ಚಂಡೀಗಢ: ಶಿರೋಮಣಿ ಅಕಾಲಿದಳದ ಶಾಸಕರೊಬ್ಬರು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಪಕ್ಷದ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಭಾರತದ 15ನೇ ರಾಷ್ಟ್ರಪತಿ ಆಯ್ಕೆ ಮಾಡಲು 776 ಸಂಸದರು ಹಾಗೂ 4,033 ಶಾಸಕರು ಮತ ಚಲಾಯಿಸುವ ಮೂಲಕ ಚುನಾವಣೆ ನಡೆಯುತ್ತಿದೆ.
ಅಕಾಲಿದಳದ ಶಾಸಕ ಮನ್‌ಪ್ರೀತ್ ಸಿಂಗ್ ಅಯಾಲಿ ಫೇಸ್‌ಬುಕ್ ವೀಡಿಯೊ ದಲ್ಲಿ ಚುನಾ ವಣೆ ಬಹಿಷ್ಕರಿಸುವುದಾಗಿ ಹಾಗೂ ರಾಷ್ಟ್ರಪತಿ ಅಭ್ಯರ್ಥಿಗಳಾದ ದ್ರೌಪದಿ ಮುರ್ಮು ಅಥವಾ ಯಶವಂತ್ ಸಿನ್ಹಾ ಅವರಿಗೆ ಮತ ಹಾಕುವುದಿಲ್ಲ ಎಂದು ಘೋಷಿಸಿದ್ದಾರೆ.
“1984 ರ ಸಿಖ್ ನರಮೇಧ”, ಆಪರೇಷನ್ ಬ್ಲೂಸ್ಟಾರ್ ಹಾಗೂ ಸಿಖ್ಖರ ಹಕ್ಕುಗಳ ಉಲ್ಲಂಘನೆಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ನಾನು ಮತ ಹಾಕಲು ಸಾಧ್ಯವಿಲ್ಲ ಎಂದು ಮನ್‌ಪ್ರೀತ್ ಸಿಂಗ್ ಅಯಾಲಿ ಹೇಳಿದರು.
“ಸಿಖ್ ಸಮುದಾಯದ ಭಾವನೆಗಳು, ಪಂಜಾಬ್‌ನ ಸಮಸ್ಯೆಗಳು ಹಾಗೂ ನನ್ನ ಆತ್ಮಸಾಕ್ಷಿಯ ಧ್ವನಿಯನ್ನು ಆಲಿಸಿ, ರಾಷ್ಟ್ರಪತಿ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದಿಲ್ಲ” ಎಂದು ಹೇಳಿದರು.