ್ಸಿಟಿಸಿ ವೆಬ್ಸೈಟ್ ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ನಲ್ಲಿ ಸೋಮವಾರದಿಂದ ಮಾತ್ರ ಕಾಯ್ದಿರಿಸಬಹುದು. ಏಜೆಂಟರು ಮೂಲಕ ಟಿಕೆಟ್ ಕಾಯ್ದಿರಿಸಲು ಅನುಮತಿ ಇಲ್ಲ.
ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಬುಕಿಂಗ್ನ ಯಾವುದೇ ನಿಬಂಧನೆಗಳು ಸದ್ಯಕ್ಕೆ ಲಭ್ಯವಿರುವುದಿಲ್ಲ. ಸೂಪರ್-ಫಾಸ್ಟ್ ರೈಲುಗಳ ದರಕ್ಕೆ ಅನುಗುಣವಾಗಿ ರಾಜಧಾನಿ ರೈಲುಗಳಿಗೆ ಟಿಕೆಟ್ ಶುಲ್ಕ ಇರುತ್ತದೆ. ಶುಲ್ಕದಲ್ಲಿ ಯಾವುದೇ ರಿಯಾಯಿತಿಗೆ ಅವಕಾಶವಿಲ್ಲ.
ಪ್ಲಾಟ್ಫಾರ್ಮ್ ಟಿಕೆಟ್ ಸೇರಿದಂತೆ ಕೌಂಟರ್ಗಳಿಂದ ಯಾವುದೇ ಟಿಕೆಟ್ಗಳನ್ನು ನೀಡಲಾಗುವುದಿಲ್ಲ. ದೃಢಪಡಿಸಿದ ರೈಲ್ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ನಿಲ್ದಾಣಗಳಿಗೆ ಪ್ರವೇಶಿಸಲು ಅವಕಾಶವಿರುತ್ತದೆ. ಲಾಕ್ಡೌನ್ ಮಧ್ಯೆ ಈ ವಿಶೇಷ ರೈಲುಗಳಲ್ಲಿ ಹತ್ತುವ ಪ್ರಯಾಣಿಕರು ತಪಾಸಣೆ ಮತ್ತು ಇತರ ಕಾರ್ಯವಿಧಾನಗಳಿಗಾಗಿ ನಿರ್ಗಮಿಸುವ ಮೊದಲು ಕನಿಷ್ಠ 1 ಗಂಟೆ ಮೊದಲು ನಿಲ್ದಾಣಗಳಿಗೆ ಬರಬೇಕಾಗುತ್ತದೆ.
ವಿಶೇಷ ರಾಜಧಾನಿ ರೈಲುಗಳು ದೆಹಲಿಯಿಂದ ದಿಬ್ರುಗ ,ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ಪುರ್, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾಾಂವ್ , ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮುವರೆಗೆ ಚಲಿಸಲಿವೆ.
ರೈಲು ಟಿಕೆಟ್ಗಳಲ್ಲಿ ರೈಲು ಹತ್ತುವ ಪ್ರಯಾಣಿಕರಿಗೆ ವಿವರವಾದ ಸೂಚನೆ ಇರುತ್ತದೆ. ನಿರ್ಗಮನದ ಮೊದಲು ಪ್ರಯಾಣಿಕರು ಫೇಸ್ ಮಾಸ್ಕ್ ಧರಿಸಿ ಸ್ಕ್ರೀನಿಂಗ್ಗೆ ಒಳಗಾಗುವುದು ಕಡ್ಡಾಯವಾಗಿರುತ್ತದೆ. ಕರೋನ ವೈರಸ್ನ ಯಾವುದೇ ಚಿಹ್ನೆಗಳನ್ನು ತೋರಿಸದ ಪ್ರಯಾಣಿಕರಿಗೆ ರೈಲುಗಳನ್ನು ಹತ್ತಲು ಅವಕಾಶವಿರುತ್ತದೆ.
ಹವಾನಿಯಂತ್ರಿತ(ಏಸಿ) ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕರೋನಾ ಸೋಂಕು ಹರಡುವುದನ್ನು ಕಡಿಮೆ ಮಾಡಲು ಕಂಬಳಿ ಮತ್ತು ಲಿನಿನ್ ನೀಡಲಾಗುವುದಿಲ್ಲ. ಅವರು ಪ್ರಯಾಣಕ್ಕಾಗಿ ಸ್ವಂತ ಹೊದಿಕೆಗಳನ್ನು ಹೊತ್ತುಕೊಳ್ಳಬೇಕಾಗಬಹುದು.
ಬೋಗಿಗಳ ಒಳಗೆ ಹವಾನಿಯಂತ್ರಣಕ್ಕೆ ವಿಶೇಷ ಮಾನದಂಡಗಳಿದ್ದು, ತಾಪಮಾನವನ್ನು ಸಾಮಾನ್ಯಕ್ಕಿಿಂತ ಸ್ವಲ್ಪ ಹೆಚ್ಚಿಗೆ ಇಡಲಾಗುತ್ತದೆ ಮತ್ತು ತಾಜಾ ಗಾಳಿಯ ಗರಿಷ್ಠ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.