ಪರಿಶ್ರಮ
parishramamd@gmail.com
ಮೊದಲ ಸೋಲು ಘಾಸಿಗೊಳಿಸುತ್ತದೆ. ನಂತರದ ಸೋಲು ನಡೆಸುತ್ತದೆ. ಅಷ್ಟಕ್ಕೂ ನೀವು ಸೋಲದಿದ್ದರೆ ಕೊನೆಗೆ ಸೋಲೇ ಸಂಗಾತಿಯಂತೆ ಕಂಡವರಿಗೆ ಕಣ್ಣೀರು ಕಾಂಪ್ಲಿಮೆಂಟರಿಯಾಗಿ ಜತೆಯಾಗಿರುತ್ತದೆ.
ವಿಪರ್ಯಾಸ ಎಂದರೆ ಪುಟ್ಟ ಸೋಲಿಗೆ ಆಕಾಶವೇ ಮೇಲೆ ಬಿದ್ದಂತೆ, ಜೀವನವೇ ಮುಗಿದು ಹೋದಂತೆ ಕೆಲವು ಯುವಕ, ಯುವತಿಯರು ಯೋಚಿಸುತ್ತಾರೆ. ಮೂರು ತಾಸಿನ ಸಿನಿಮಾ ದಲ್ಲಿ ನಟನ ಸೋಲು ಗೆಲುವನ್ನು ನೋಡಿ ಖುಷಿಪಡುವ ನಮಗೆ, ಬಾಳ ಪಯಣದಲ್ಲಿ ಚಿಕ್ಕ ಸೋಲಿಗೆ ವಿಚಲಿತರಾಗಿ ಬಿಡುತ್ತೇವೆ. ಗೆಲುವಿನ ಮೊದಲ ಮೆಟ್ಟಿಲೇ ಸೋಲು. ಸೋಲು ಕಲಿಸುವ ಪಾಠವನ್ನು ಜಗತ್ತಿನ ಮತ್ಯಾವ ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ. ಗೆದ್ದರೆ ಪ್ರಪಂಚಕ್ಕೆ ನಾವು ಗೊತ್ತಾಗುತ್ತೇವೆ. ಸೋತರೆ ಪ್ರಪಂಚ ನಮಗೆ ಗೊತ್ತಾಗುತ್ತೆ. ಗೆದ್ದರೆ ಮುಂದೆ ಹೋಗ್ತೀವಿ, ಸೋತ್ರೆ ನಾಲ್ಕು ಜನರನ್ನ ಮುಂದೆ ಕಳಿಸ್ತೀವಿ.
ಬಿದ್ದ ಮೊದಲ ಕಣ್ಣೀರಿನ ಹನಿ ಸೋಲಿನ ಮೊದಲ ಇನ್‌ಸ್ಟಾಲ್‌ಮೆಂಟ್ ಬಿಕ್ಕಳಿಸಿದ ಮೊದಲ ಸನ್ನಿವೇಶ ನಮ್ಮ ಅಚಾತುರ್ಯದ ಪ್ರಾರಂಭ. ಸೋಲನ್ನೇ ಸೋಲಿಸುವ ತಾಕತ್ತು ಕೆಲವರಿಗಿರುತ್ತದೆ. ಕರೆನ್ಸಿ ಇಲ್ಲದಿದ್ದರೂ ಕಾನಿಡೆನ್ಸ್ ನಿಂದ ಜಗತ್ತನ್ನೇ ಗೆಲುತ್ತಾರೆ. ಜಗತ್ತನ್ನ ಗೆದ್ದ ಆ ಎದೆಗಾರಿಕೆಯ ವ್ಯಕ್ತಿಯ ಬಗ್ಗೆ ಹೇಳ್ತಿನಿ ಕೇಳಿ. ಆತನ ಹೆಸರು ಟೆರ್ರಿ ಫಾಕ್ಸ್. ಕೆನಡದವನು. ಬ್ಯಾಸ್ಕೆಟ್ ಬಾಲ್ ಮತ್ತು ಹಾಕಿಯಲ್ಲಿ ತುಂಬಾ ಶ್ರದ್ಧೆ ಯಿಂದ ಭಾಗವಹಿಸುತ್ತಿದ್ದ.
ಒಂದು ದಿನ ದುರದೃಷ್ಟ ಅವನ ಮನೆ ಬಾಗಿಲನ್ನು ತಟ್ಟಿತು. ಹಣೆಬರಹದ ಗೆರೆಗಳು ದಾರಿ ತಪ್ಪಿದಂತಿದ್ದವು. ಬರಸಿಡಿಲಿನಂತೆ
ಕ್ಯಾನ್ಸರ್ ಕಾಯಿಲೆ ಆತನನ್ನ ಆವರಿಸಿತ್ತು. ವೈದ್ಯಕೀಯ ಲೋಕಕ್ಕೆ ಸವಾಲಾದ. ಯಾವ ಆಸ್ಪತ್ರೆಯಲ್ಲಿ ತೋರಿಸಿದರೂ ವಾಸಿ ಯಾಗಲಿಲ್ಲ. ಕಡೆಗೂ ಒಂದು ದಿನ ಆತನ ಬಲಗಾಲನ್ನು ವೈದ್ಯರು ಕತ್ತರಿಸಿಬಿಟ್ಟರು. ಮುಂದಿನ ದಿನ ಬಿಕ್ಕಳಿಸಿ, ಬಿಕ್ಕಳಿಸಿ ಕಣ್ಣೀರು ಹಾಕಿದ. ಸ್ವಲ್ಪದಿನಗಳ ನಂತರ ಕೃತಕ ಕಾಲುಗಳನ್ನು ಜೋಡಿಸಿಕೊಂಡು ನಡೆಯಲು ಪ್ರಾರಂಭಿಸಿದಾಗ ಪ್ರತಿ ಸಲವೂ
ಬೀಳುತ್ತದೆ, ಮತ್ತೆ ಮತ್ತೆ ಗಾಯ ಮಾಡಿಕೊಳ್ಳುತ್ತಿದ್ದ.
ಏನೇ ಆಗಲಿ ಏನಾದರೂ ಸಾಧಿಸಿಯೇ ಜಗತ್ತಿಗೆ ವಿದಾಯ ಹೇಳಬೇಕೆಂಬ ತೀರ್ಮಾನಕ್ಕೆ ಬಂದ. ಏಪ್ರಿಲ್ ೧೨, ೧೯೮೦ ಅವನ ಬದುಕಿನ ದಿಕ್ಕನೇ ಬದಲಿಸಿದ ದಿನ ಕೆನಡಾದ ಒಂದು ತುದಿಯಲ್ಲಿರುವ ಅಟ್ಲಾಂಟಿಕ್ ಸಾಗರದ ಬಳಿ ಹೋಗಿ ತನ್ನ ಕೃತಕ ಕಾಲನ್ನು
ನೀರಿನಲ್ಲಿ ಅದ್ದಿ, ಅಲ್ಲಿಂದ ಕೆನಾಡದ ಮತೊಂದು ತುದಿಯಲ್ಲಿರುವ ಶಾಂತ ಸಾಗರದಲ್ಲಿ ಬಲಗಾಲನ್ನು ಅದ್ದುವವರೆಗೂ ಓಡುತ್ತೇನೆ ಎಂದು ಘೋಷಿಸಿ ಓಡಲಾರಂಭಿಸಿದ.
ಪ್ರತಿ ದಿನ ಸುಮಾರು 26 ಮೈಲಿ ಓಡುತ್ತಿದ್ದ. ಮೊದಲ ದಿನ ಈತನನ್ನ ಕಂಡು ಹೀಯಾಳಿಸಿದವರೇ ಹೆಚ್ಚು. ಪ್ರಾರಂಭದಲ್ಲಿ ಈತನನ್ನು ಯಾರೂ ಸೇರಿಸಿಕೊಳ್ಳಲಿಲ್ಲ. ನಂತರ ಮಾಧ್ಯಮ ಕೊಟ್ಟ ಪ್ರಚಾರದಿಂದ ನ್ಯಾಷನಲ್ ಹೀರೋ ಆದ. 3500 ಮೈಲಿ ಓಡಿ ಆಲ್‌ಟೈಮ್ ರೆಕಾರ್ಡ್ ಸೃಷ್ಟಿಸಿದ. ಆತನ ಸಾಧನೆಗೆ ಕೆನಾಡ ದೇಶವೇ ರೋಮಾಂಚಿತವಾಗಿತ್ತು. ಆ ದೇಶದ ನಾಗರಿಕರ
ಮೌನದಲ್ಲಿ ಅವನ ಪ್ರಶಂಸೆ ಇತ್ತು. ಲಕ್ಷಾಂತರ ಡಾಲರ್ ಹರಿದು ಬಂತು. ನೂರಾರು ಮಂದಿಯ ಕ್ಯಾನ್ಸರ್ ಚಿಕಿತ್ಸೆಗೆ ಆ ಹಣವನ್ನು ಬಳಸಿ ಎಷ್ಟೋ ಮಂದಿಯ ಕತ್ತಲ ಪ್ರಪಂಚಕ್ಕೆ ಬೆಳಕಾಗಿದ್ದಾನೆ.
ಟೆರ್ರಿ ಫಾಕ್ಸ್ ಬಗ್ಗೆ ಕೇವಲ ಕೆನಾಡದಲಲ್ಲ, ಭಾರತದಲ್ಲೂ ಆತನ ಬಗ್ಗೆ ಪ್ರಶಂಸೆ ಶುರುವಾಗಿದೆ. ಫಾರ್ ಸೀಸನ್ಸ್ ಹೋಟೆಲ್ ಸಮೂಹ ಪ್ರತಿ ವರ್ಷ ಡೆರ್ರಿ ಫಾಕ್ಸ್ ಸ್ಮರಣಾರ್ಥ ಮ್ಯಾರಾಥಾನ್ ಸ್ಪರ್ಧೆಗಳನ್ನು ಪ್ರಾಯೋಜಿಸುತ್ತಿದೆ. ಇತ್ತೀಚಿಗೆ ಬೆಂಗಳೂರಿನಲ್ಲೂ ಸಹ ಫಾಕ್ಸ್ ಮ್ಯಾರಾಥಾನ್ ನಡೆಸಲಾಯಿತು. ಫಾಕ್ಸ್‌ನ ಪ್ರಭಾವ ಎಷ್ಟಿದೆ ಎಂದರೆ, ೧೯೮೭ ರಲ್ಲಿ ಫಾಕ್ಸ್‌ನಿಂದ
ಸೂರ್ತಿಗೊಂಡ ರಿಕ್ ಹ್ಯಾನ್ಸನ್ ಎಂಬ ಪಾರ್ಶ್ವವಾಯು ಪೀಡಿತ ವ್ಯಕ್ತಿ ಗಾಲಿ ಕುರ್ಚಿಯಲ್ಲಿ ಕುಳಿತು, ೨೬ ತಿಂಗಳಲ್ಲಿ ೩೪ ದೇಶಗಳನ್ನು ಸುತ್ತಾಡಿ ೧೦೦ ಕೋಟಿಯನ್ನು ಸಂಗ್ರಹಿಸಿ ಕ್ಯಾನ್ಸರ್ ಚಿಕಿತ್ಸೆಗೆ ನೀಡಿದ್ದಾನೆ.
ಪ್ರೀತಿಯ ಸ್ನೇಹಿತರೆ, ವೈಕಲ್ಯ ಎಂಬುದು ದೇಹಕ್ಕಲ್ಲ ಮನಸಿಗೆ. ವಿಕಲಾಂಗರು (ದಿವ್ಯಾಂಗರು), ಟೆರ್ರಿ ಫಾಕ್ಸ್ ಅಲ್ಲ. ಎಲ್ಲಾ ಇದ್ದೂ ಏನೂ ಮಾಡಲಾಗದೆ ಉಳಿದು ಹೋಗಿರುವ ನಮ್ಮಲ್ಲಿ ಬಹಳಷ್ಟು ಮಂದಿ ವಿಕಲಾಂಗರು (ದಿವ್ಯಾಂಗರು). ಸೋತು ಗೆದ್ದವರು; ಸೋಲಿನ ಅನುಭವ ಸಾವಿಗಿಂತ ಭಯಾನಕವಾಗಿರುತ್ತದೆ. ಗೆಲುವಿನ ಹೊಸ್ತಿಲಲ್ಲಿರುವ ಪ್ರತಿಯೊಬ್ಬರೂ ಸೋಲಿನ ಬಾಗಿಲನ್ನ ತಟ್ಟಲೇಬೇಕು. ಪ್ರತಿಬಾರಿ ಸೋತಾಗಲೂ ಮತ್ತೊಮ್ಮೆ ಗೆದ್ದೇ ಗೆಲ್ಲುವೆ ಎಂಬ ಭರವಸೆ ಮೂಡುವುದು ಸಹಜ. ಎಷ್ಟೋ
ಸಂದರ್ಭದಲ್ಲಿ ಸೋಲಿಗಿಂತ ಹೆಚ್ಚಾಗಿ ಸೋಲುವ ಭಯವೇ ಹೆಚ್ಚು ಸಾಯಿಸುತ್ತದೆ.
ಗೆಲುವಿನ ಜರ್ನಿಯಲ್ಲಿ ಸೋಲು ಸಹಜ. ಸೋಲಿಗೆ ಹೆದರದೆ, ಕಣ್ಣೀರಿಗೆ ಗುಡ್‌ಬೈ ಹೇಳಿದರೆ, ಗೆಲುವು ವೆಲ್ ಕಮ್ ಮಾಡುತ್ತದೆ. ಸಾಧನೆ ಮಾಡಲು ಹೊರಟ ವ್ಯಕ್ತಿಗೆ ದಾರಿ ಉದ್ದಕ್ಕೂ ಬೆಕ್ಕಿಗಿಂತ ಹೆಚ್ಚಾಗಿ ಬೆಕ್ಕಿನ ತರಹದ ಮನುಷ್ಯರೇ ಅಡ್ಡ ಬರುತ್ತಾರೆ. ಬದುಕಿನಲ್ಲಿ ಏನೇ ಆಗಲಿ ಸೋಲಿಗೆ ನಿರಾಶರಾಗಬೇಡಿ. ಒಂದು ನೆನಪಿಡಿ, ನಿಂದಿಸಿದವರ ನಾಲಿಗೆಯಲ್ಲಿ ನಲಿದಾಡುವಂತೆ
ಗೆಲ್ಲಬೇಕು, ಹೀಯಾಳಿಸಿದವರೇ ಸನ್ಮಾನಿಸುವಂತೆ ಗೆಲ್ಲಬೇಕು. ದೂರ ತಳ್ಳದವರೇ ಬಾಕಿ ತಬ್ಬಿಕೊಳ್ಳುವಂತೆ ಗೆಲ್ಲಬೇಕು. ಅವಮಾನವಾದ ಜಾಗದಲ್ಲೇ ಅದ್ಭುತಗಳನ್ನ ಸೃಷ್ಠಿಸಬೇಕು.
ಆ ಹುಡುಗ ವಿಮಾನದ ಪೈಲಟ್ ಆಗಲು ಬಯಸಿದ್ದ. ಆದರೆ ದುರಾದೃಷ್ಠವಶಾತ್ ಪೈಲಟ್ ಪರೀಕ್ಷೆಯಲ್ಲಿ ಫೇಲಾದ. ನಂತರ ಏರೋನಾಟಿಕಲ್ ಇಂಜಿನೀಯರಿಂಗ್ ಅಧ್ಯಯನ ಮಾಡಲು ಹೋದ. ಮುಂದೆ ಅವರು ಕೇವಲ ವಿಮಾನಗಳನ್ನ ಮಾತ್ರವಲ್ಲ ರಾಕೇಟ್‌ಗಳನ್ನ ಹಾರಿಸುವ ಸಂಸ್ಥೆಯ ಮುಖ್ಯಸ್ಥರಾದರು. ಕ್ಷಿಪಣಿಗಳ ಪಿತಾಮಹ ಎಂದು ಕರೆಸಿಕೊಂಡರು. ನಂತರ
ನಾವೆಲ್ಲರೂ ಗೌರವಿಸುವ ಪ್ರೀತಿಸುವ ನಮ್ಮ ರಾಷ್ಟ್ರಪತಿಗಳಾದರು. ಅವರೇ ನಮ್ಮ ಮಾಜಿ ರಾಷ್ಟ್ರಪತಿಗಳಾದ ದಿ|| ಟಾ|| ಎ.ಪಿ.ಜೆ. ಅಬ್ದುಲ್ ಕಲಾಂ ರವರು. ಪದೇ ಪದೇ ಹೇಳಬೇಕೆನಿಸುತ್ತಿದೆ ‘ಮೇರಾ ಭಾರತ್ ಮಹಾನ್’.
ಸೋತರು ಆದರೂ ಗೆದ್ದವರು Success is not fin Aal. Failure is not final It is the courage to Continue that counts.
-Winston Churchil ಬಹಳಷ್ಟು ಮಂದಿ ಸೋಲ್ತಾರೆ, ಸೋತ ನಂತರವು ಗೆಲುವಿನ ಕಡೆ ನಡೆಯುವ ಬಯಕೆ, ಆಸೆ ಎಲ್ಲರಿಗೂ ಇರುತ್ತೆ, ಕೆಲವೇ ಕೆಲವರು ಮಾತ್ರ ಸೋತ ನಂತರವೂ ಗೆಲ್ತಾರೆ. ಸಹಿಸಿಕೊಂಡರೆ ಗೆಲುವು ಸಾಧ್ಯವೆಂದು ಮಾಡ್ತಾರೆ. ಕಷ್ಟದಲ್ಲಿ ಬೆಳೆದ ಹುಡುಗಿಯ ನೋವು, ಯಾತನೆ, ಅನುಭವಿಸುವ ಕಷ್ಟ ಏನೆಂದು ಈಕೆಯ ಕಥೆ ಕೇಳಿದ್ರೆ ಅರ್ಥವಾಗುತ್ತೆ.
ಅವಳ ಹೆಸರು ವಿನ್- ಓಪ್ರ ತನ್ನ ೯ನೇ ವಯಸ್ಸಿನಲ್ಲೇ ಚಿಕ್ಕಪ್ಪರಿಂದ, ಸಹೋದರಿಂದ, ಸ್ನೇಹಿತರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವಳು, ಅವಳ ೧೪ನೇ ವಯಸ್ಸಿಗೆ ಗರ್ಭವತಿಯಾದಳು, ಪರಿಣಾಮ ಗಂಡು ಮಗುವಿಗೆ ಜನ್ಮಕೊಟ್ಟಳು. ಹದಿಹರೆಯದ
ವಯಸ್ಸಿನಲ್ಲಿ ಜನ್ಮ ಕೊಟ್ಟ ಕಾರಣ ಹುಟ್ಟಿದ ಮಗು ಸಾವನ್ನಪ್ಪಿತು. ೧೪ನೇ ವಯಸ್ಸಿಗೆ ಪಡಬಾರದ ಕಷ್ಟಪಟ್ಟು ಬೆಳೆದ ಹುಡುಗಿ ನಂತರ ಅನ್ನಕ್ಕಾಗಿ ಊರೂರು ಅಲೆದಳು, ಬದುಕನ್ನ ಸಾಗಿಸಲು ಹರಸಾಹಸ ಪಟ್ಟಳು.
ಸ್ಥಳೀಯ ಸುದ್ದಿವಾಹಿಯಲ್ಲಿ ಕಷ್ಟಪಟ್ಟ ಕೆಲಸ ಗಿಟ್ಟಿಸಿದಳು. ಅವಳಂದುಕೊಂಡಂತೆ ಕೆಲಸವಿರಲಿಲ್ಲ ಸುದ್ದಿ ವಾಹಿನಿಯ ಮುಖ್ಯಸ್ಥರು ಒಮ್ಮೆ ಓಪ್ರಾಳನ್ನ ಕರೆದು, ನೀನು ಸುದ್ದಿವಾಹಿನಿಗೆ ಕೆಲಸಕ್ಕೆ ಬರಲ್ಲ unfit for television” ಅಂತ ಬೈದು ಕೆಲಸ ದಿಂದ ತೆಗೆದು ಹಾಕಿದರು.
ಸಹಿಸಲಾಗದಷ್ಟು ಅವಮಾನವಾದರೂ ಛಲ ಬಿಡಲಿಲ್ಲ ಚಿಕಾಗೊ ನಗರಕ್ಕೆ ಬಂದು ರೇಟಿಂಗ್ಸ್ ಇಲ್ದ Am Chickago ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡಿದಳು. ಕೆಲವೇ ಕೆಲವು ದಿನಗಳಲ್ಲಿ ಅಮೇರಿಕಾದ ನಂ. ೧. Show ಆಗಿ ಪ್ರಸಿದ್ಧಿಯಾಯಿತು. ನಂತರ ಶೋಗೆ The Oprah Winfrey Show ಎಂದು ಮರುನಾಮಕರಣ ಮಾಡಲಾಯಿತು. ಇವತ್ತು ಅಮೇರಿಕಾದಲ್ಲಿ ಮನೆ ಮಾತಾಗಿದ್ದಾಳೆ ಓಪ್ರ.
ಬಾಲ್ಯದಲ್ಲಿ ಅತ್ಯಾಚಾರಕ್ಕೊಳಗಾಗಿ, ಹದಿಹರೆಯದ ವಯಸ್ಸಿನಲ್ಲೆ ಲೈಂಗಿಕ ದೌರ್ಜನ್ಯಕ್ಕೊಳಪಟ್ಟಳು, ಆದ ಕರಾಳ ಅನುಭವ ಗಳನ್ನ ನುಂಗಿಕೊಂಡು ಗೆಲುವಿನ ಕಡೆ ಏಕಾಗ್ರತೆ ಗಳಿಸಿದಳು. ಮಧ್ಯಮ ವರ್ಗದ ಹುಡುಗಿಯರು ಯಾರಿಗೇನು ಕಮ್ಮಿ ಇಲ್ಲ ಅಂತ ತೋರಿಸಿಕೊಟ್ಟವಳು, ಕಳೆದುಹೋದ ಕೆಟ್ಟದಿನಿಗಳಿಂದ ಮುಂದೇ ಬರುವ ಅದ್ಭುತ ಕ್ಷಣಗಳೇ ಮುಖ್ಯವೆಂದು ಬದುಕಿದ್ದ ವಿನ್‌ಪ್ರೇ ನಿಜಕ್ಕೂ ಛಲಗಾತಿ.