Saturday, 26th October 2024

ಜನಸ್ನೇಹಿ ಕಾರ್ಯನಿರ್ವಹಣೆಗೆ ಪೊಲೀಸ್ ಇಲಾಖೆ ಬದ್ದ: ಎಡಿಜಿಪಿ ಅಲೋಕ್‌ಕುಮಾರ್

ಜನ ಸಂಪರ್ಕ ಸಭೆ, ಸಾರ್ವಜನಿಕ ಭೇಟಿ ಕಡ್ಡಾಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ

ಕಲಬುರಗಿ: ಜನಸ್ನೇಹಿ ಕಾರ್ಯನಿರ್ವಹಣೆಗಾಗಿಯೇ ಸರಕಾರ ಮತ್ತು ಪೊಲೀಸ್ ಇಲಾಖೆ ಇರೋದು. ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸದಾ ಶ್ರಮಿಸುತ್ತದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ ವಿಭಾಗ) ಅಲೋಕ ಕುಮಾರ ಅವರು ಹೇಳಿದರು.

ನಗರದ ಡಿಎಆರ್ ಪರೇಡ್ ಮೈದಾನದ ಸನ್ಮತಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಜನರ ಹಾಗೂ ಪೊಲೀಸರ ನಡುವೆ ಸಂಪರ್ಕ ಸಾಧಿಸುವ ನಿಟ್ಟಿ ನಲ್ಲಿ ನಿಗದಿತವಾಗಿ ಠಾಣೆಗಳಲ್ಲಿ ಜನ ಸಂಪರ್ಕ ಸಭೆ ಏರ್ಪಡಿಸಬೇಕು. ಪ್ರತಿದಿನ ಸಂಜೆ 5 ರಿಂದ 6 ಗಂಟೆವರೆಗೆ ಸಾರ್ವಜನಿಕರನ್ನು ಅಧಿಕಾರಿಗಳು ಕಡ್ಡಾಯವಾಗಿ ಭೇಟಿಯಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನ ಸಂಪರ್ಕ ನಡೆಸಿದರೆ ಸ್ಥಳದಲ್ಲೇ ಹಲವಾರು ಸಮಸ್ಯೆಗಳನ್ನು ಬಗೆಹರೆಯುತ್ತವೆ. ಜನಸ್ನೇಹಿ ವಾತಾವರಣ ನಿರ್ಮಾಣ ವಾಗುತ್ತದೆ. ಅದಲ್ಲದೇ, ಭೇಟಿ ನೀಡಲು ಸಾರ್ವಜ ನಿಕರಿಗೆ ಸಮಯ ನಿಗದಿಪಡಿಸಿಕೊಂಡರೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು. ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಯಾವುದೇ, ರೌಡಿಗಳನ್ನ ರೌಡಿ ಪಟ್ಟಿಯಿಂದ ಕೈಬಿಡಲಾಗಿಲ್ಲ. ವಿನಾಕಾರಣ ರೌಡಿಗಳನ್ನ ರೌಡಿ ಪಟ್ಟಿಯಿಂದ ಕೈಬಿಟ್ಟರೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಮರಳುಗಾರಿಕೆ ತಡೆಗಟ್ಟಲು ಕೇವಲ ಪೊಲೀಸರಿಂದ ಸಾಧ್ಯವಿಲ್ಲ. ಅದಕ್ಕೆ ಗಣಿಗಾರಿಕೆ, ಕಂದಾಯ, ಆರ್‌ಟಿಓ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದರು.

Read this

ದೆಹಲಿ ಹೈಕೋರ್ಟ್ ಗೆ ಅಗ್ನಿಪಥ್ ಅರ್ಜಿ ವಿಚಾರಣೆ ಹೊಣೆ

http://vishwavani.news/agnipath-plea-hand-over-to-delhi-court/

ರೌಡಿ ಪಡೆ ನಿಗ್ರಹಕ್ಕೂ ಸೂಚನೆ ನೀಡಲಾಗಿದ್ದು, ಗೂಂಡಾ ಕಾಯ್ದೆ ಅಥವಾ ಸಾಧ್ಯವಾದರೆ ಕೋಕಾ ಕಾಯ್ದೆ ಜಾರಿ ತರುವಂತೆ ನಿರ್ದೇಶನ ನೀಡಲಾಗಿದೆ. ಇದಲ್ಲದೇ, ಕಲಬುರಗಿ, ವಿಜಯಪುರ ಭಾಗಗಳಲ್ಲಿ ಅಕ್ರಮ ವೆಪನ್‌ಗಳ ಹಾವಳಿ ಇನ್ನೂ ಇದೆ. ಅಕ್ರಮ ವೆಪನ್‌ಗಳ ಮಟ್ಟಕ್ಕೆ ಎಲ್ಲಾ ರೀತಿಯ ಕ್ರಮಗಳನ್ನ ಕೈಗೊಳ್ಳಲಾಗಿದೆ. ಅಫಜಲಪುರ ಮತ್ತು ಚಡಚಣ ಭಾಗದಲ್ಲಿ ಅಕ್ರಮ ವೆಪನ್ ಹಾವಳಿ ಜಾಸ್ತಿ ಇದೆ. ಅಕ್ರಮ ವೆಪನ್‌ಗಳಿಂದ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ

ಬಂದೂಕನ್ನ ಪರವಾನಿಗೆ ಪಡೆದವರು ಒಬ್ರು, ಬಳಸುತ್ತಿರುವರು ಇನ್ನೊಬ್ಬರು ಆಗಿದ್ದಾರೆ. ಇಂತಹ ಚಟುವಟಿಕೆಗಳನ್ನ ಗಂಭೀರ ವಾಗಿ ಪರಿಗಣಿಸಲಾಗುವುದು ಎಂದರು. ಈ ಹಿಂದೆ ಪಡೆದ ಗನ್ ಲೈಸನ್ಸ್‌ಗಳ ಮರುಪರಿಶೀಲನೆ ನಡೆಸಲುಅಧಿಕಾರಿಗಳಿಗೆ ಅಲೋಕ್‌ಕುಮಾರ್ ಸೂಚಿಸಿದರು.

ಈಶಾನ್ಯ ವಲಯ ಐಜಿಪಿ ಮನೀಷ ಖರ್ಬಿಕರ್, ಎಸ್ಪಿ ಇಶಾ ಪಂತ, ಬೀದರ್ ಎಸ್ಪಿ ಕಿಶೋರ ಬಾಬು, ಡಿಸಿಪಿ ಅಡ್ಡೂರು ಶ್ರೀ ನಿವಾಸ ಸೇರಿದಂತೆ ಮುಂತಾದವರಿದ್ದರು.

ಆಳಂದ ಗಲಭೆ ಪ್ರಕರಣ

144 ಸೆಕ್ಷನ್ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಕೇವಲ ಒಂದೇ ಕೋಮಿನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಮಧ್ಯ ಪ್ರವೇಶಿಸಿ ಕಲಬುರಗಿ ಎಸ್ಪಿ ಇಶಾ ಪಂತ್, ಒಂದೇ ಕೋಮಿನ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಡಿಜಿಪಿ ಅಲೋಕ್‌ಕುಮಾರ್ ಅವರು, ಯಾರು ತಪ್ಪು ಮಾಡುತ್ತಾರೆ ಅವರ ಕೈ ಮಾತ್ರ ನೋಡಬೇಕು, ಅವರ ಮುಖ ನೋಡಬಾರದು ಎಂದು ತಾಕೀತು ಮಾಡಿದರು.

***

ನಗರದಲ್ಲಿ ಅತಿ ಹೆಚ್ಚು ಜನರು ಓಡಾಡುವ ಪ್ರದೇಶಗಳಾದ ಸೂಪರ್ ಮಾರ್ಕೆಟ್, ಕೇಂದ್ರ ಬಸ್ ನಿಲ್ದಾಣ, ತಿಮ್ಮಾಪುರ ವೃತ್ತ, ಹುಮನಾಬಾದ ರಿಂಗ್ ರಸ್ತೆ, ಆಳಂದ ಚೆಕ್ ಪೋಸ್ಟ್ ಸೇರಿದಂತೆ ವಿವಿಧಡೆ ಪೊಲೀಸ್ ಅಧಿಕಾರಿಗಳನ್ನು ಗಸ್ತು ಹೊಡೆಯಲು ಸೂಚಿಸಲಾಗಿದೆ. ಈ ಮೂಲಕ ಟ್ರಾಫಿಕ್ ಜಾಮ್ ನಿಯಂತ್ರಣ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

ಡಾ. ವೈ ಎಸ್. ರವಿಕುಮಾರ್, ನಗರ ಪೊಲೀಸ್ ಆಯುಕ್ತ